ಸಮಾಜದ ವಿವಿಧ ಕ್ಷೇತ್ರದಲ್ಲಿ ಲಯನ್ಸ್ ಕ್ಲಬ್ ಕಾರ್ಯ ಅತ್ಯಂತ ಅರ್ಥಪೂರ್ಣ…. ಸಂಸದ ರಾಜಶೇಖರ್ ಹಿಟ್ನಾಳ್.

ಗಂಗಾವತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಅಗತ್ಯ ಇರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದರೆ ಸರಕಾರದಿಂದ ಅಸಾಧ್ಯ ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಆದ ಲಯನ್ಸ್ ಕ್ಲಬ್ ನಿಸ್ವಾರ್ಥ ಸೇವೆಯನ್ನು ಸಲ್ಲಿಸೋದರ ಮೂಲಕ ಸರ್ಕಾರಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು. ಅವರು ಕಂಪ್ಲಿ ರಸ್ತೆಯಲ್ಲಿರುವ ಜಿ ಹಂಪಣ್ಣ ಲಯನ್ಸಕಣ್ಣಿನ ಆಸ್ಪತ್ರೆ ಉದ್ಘಾಟನೆ ಬಳಿಕ ಭಾರತೀಯ ವೈದ್ಯಕೀಯ ಭವನದಲ್ಲಿ ಜರುಗಿದ ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಆರೋಗ್ಯ ಸೇರಿದಂತೆ ಬುದ್ಧಿಮಾಂದ್ಯ ಮಕ್ಕಳ ಶಾಲೆಯನ್ನು ಆರಂಭಿಸುವುದರ ಮೂಲಕ ಹಲವು ದಶಕಗಳಿಂದ ಗಂಗಾವತಿ ಲೈನ್ಸ್ ಕ್ಲಬ್ ಅತ್ಯುತ್ತವಾದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬದಲಾಗಿದ್ದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ. ಮಾಜಿ ಸಂಸದ ಶಿವರಾಮೇಗೌಡ. ಆಸ್ಪತ್ರೆಯ ಚೇರ್ಮನ್ ಟಿ ರಾಮಕೃಷ್ಣ. ಡಾ. ಶಿವಕುಮಾರ್ ಮಾಲಿ ಪಾಟೀಲ್. ಗಾಳಿ ಶಿವಪ್ಪ ಐಲಿ ಜಂಬಣ್ಣ ಸೇರಿದಂತೆ ಮಲ್ಟಿಪಲ್ ಡಿಸ್ಟ್ರಿಕ್ಟ್ ಚೇರ್ಮೆನ್ ಮೋಹನ್ ಕುಮಾರ್ ಡಿಸ್ಟಿಕ್ ಗೌರ್ನರ್ ಜೈಮೋ ಲ್ ನಾಯಕ್. ಡಾಕ್ಟರ್ ಸೋಮರಾಜ ಡಾಕ್ಟರ್ ಚಂದ್ರಪ್ಪ ಆಸ್ಪತ್ರೆಗೆ ಭೂಮಿಯನ್ನು ನೀಡಿದ ಜಿಹಂಪಣ್ಣ ಸೇರಿದಂತೆ ಇತರರು ಜ್ಯೋತಿ ಬೆಳಗಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು….. ಈ ಸಂದರ್ಭದಲ್ಲಿ ಕೊಪ್ಪಳ ಹೊಸಪೇಟೆ ಸಿಂಧನೂರು ವಿವಿಧ ಭಾಗಗಳಿಂದ ಲೈನ್ಸ್ ಕ್ಲಬ್ಬಿನ ಅಧ್ಯಕ್ಷರೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

