ಮಕ್ಕಳಿಗೆ ಹಾಗೂ ಪಾಲಕರಿಗೆ ಹಾದಿ ತಪ್ಪಿಸುತ್ತಿರುವ ಶಿಕ್ಷಣ ಇಲಾಖೆ : ಗಣೇಶ್ ರೆಡ್ಡಿ ಆರೋಪ…

ಮಕ್ಕಳಿಗೆ ಹಾಗೂ ಪಾಲಕರಿಗೆ ಹಾದಿ ತಪ್ಪಿಸುತ್ತಿರುವ ಶಿಕ್ಷಣ ಇಲಾಖೆ : ಗಣೇಶ್ ರೆಡ್ಡಿ ಆರೋಪ…

ಕನಕಗಿರಿ ಪಟ್ಟಣದಲ್ಲಿರುವ ತಾಲೂಕಿನಾ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ನಾಮಫಲಕ ಬದಲಾಗಿಲ್ಲ ಮಕ್ಕಳಿಗೂ ಹಾಗೂ ಪಾಲಕರಿಗೂ ಮಾರ್ಗ ತಪ್ಪಿಸುತ್ತಿರುವ ಶಿಕ್ಷಣ ಇಲಾಖೆಯವರು ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಅಧ್ಯಕ್ಷರಾದ ಗಣೇಶ್ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಮತ್ತು ಕನಕಗಿರಿ ತಾಲೂಕ್ ಪಂಚಾಯಿತಿ ಕಳೆದು 4 ವರ್ಷಗಳಿಂದ ಬದಲಾದರೂ ಕೂಡ ಹೆಸರು ಬದಲಾವಣೆ ಮಾಡಿಲ್ಲ ಮತ್ತು ಶಿವರಾಜ್ ಎಸ್ ತಂಗಡಗಿ ಶಾಸಕರು ಹಾಗೂ ಸಚಿವರ ಸ್ವಾ ಕ್ಷೇತ್ರದಲ್ಲಿ ಈ ತರ ಘಟನೆಗಳು ನಾಚಿಕೆಯ ಸುದ್ದಿಯಾಗಿದೆ ಎಂದು ಹೇಳಿದರು.ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಮತ್ತು ಪ್ರತಿವರ್ಷವು ಗಣರಾಜ್ಯೋತ್ಸವ ಸ್ವಾತಂತ್ರ್ಯ ದಿನಾಚರಣೆ ಕನ್ನಡ ರಾಜ್ಯೋತ್ಸವ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನಾಚರಣೆಯು ಇದೆ ಕ್ರೀಡಾಂಗಣದಲ್ಲಿ ಆಚರಿಸಲಾಗುತ್ತದೆ . ಆದರೂ ಕೂಡ ಅಧಿಕಾರಿಗಳು ಗಮನವಹಿಸದೆ ತಮ್ಮ ಬೇಜವಾಬ್ದಾರಿ ದಿಂದ ಕಂಡು ಕಾಣದಂತೆ ನಡೆಯುತ್ತಿದ್ದಾರೆ ಎಂದು ಗಣೇಶ್ ರೆಡ್ಡಿ ಕನಕಗಿರಿ ದೂರಿದರು.ಇನ್ನೂ ತಾಲೂಕು ಆಗಿ ಎಂಟು ವರ್ಷಗಳ ಕಾಲವಾದರೂ ಇನ್ನೂ ಅನೇಕ ತಾಲೂಕಿಗೆ ಸಂಬಂಧಪಟ್ಟಂತ ಕಚೇರಿಗಳು ಆಗಿಲ್ಲ ಕನಕಗಿರಿ ತಾಲೂಕಿಗೆ ಮಲತಾಯಿ ಧೋರಣೆ ಆಗುತ್ತಿದೆ ಎಂದು ತಿಳಿಸಿದರು ನಮ್ಮ ಕ್ಷೇತ್ರದಲ್ಲಿ ಅನೇಕ ಪೌರಾಣಿಕ ದೇವಸ್ಥಾನವಿದ್ದು ಅದರಲ್ಲಿ ಇತಿಹಾಸ ಸುಪ್ರಸಿದ್ಧವಾದ ಕನಕಾಚಲಪತಿ ದೇವಸ್ಥಾನ ವಿದ್ದು ಮತ್ತು ಧಾರ್ಮಿಕ ದತ್ತು ಇಲಾಖೆಗೆ ಸಂಬಂಧಪಟ್ಟಂತ ಅನೇಕ ಐತಿಹಾಸಿಕ ಸ್ಥಳಗಳು ಬದ್ಧತೆ ಹಾಗೂ ಸ್ವಚ್ಛತೆ ಇಲ್ಲದೆ ನಮ್ಮ ಕನಕಗಿರಿ ತಾಲೂಕಿಗೆ ನಾಚಿಕೆಯ ಸಂಗತಿ ಯಾಗಿದೆ ಎಂದು ಗಣೇಶ ರೆಡ್ಡಿ ತಿಳಿಸಿದರು, ಅದಕ್ಕಾಗಿ ಮುಂಚೆ ಬರುವ ದಿನಾಂಕ್ 26.01.2026ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕನಕಗಿರಿ ವಿವಿಧ ಕನ್ನಡ ಸಂಘ ಸಂಸ್ಥೆ ಇನ್ನಿತರ ಸಂಘಟನೆಗಳ ಒಳಗೊಂಡಂತೆ ಇದೇ ಮತ್ತು ಕನಕಗಿರಿ ಬಂದ್ ಕರೆ ಕೊಡಲಾಗಿದೆ ಎಂದು ರೈತ ಸಂಘದ ಅಧ್ಯಕ್ಷರಾದ ಗಣೇಶ್ ರೆಡ್ಡಿ ಕನಕಗಿರಿ ತಿಳಿಸಿದರು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕ ವರದಿಗಾರ:9035332032

Leave a Reply

Your email address will not be published. Required fields are marked *