ಸಿದ್ಧನಕೊಳ್ಳ ಮಠದ ಭಕ್ತ ಮಲ್ಲೇಶ್ ಬಿರಾದಾರ ಅವರಿಗೆ ತುಲಾಭಾರ ಮಾಡಿದ ಶ್ರೀಗಳುಅದ್ಧೂರಿಯಾಗಿ ಜರುಗಿದ ಸಿದ್ಧಪ್ಪಜ್ಜನ ರಥೋತ್ಸವ ಲಕ್ಷಾಂತರ ಜನರು ಬಾಗಿ…

ಇಳಕಲ್: > ತಾಲೂಕಿನ ಸಿದ್ಧನಕೊಳ್ಳ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಉದ್ಘಾಟನೆ ಸಾಕ್ಷಿಯಾಯಿತು.ಜ.14,15,ಮತ್ತು16 ಮೂರು ದಿನಗಳ ಕಾಲ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಅದ್ಧೂರಿಯಾಗಿ ಜರುಗುವುದು.ಜ.14 ರ ಸಂಜೆ 6 ಕ್ಕೆ ಲಕ್ಷಾಂತರ ಭಕ್ತಾಧಿಗಳ ಸಮುಖದಲ್ಲಿ ಸಿದ್ಧಪ್ಪಜ್ಜನ ರಥೋತ್ಸವ ಜರುಗಿತು.ಇದೇ ಸಂದರ್ಭದಲ್ಲಿಸಿದ್ಧನಕೊಳ್ಳದ ಪರಮ ಭಕ್ತರಾದ ಮಲ್ಲೇಶ ನಿಂಗಪ್ಪ ಬಿರಾದಾರ ಅವರು ಮೂಲತಃವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಜಟ್ಟಗಿ ಗ್ರಾಮದವರು ಇವರು 1992 ರಿಂದ ಗೋವಾದ (ಸಿಪ್ಯಾರ್ಡ ಲಿಮಿಟೆಡ್ ಮಿನಿಸ್ಟರ್ ಆಫ್ ಡಿಫೆಂಡ್ಸ) ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಣೆ ಮಾಡುವುದರ ಜತೆಗೆ ಕೋರೋನಾ ಸಮಯದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದರ ಫಲವಾಗಿ ಜ.14 ರಂದು ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು,ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ಮಲ್ಲೇಶ್ ಬಿರಾದಾರ ಅವರಿಗೆ ಮಠದ ವತಿಯಿಂದ ತುಲಾಭಾರ ಮಾಡಿ ಆಶೀರ್ವಾದ ಮಾಡಿದರು.ಇದೇ ಸಂದರ್ಭದಲ್ಲಿಉಭಯ ಪೂಜ್ಯರು ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿ.ಕಾಶಪ್ಪನವರ ಮತ್ತಿತರರು ವೇದಿಕೆ ಮೇಲಿದ್ದರು.

