ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಅಧಿಕಾರಿಗಳ ವಿರುದ್ಧ ಅಂಜನಾದ್ರಿಯಲ್ಲಿ ಪ್ರತಿಭಟನೆ…

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಅಧಿಕಾರಿಗಳ ವಿರುದ್ಧ ಅಂಜನಾದ್ರಿಯಲ್ಲಿ ಪ್ರತಿಭಟನೆ…

ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದ ಹನುಮಜನ್ಮ ಸ್ಥಳ ಅಭಿವೃದ್ಧಿ ಪಡಿಸಬೇಕು ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕೆಂದು ದಲಿತಪರ ಸಂಘಟನೆ ಮತ್ತು ರೈತ ಪರ ಸಂಘಟನೆಯ ಕನ್ನಡಪರ ಸಂಘಟನೆಯ ಹೋರಾಟಗಾರರು ಇಂದು ಅಂಜನಾದ್ರಿ ಪರ್ವತದ ಮುಂಬಾಗ ಪ್ರತಿಭಟನೆ ಮಾಡಿದರು ಗಂಗಾವತಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಕಿಷ್ಕಿಂದ ಅಂಜನಾದ್ರಿ ಪರ್ವತಕ್ಕೆ ಬೈಕ್ ರ್ಯಾಲಿ ಮೂಲಕವಾಗಿ ತೆರಳಿ ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾದರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಕೂಡ ಮೂರು ಗಂಟೆಗಳ ಕಾಲ ತಡವಾಗಿ ಅಧಿಕಾರಿಗಳು ಬಂದರು ಈ ಸಂದರ್ಭದಲ್ಲಿ ಹೋರಾಟಗಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಂತಹ ಘಟನೆ ಜರುಗಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣೇಗೌಡ ಅವರು ತಾವು ಸಾರ್ವಜನಿಕರ ಪರವಾಗಿ ಮತ್ತು ಅಂಜನಾದ್ರಿ ಪರ್ವತದ ಭಕ್ತಾದಿಗಳಿಗೆ ನೀಡಬೇಕಾದ ಸೌಕರ್ಯಗಳನ್ನು ಏನು ನೀಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಈ ಸಂದರ್ಭದಲ್ಲಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಸುಪ್ರೀಂಕೋರ್ಟ್ ವಿದ್ಯಾದಾಸ್ ಬಾಬಾ ಅವರಿಗೆ ದೇವಸ್ಥಾನದಲ್ಲಿ ಆರತಿ ಮಾಡಲು ಮಾತ್ರ ಅವಕಾಶ ಕೊಟ್ಟಿದೆ ಮತ್ತು ಓರ್ವ ಸಾಯೋತನಕ್ ಮತ್ತು ಅವರು ಉಳಿದುಕೊಳ್ಳಲು ಒಂದು ಕೊಠಡಿಯ ವ್ಯವಸ್ಥೆ ಮಾಡಿಕೊಡಿ ಎಂದು ಮಾತ್ರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅವರೇ ಸ್ವತಹ ಮೊದಲಿನಿಂದಲೂ ಇದ್ದಾರೆ ಹಾಗಾಗಿ ಅವರು ನಮ್ಮಲ್ಲಿ ಯಾವ ಅವಕಾಶಗಳನ್ನು ಕೂಡ ಕೇಳಿಲ್ಲ ಮತ್ತು ಪೂಜಾ ಸಾಮಗ್ರಿ ಮತ್ತು ಅವರ ವೇತನದ ಕುರಿತು ಅವರು ನಮಗೆ ಯಾವುದು ಮನವಿ ಮಾಡಿಕೊಂಡಿಲ್ಲ ಆದಕಾರಣ ನಾವು ಅವರಿಗೆ ಸೌಕರ್ಯಗಳು ನೀಡಿಲ್ಲ ಹೆಚ್ಚಿನ ಮಾಹಿತಿಗಾಗಿ ಉನ್ನತ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಹೋರಾಟಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಲೇ ಇಲ್ಲ ಪ್ರತ್ಯೇಕವಾಗಿ ಅಂಜನಾದ್ರಿ ಪರ್ವತದಲ್ಲಿ ಆರತಿ ತಟ್ಟೆ ಏಕೆ ಹೊರಗಡೆ ಇಡುತ್ತಿಲ್ಲ ಎಂದು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಂತಹ ಭಕ್ತಾದಿಗಳು ಹೋರಾಟಗಾರರ ಜೊತೆಯಲ್ಲಿ ಪ್ರಶ್ನೆ ಮಾಡಿದರು ನಂತರ ಅಧಿಕಾರಿಗಳು ಮೌನಕ್ಕೆ ಜಾರಿ ತಮ್ಮ ಕೊಠಡಿ ಗೆ ತೆರಳಿದರು ಈ ಸಂದರ್ಭದಲ್ಲಿ ಹೋರಾಟಗಾರರು ಇದೆ ತಿಂಗಳು 17ರಂದು ರಾಜ್ಯದ 31 ಜಿಲ್ಲೆಗಳಿಂದ ಅಂಜನಾದ್ರಿ ಆಂಜನೇಯನ ಭಕ್ತಾದಿಗಳು ಆಗಮಿಸಿ ಅನಿರ್ದಿಷ್ಟಾವಧಿಅಂಜನಾದ್ರಿ ಪರ್ವತದಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಅಧಿಕಾರಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಇರಬೇಕು ಅಂಜನಾದ್ರಿ ಭಕ್ತಾದಿಗಳು ಕೇಳುವಂತಹ ಪ್ರಶ್ನೆಗಳಿಗೆ ನೇರವಾಗಿ ಉತ್ತರವನ್ನು ನೀಡಬೇಕೆಂದು ಹೋರಾಟಗಾರರು ಧ್ವನಿ ಎತ್ತಿದರು ಎಂಟು ವರ್ಷಗಳ ಕಾಲ ಅಂಜನಾದ್ರಿ ಪರ್ವತ ಸರ್ಕಾರದಿಂದ ಅಭಿವೃದ್ಧಿ ಆಗಿರುವ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು

ಈ ಸಂದರ್ಭದಲ್ಲಿ ಹಂಪೇಶ ಜಿ. ಹರಿಗೋಲ್, ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕರು, ರೈತ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಕೆಸರಟ್ಟಿ ಹನುಮಂತಪ್ಪ ಹ್ಯಾಟಿ ವಿಭಾಗಿ ಸಂ. ಸಹ ಚಾಲಕರು, ಜಂಬಣ್ಣ ಸಿಂಗ್ರಿ, ಮಹಿಳಾ ಹೋರಾಟಗಾರತಿ ಕಾವ್ಯವಿಭಾಗ ಕಾರ್ಯದರ್ಶಿ, ಯಮನೂರಪ್ಪ ನಾಯಕ ಹುಲಿಹೈದರ್, ಕೊಪ್ಪಳ ಜಿಲ್ಲಾ ಖಜಾಂಚಿ, ಬೆಟ್ಟಪ್ಪ ಹಿರೇ ಕುರುಬರು ಗಂಗಾವತಿ ತಾಲೂಕ ಸಂಚಾಲಕ, ಗೋವಿಂದಪ್ಪ ಬಿವಿ ಶ್ರೀನಿವಾಸ್ ಸೇರಿದಂತೆ ಅನೇಕ ಹೋರಾಟಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *