ಕಂಪ್ಲಿ ಶಿಬಿರದಿನ್ನಿಯಲ್ಲಿ ದೇವಸ್ಥಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಂದಾಯಾಧಿಕಾರಿಗಳು.

ಬಳ್ಳಾರಿ / ಕಂಪ್ಲಿ: ಪಟ್ಟಣದ ಶಿಬಿರದಿನ್ನೆ (ಮಾರುತಿ ನಗರ) 20ನೇ ವಾರ್ಡಿನ ಬಲಭಾಗದಲ್ಲಿರುವ ಆಂಜಿನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಸ್ಥಳ ಅತೀಕ್ರಮಣವಾಗಿದೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಂದಾಯ ಮತ್ತು ಭೂಮಾಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ದೂರುದಾರ ಎಚ್.ಸಂಜೀವ ಮಾತನಾಡಿ, ಶಿಬರದಿನ್ನೆಯ ಬಲಭಾಗದ ರ‍್ವೆ ನಂ 619ರ 1.59 ಎಕರೆಯಲ್ಲಿ ೭74 ಸೆಂಟ್ಸ್ನಲ್ಲಿ ಆಂಜಿನೇಯ ಸ್ವಾಮಿ ದೇವಸ್ಥಾನ, ಕಲ್ಯಾಣಿ, ತುಳಸಿಕಟ್ಟೆ ಪುರಸಭೆಗೆ ಸೇರಿತ್ತು. ದೇವಸ್ಥಾನ ಸೇರಿದಂತೆ 74ಸೆಂಟ್ಸ್ ಭೂಮಿಯನ್ನು ಪುರಸಭೆ ಅನ್ಯರಿಗೆ ಅಕ್ರಮವಾಗಿ ಮಾರಾಟಾ ಮಾಡಿದ್ದು, ಕಾನೂನು ಬಾಹಿರವಾಗಿದೆ. ಇದನ್ನು ಉಪ ವಿಭಾಗಾಧಿಕಾರಿಗಳು ಸರಿಪಡಿಸುವಲ್ಲಿ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು. ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ್ ತಾಲ್ಲೂಕು ಮೋಜಣಿದಾರ ಅನಿಲ್, ಗ್ರಾಮಾಡಳಿತಾಧಿಕಾರಿ ಎನ್.ಕಾಂತರಾಜ ಪರಿಶೀಲನೆ ಬಳಿಕ ಮಾತನಾಡಿ ಸರ್ವೇ ನಂಬರ್ 619ರ 1.59 ಎಕರೆಯಲ್ಲಿ 60ಸೆಂಟ್ಸ್ ಪೊಲೀಸ್ ವಸತಿ ಗೃಹಗಳಿಗೆ, 25ಸೆಂಟ್ಸ್ ದಾರಿಗಾಗಿ ನೀಡಿದ್ದು, ಉಳಿದ 74ಸೆಂಟ್ಸ್ ಭೂಮಿಯನ್ನು ಹತ್ತು ಜನರ ಹೆಸರಿಗೆ ಉಪ ವಿಭಾಗಾಧಿಕಾರಿಗಳು ಪಟ್ಟಾ ನೀಡಿದ್ದಾರೆ. ಮೂರವರೆ ಸೆಂಟ್ಸ್ ನಲ್ಲಿ ಆಂಜಿನೇಯಸ್ವಾಮಿ ಗುಡಿ, ಒಂದು ಸೆಂಟ್ಸ್ ನಲ್ಲಿ ಧ್ವಜಸ್ತಂಬ, 4ಸೆಂಟ್ಸ್ ಕಲ್ಯಾಣಿ, 1ಸೆಂಟ್ಸ್ ದಾರಿ, 24 ಮುಕ್ಕಾಲು ಸೆಂಟ್ಸ್ ಮನೆಗಾಗಿ ನೀಡಿದ್ದು, 39ಸೆಂಟ್ಸ್ ಖಾಲಿಜಾಗ ಇದೆ. ದಾಖಲೆ ಪ್ರಕಾರ ಅತೀಕ್ರಮಣವಾಗಿಲ್ಲವೆಂದು ಸ್ಪಷ್ಟಪಡಿಸಿದರು.ವರದಿ : ಜಿಲಾನಸಾಬ್ ಬಡಿಗೇರ್
