ತ್ಯಾಜ್ಯ ವಿಲೇವಾರಿಯಲ್ಲಿ ಗ್ರಾಮ ಪಂಚಾಯತಿ ನಿರ್ಲಕ್ಷ್ಯ…

ಗಂಗಾವತಿ.13 ಸಮೀಪದ ಬಸಾಪಟ್ಟಣದ ಎರಡನೇ ವಾರ್ಡ್ ನ ವಿಎಸ್ಸೆಸ್ಸೆನ್ ಕಾಂಪೌಂಡ್ ಹತ್ತಿರ ತ್ಯಾಜ್ಯ ಸಂಗ್ರಹ ಹೆಚ್ಚುತ್ತಿದ್ದು ಅರ್ನೈಮಲೀಕರಣಕ್ಕೆ ಕಾರಣವಾಗಿದೆ ಮತ್ತು ಸೊಳ್ಳೆ ಗಳ ಕಾಟ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರು ನಿರ್ಲಕ್ಷ್ಯ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ತಿರುಗಾಡುವ ಪ್ರದೇಶವಾಗೊದ್ದು ದಿನದಿಂದ ದಿನಕ್ಕೆ ತ್ಯಾಜ್ಯ ಸಂಗ್ರಹ ಪ್ರಮಾಣ ಮಿತಿ ಮೀರುತ್ತದೆ ತ್ಯಾಜ್ಯ ವಿಲೇವಾರಿಯಲ್ಲಿ ಬಸಾಪಟ್ಟಣ ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯವಹಿಸುತ್ತಿದ್ದು ,ಸಾಕಷ್ಟು ಬಾರಿ ದೂರ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ತ್ಯಾಜ್ಯ ಸಂಗ್ರಹದಿಂದ ವಿಷ ಜಂತುಗಳ ಕಾಟ ಹೆಚ್ಚಾಗಿದ್ದು ರೋಗ ರುಜಿನಗಳು ಹರಡುತ್ತಿವೆ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಬಂದಿದ್ದು ಮತ್ತು ರಾತ್ರಿ ವೇಳೆ ವಿಷ ಜಂತುಗಳ ಕಾಟ ಮಿತಿ ಮೀರಿದೆ ಎರಡು ದಿನಕ್ಕೊಮ್ಮೆಯಾದರೂ ಸ್ವಚ್ಚಗೊಳಿಸಬೇಕಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿ ವಾರ್ಡಿನತ್ತ ಬರುತ್ತಿಲ್ಲ ವಿಲೇವಾರಿಗೆ ಆದ್ಯತೆ ನೀಡಿದಿದ್ದರೆ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ವಾರ್ಡ ಮುಖಂಡ ಕೆ.ಪೀರಸಾಬ್ ಹಾಗೂ ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.

