ಶಾಸಕ ಡಾ॥ ಎನ್ ಟಿ ಶ್ರೀನಿವಾಸ್ ರವರು ಹೃದಯ ಸಿರಿವಂತರು ಹಾಗೂ ಕರ್ಮಯೋಗಿಯಾಗಿದ್ದಾರೆ ಉಜ್ಜಿನಿ ಸದ್ಧರ್ಮ ಶ್ರೀಗಳು…

ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಸೇವಾನೋಭಾವ ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು. ಉಜ್ಜಿನಿ ಸದ್ಧರ್ಮ ಪೀಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರವರು , ಅಭಿಪ್ರಾಯ ವ್ಯಕ್ತಪಡಿಸಿದರು. ಅ l2 ರಂದು ಉಜ್ಜಿನಿ ಶ್ರೀಕ್ಷೇತ್ರದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ತಮ್ಮ ತಂದೆಯವರು ಹಾಗೂ ಮಾಜಿ ಶಾಸಕರಾದ , ದಿವಂಗತ ಎನ್.ಟಿ ಬೊಮ್ಮಣ್ಣನವರ 3ನೇ ವರ್ಷದ ಪುಣ್ಯ ಸ್ಮರಣಾರ್ಥ ಆಯೋಜಿಸಲಾಗಿದ್ದ. ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ , ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ಮಾತನಾಡುತ್ತಾ ಶಾಸಕರು ಸಮಾಜ ಸೇವೆಯೇ ತಮ್ಮ ಧ್ಯೇಯವೆಂದು ನಂಬಿ , ಬಡವರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ. ಜನ ಸಾಮಾನ್ಯರಿಗೆ ತಮ್ಮ ಆರೋಗ್ಯ ತಪಾಸಣೆಗೆ ಅನುಕೂಲ ಒದಗಿಸಿ ಕೊಡುವುದಲ್ಲದೆ , ಲಕ್ಷಾಂತರ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಹತ್ತಾರು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದೋಪಚಾರ ಚಿಕಿತ್ಸೆ ನೀಡುವ ಮೂಲಕ, ಬಹು ಅಪರೂಪದಲ್ಲಿ ಅಪರೂಪದ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ಜನರ ಹೃದಯದಲ್ಲಿ ಸ್ಥಾನ ಪಡೆದ ದಾನಶೂರರಾಗಿದ್ದಾರೆ , ವಿನಮ್ರತೆ ಮತ್ತು ಹೃದಯ ಶ್ರೀಮಂತಿಕೆಯ ಮೂಲಕ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಶಾಸಕರಾದಾಗಿನಿಂದಲೂ ನಿರಂತರವಾಗಿ , ಕ್ಷೇತ್ರದ ಮೂಲೆ ಮೂಲೆಗೆ ಖುದ್ದು ತೆರಳಿ , ಜನರ ಅಹವಾಲು ಆಲಿಸಿ ಸ್ಪಂಧಿಸುವ ಮೂಲಕ ಕರ್ಮಯೋಗಿ ಆಗಿದ್ದಾರೆಂದು ಭಣ್ಣಿಸಿದರು. *ಫೂಜ್ಯ ತಂದೆಯರ ಮಹದಾಸೆಯಂತೆ ಸೇವೆ – ಡಾ ॥ ಎನ್ ಟಿ ಶ್ರೀನಿವಾಸ್*- ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಮಾತನಾಡಿ , ಯಾವುದೇ ವರ್ಗ, ಪ್ರದೇಶ , ಜಾತಿ , ಧರ್ಮ ಎಂಬ ಭೇದವಿಲ್ಲದೆ. ಎಲ್ಲರಿಗೂ ಉಚಿತವಾಗಿ ಉತ್ತಮ ಆರೋಗ್ಯವನ್ನು ಕಲ್ಪಿಸಿ ಕೊಡುವುದು , ವೈದ್ಯನಾಗಿ ನನ್ನ ಕರ್ತವ್ಯವಾಗಿದ್ದು. ಅದನ್ನು ಜಾತ್ಯಾತೀತ , ಪಕ್ಷತೀತವಾಗಿ ಎಲ್ಲಾ ವರ್ಗದವರಿಗೆ ಯಾವುದೇ ಗಡಿಯ ಇತಿ ಮಿತಿ ಇಲ್ಲದೇ. ಅಂತರ ರಾಜ್ಯದ , ರಾಜ್ಯದ ಹಾಗೂ ನಾಡಿನ ಯಾವುದೇ ಮೂಲೆಯ ಅಪರಿಚಿತ ವ್ಯಕ್ತಿಗೂ ಕೂಡ. ಮಾನವೀಯ ಮೌಲ್ಯಯುತ ಆಧಾರದೊಂದಿಗೆ , ಸೇವಾ ಮನೋ ಭಾವದೊಂದಿಗೆ ಶಿಬಿರ ನಿರ್ವಹಿಸುತ್ತಿದ್ದೇನೆ ಎಂದರು. ನಮ್ಮ ತಂದೆಯವರ ಆಸೆಯಂತೆ , ಕ್ಷೇತ್ರಕ್ಕೆ ಏನಾದರೂಂದು ಅತ್ಯುತ್ತಮ ಕೊಡುಗೆ ನೀಡಬೇಕೆನ್ನುವುದೇ ನನ್ನ ಪರಮ ಗುರಿಯಾಗಿದೆ. ಉಚಿತ ಆರೋಗ್ಯ ಶಿಬಿರಗಳ ಆಯೋಜನೆಗೂ , ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದರು. ನನ್ನ ಕ್ಷೇತ್ರದ ಸಮಸ್ತ ಜನರ ಆರೋಗ್ಯವನ್ನು ಕಾಪಾಡುವುದು , ನನ್ನ ಅತ್ಯಂತ ಮುಖ್ಯ ಜವಾಬ್ದಾರಿಯಾಗಿದೆ ಎಂದರು. *ಹಿರಿಯರಿಗೆ ನಾಗರೀಕ ಸನ್ಮಾನ* – ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್. ಟಿ. ಬೊಮ್ಮಣ್ಣನವರ ಆಪ್ತರಾದ ಅನೇಕ ಹಿರಿಯರಿಗೆ , ವೇದಿಕೆಯಲ್ಲಿ ಶಾಸಕರು ಹಿರಿಯ ನಾಗರೀಕ ಗೌರವ ಸನ್ಮಾನ ಮಾಡಿದರು. ಶಿಬಿರದಲ್ಲಿ ಮುಖಂಡರಾದ ಕೆ.ಎಂ.ಶಶಿಧರ್ ಸ್ವಾಮಿ, ಉಜ್ಜನಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಚೌಡಪ್ಪ , ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು. ವೈದ್ಯಮಿತ್ರರು ಹಾಗೂ ಶಾಸಕರ ಆಪ್ತರು. ಶಾಸಕರ ಅಭಿಮಾನಿಗಳ ಬಳಗದವರು, ಎನ್ ಟಿ ಬೊಮ್ಮಣ್ನನವರ ಅಭಿಮಾನಿ ಬಳಗದವರು. ವಿವಿದ ಜನಪ್ರತಿನಿಧಿಗಳು , ಗ್ರಾಮದ ಹಿರಿಯರು , ವಿವಿದ ಪಕ್ಷಗಳ ಮುಖಂಡರು , ಆರೋಗ್ಯ ಇಲಾಖೆಯ ಸಿಬ್ಬಂದಿಯವರು , ಆಶಾ ಕಾರ್ಯಕರ್ತೆಯರು. ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು. ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಅನೇಕ ಜನರು ಶಿಬರದಲ್ಲಿ ತಪಾಸಣೆ ಮಾಡಿಸಿಕೊಂಡರು , ಹಾಗೂ ಉಚಿತವಾಗಿ ಔಷದೋಪಚಾರ ಸೇವಾ ಸೌಲಭ್ಯ ಪಡೆದರು. *ರಸ್ತೆ ಭೂಮಿ ಕಾಮಗಾರಿ ಭೂಮಿ ಪೂಜೆ*- ನಾಗೇನಹಳ್ಳಿ ಗ್ರಾಮದಿಂದ ಉಜ್ಜಿನಿ ಯಿಂದ ನಾಗೇನಹಳ್ಳಿ ಗ್ರಾಮಕ್ಕೆ ಸಂಪರ್ಕಹ ಕಲ್ಪಿಸುವ , ರಸ್ತೆ ನಿರ್ಮಾಣ (270ಲಕ್ಷ ರೂ ವೆಚ್ಚದ) ಕಾಮಾಗಾರಿಯ ಭೂಮಿಪೂಜೆಯನ್ನು ನೆರವೇರಿಸಿದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
