ಉಪದೇಶದ ಬದಲಾಗಿ ಉದಾರತ್ವದಿಂದ ದೇಶದ ಬದಲಾವಣೆ ಸಾಧ್ಯ : ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ…

ಕಂಪ್ಲಿ : ಉಪದೇಶದ ಬದಲಾಗಿ ಉದಾರತ್ವದಿಂದಾಗಿ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ. ದೇಶದಲ್ಲಿ ಜಾತಿ ಭೇದ ಮರೆತು, ಎಲ್ಲಾರೂ ಒಂದೇ ಎಂಬ ಭಾವನೆಯನ್ನು ಹೊಂದಿದಾಗ ಮಾತ್ರ ಹಿಂದುತ್ವ ಗಟ್ಟಿಗೊಳ್ಳಲಿದೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಪರಮಪೂಜ್ಯ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ಚಾಮಿ ಹೇಳಿದರು. ಪಟ್ಟಣದ ಕೊಟ್ಟಾಲ್ ರಸ್ತೆಯ ಮುರಳಿಕೃಷ್ಣ ರೈಸ್ ಮಿಲ್ ಮುಂಭಾಗದ ಆವರಣದಲ್ಲಿ ನಡೆದ ಹಿಂದೂ ಸಮ್ಮೇಳದ ದಿವ್ಯ ಸಾನಿಧ್ಯವಹಿಸಿ ಆಶೀರ್ವದಿಸಿದ ಮಾತನಾಡಿ, ಹಿಂದೂ ಸಮಾಜ ಒಂದುಗೂಡಬೇಕೆಂದರೆ, ನಾನೊಬ್ಬ ಭಾರತೀಯ ಎಂಬ ಭಾವನ ಮೂಡಿದಾಗ ಮಾತ್ರ ಸಾಧ್ಯ. ಹಿಂದಿನ ಬ್ರಿಟಿಷರ ಆಳ್ವಿಕೆ ಅಸಮಾನತೆಗೆ ಕಾರಣವಾಗಿತ್ತು. ದೇಶದ ಕೆಲವು ನೀತಿಗಳು ಕೆಲವರ ಆಳ್ವಿಕೆಗೆ ಒಳಪಡಬೇಕಾದ ಅನಿವಾರ್ಯತೆ ಉಂಟಾಗಿತ್ತು. ಆದರೆ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಿಂತಿರುವ ಭಾರತ ದೇಶವನ್ನು ಹೊಡೆಯಲು ಸಾಧ್ಯವಿಲ್ಲ ಎಂಬುದನ್ನ ಅರಿತ ಬ್ರಿಟಿಷರು ಈ ನೆಲವನ್ನು ಬಿಟ್ಟು ತೊಲಗಬೇಕಾಯಿತು. ಧಾರ್ಮಿಕ ಕೇಂದ್ರಗಳಲ್ಲಿ ಸಮಾನವಾದ ಭೋಜನವನ್ನು ತರಬೇಕು. ನೆಲದ ಮೇಲಿನ ನಡೆ ಬಹಳ ಭಯನಕವಾಗಿದೆ. ಹಿಂದೂಗಳ ಐಕ್ಯತೆ ಬದಲಾವಣೆಯಾಗಬೇಕಾದರೆ, ಸ್ವಾಮಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ದೇಶದಲ್ಲಿರುವ ಜಾತಿಯತೆಯನ್ನು ಕಿತ್ತಿ ಹೊಗೆಯಿರಿ. ಅಂದಾಗ ಮಾತ್ರ ದೇಶವು ಸುಭದ್ರವಾಗಿ ನಿಂತುಕೊಳ್ಳಲಿದೆ. ಮಕ್ಕಳಿಗೆ ಸಂಸ್ಕಾರ ಬರಬೇಕೆಂದರೆ, ಧಾರ್ಮಿಕ ಮುಖಂಡರಿಗೆ ಸ್ವಾತಂತ್ರ‍್ಯವನ್ನು ಕೊಡಬೇಕು. ದೇಶದ ಭದ್ರತೆಯ ಸಮಾಜ ಕಟ್ಟಲು ನಾವೆಲ್ಲರೂ ಒಂದೇ ಎಂಬ ಭಾವನೆಗಳೊಂದಿಗೆ ಸಾಗಿದಾಗ ಮಾತ್ರ ಹಿಂದುತ್ವ ದೊಡ್ಡಮಟ್ಟದಲ್ಲಿ ಬೆಳೆದಾಗ ಮಾತ್ರ ಇಡೀ ವಿಶ್ವವೇ ಭಾರತದತ್ತ ತಿರಿಗಿ ನೋಡುವಂತಾಗುತ್ತದೆ. ಮೊದಲ ಬಾರಿಗೆ ಹಿಂದೂ ಸಮ್ಮೇಳದೊಂದಿಗೆ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು. ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಮಹಾಸ್ವಾಮಿ ಮಾತನಾಡಿ, ಹಿಂದುತ್ವ ಸಮಾಜ ಕಟ್ಟಲು ಒಳ್ಳೆಯ ಸಮಯ. ಕಂಪ್ಲಿಯಲ್ಲಿ ನಡೆದ ಹಿಂದೂ ಸಮ್ಮೇಳನವು ಪ್ರತಿಯೊಬ್ಬರ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ದೇಶದಲ್ಲಿ ಹಿಂದೂ ಸಮಾಜವು ಒಗ್ಗೂಡಿದಾಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದರು. ವಕ್ತಾರ ಪಾಂಡುರಂಗ ಮಾತನಾಡಿ, ಬ್ರಿಟಿಷರು ಭಾರತದ ಸಂಸ್ಕೃತಿ, ಸಂಸ್ಕಾದ ಬಗ್ಗೆ ಅಪಪ್ರಚಾರ ಮಾಡಿದ್ದರು. ಎಲ್ಲರನ್ನು ಸ್ವೀಕಾರ ಮಾಡುವ ಧರ್ಮವೇ ಹಿಂದೂ ಧರ್ಮವಾಗಿದೆ. ಹಿಂದೂ ಸಮಾಜದ ಬದಲಾವಣೆ ಅತಿ ವೇಗ ಪಡೆದುಕೊಳ್ಳಬೇಕಾಗಿದೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಕ್ಕೆ ನೇರವಾಗಿ ಯುದ್ದ ಮಾಡುವ ತಾಕತ್ತಿಲ್ಲ. ಆದರೆ, ಹಿಂಬದಿಯಿಂದ ಭಾರತ ಹೊಡೆಯುವ ಪಿತೂರಿ ಮಾಡುತ್ತಿವೆ. ಭಾರತದ ಮೇಲೆ ಏನೇ ಪಿತೂರಿ ಮಾಡಿದರೂ ನಡೆಯುವುದಿಲ್ಲ. ಭಾರತ ಶಕ್ತಿಶಾಲಿಯಾದರೆ, ಪ್ರಪಂಚ ಶಾಂತಿಯುತವಾಗಿರಲು ಸಾಧ್ಯ ಎಂದರು.ನಂತರ ಕಲ್ಮಠದ ಅಭಿನವ ಪ್ರಭುಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದೂ ಸಮ್ಮೇಳನದ ಕಂಪ್ಲಿ ಮಂಡಲದ ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ, ಕಾರ್ಯದರ್ಶಿ ಎಂ.ಶ್ರೀನಿವಾಸಶ್ರೇಷ್ಠಿ, ಖಜಾಂಚಿ ಎನ್.ಎಸ್.ಗೋವಿಂದ್, ಕಲ್ಯಾಣ ಚೌಕಿ ಮಠದ ಬಸವರಾಜ ಶಾಸ್ತ್ರಿ, ಸಿದ್ದರಾಮೇಶ್ವರ, ಸಲಹಾ ಸಮಿತಿ ಸದಸ್ಯರಾದ ಡಿ.ವಿ.ಸತ್ಯನಾರಾಯಣ, ವೈ. ವೆಂಕಟೇಶ, ಶ್ರೀನಿವಾಸ, ಕಿಶೋರ್ ರಾಯ್ಕರ್, ಪುಟ್ಟಿ ಸಚಿನ್, ಗುರು ಪ್ರಸನ್ನ ಸೇರಿದಂತೆ ಅನೇಕ ಜನರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್

