ಕಿಸ್ಕಿಂದ ಕಿಂಗ್ಸ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ನೇತೃತ್ವದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ….ಡಾ. ಅಶೋಕ್ ದೊಂಬರ್

ಗಂಗಾವತಿ… ದಿವ್ಯಾಂಗ ಕ್ರೀಡಾಪಟುಗಳಿಗೆ ಉತ್ತಮವಾದ ಅವಕಾಶ ಪ್ರೋತ್ಸಾಹ ಮತ್ತು ಅಡಿಯಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಕಿಸ್ಕಿಂದ ಕಿಂಗ್ಸ್ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿ ಗಂಗಾವತಿ. ದಿವ್ಯಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ತುಮಕೂರು. ಕನಸು ನನಸು ಚಾರಿಟೇಬಲ್ ಟ್ರಸ್ಟ್ ಫಾರ್ ದಿವ್ಯಾಂಗರು ಕೊಪ್ಪಳ ಬೋರ್ಡ್ ಆಫ್ ವೀಲ್ ಚೇರ್ ಕ್ರಿಕೆಟ್ ಕಂಟ್ರೋಲ್ ಇನ್ ಕರ್ನಾಟಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ. ಇದೇ ದಿನಾಂಕ 21 ರಿಂದ 24ರ ವರೆಗೆ ಚನ್ನಬಸವ ಸ್ವಾಮಿ ತಾಲೂಕ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ( ಕಿಷ್ಕಿಂದ ಕಪ್ ) ವೀಲ್ ಚೇರ್ ಕ್ರಿಕೆಟ್ ಲೆದರ್ ಬಾಲ್ ಹಾಗೂ ಸಿಟ್ಟಿಂಗ್ ಕ್ರಿಕೆಟ್ ಆಟವನ್ನು ಆಯೋಜಿಸಲಾಗಿದೆ ಎಂದು ಕಿಷ್ಕಿಂದ ಕಿಂಗ್ಸ್ ದಿವಂಗ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಡಾಕ್ಟರ್ ಅಶೋಕ್ ದೊಂಬರ್ ಹೇಳಿದರು. ಅವರು ಬುಧವಾರದಂದು ಪತ್ರಿಕಾ ಭಾಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈಗಾಗಲೇ ದಿವ್ಯಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾವು ಸೇರಿದಂತೆ ಎಲ್ಲಪ್ಪ ವಡ್ಡರಹಟ್ಟಿ ಉಮೇಶ್ ಕಲ್ಮಣಿ. ಸಣ್ಣ ವೀರೇಶ ಅಸಾದ್ ಉಲ್ಲಾ. ಅಬ್ರಹಾಂ ಖಾದರ್ ಪಾಷಾ ಶೇಕ್ಷಾವಾ ಲೀ. ಸೇರಿದಂತೆ ಇತರರು ರಾಜ್ಯಮಟ್ಟದ ವೀಲ್ ಹುಲಿಗೇಶ್ ಕೆರೆಹಳ್ಳಿ ವಿಲ್ ಚೇರ್ ಕ್ರಿಕೆಟ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಇರುವ ದಿವ್ಯಾಂಗರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅತ್ಯಂತ ಉತ್ಸಾಹವನ್ನು ಹೊಂದಿದ್ದು ಈಗಾಗಲೇ ಎಂತಕ್ಕೂ ಅಧಿಕ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ನಿರೀಕ್ಷೆಯಂತೆ 18 ರಿಂದ 20 ತಂಡಗಳು ಭಾಗವಹಿಸುವ ಸಾಧ್ಯತೆ ಇದ್ದು ಆಗಮಿಸುವ ಕ್ರೀಡಾಪಟುಗಳಿಗೆ ವಸತಿ ಉಪಹಾರ ಊಟ ಸೌಲಭ್ಯದೊಂದಿಗೆ ಕಪ್ ನೊಂದಿಗೆ ನಗದು ಸಹಿತ ಪ್ರತ್ಯೇಕವಾಗಿ ಮೂರು ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು. ಇದಕ್ಕೆ ಯಾವುದೇ ಸರ್ಕಾರದಿಂದ ಬಿಡಿ ಕಾಸು ನೆರವು ಇಲ್ಲದೆ ಪಂದಾವಳಿ ಯಶಸ್ವಿಗೆ ದಾನಿಗಳು ಮುಂದಾಗುವಂತೆ ಮನವಿ ಮಾಡಿದರು. ಈ ಒಂದು ಪಂದ್ಯಾವಳಿಯನ್ನು ವಿವಿಧ ಅಂಗವಿಕಲರ ಸಂಸ್ಥೆ ಜಿಲ್ಲಾ ಮಟ್ಟದ ಸಹಕಾರದಿಂದ ಜರುಗಲಿದ್ದು ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ ಸಣ್ಣ ವೀರೇಶ ಅಬ್ರಹಾಂ ಪುಣ್ಯ ಗೌಡ ಯಮನೂರಪ್ಪ. ನಾಗರಾಜ ರೇವಣಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

