ಜಿಲ್ಲಾ ಪಂಚಾಯಿತಿಯ ಚುನಾವಣೆಮರಳಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಮುಸಾಲಿ..

ಜಿಲ್ಲಾ ಪಂಚಾಯಿತಿಯ ಚುನಾವಣೆಮರಳಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಮುಸಾಲಿ..

ಗಂಗಾವತಿ ಫೆ.13:ಮುಂಬರುವ ಜಿಲ್ಲಾ ಪಂಚಾಯಿತಿಯ ಚುನಾವಣೆಯ ಚಟುವಟಿಕೆಗಳು ವಿವಿಧ ಪಕ್ಷಗಳಲ್ಲಿ ನಿಧಾನವಾಗಿ ತಾಲೀ ಮು ಆರಂಭವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಕಾಂಕ್ಷಿ ಅಭ್ಯರ್ಥಿಗಳ ಹೆಸರು ಒಂದೊಂ ದಾಗಿ ತೇಲಿ ಬರುತ್ತಿವೆ.ಗಂಗಾವತಿ ತಾಲ್ಲೂಕಿನ ಪ್ರಮುಖ ಕ್ಷೇತ್ರವಾಗಿರುವ ಮರಳಿ ಜಿಲ್ಲಾ ಪಂಚಾಯಿತಿಯಿಂದ ಟಿಕೆಟ್ ಬಯಸಿ ಬಿಜೆಪಿಯಲ್ಲಿ ಹೆಚ್ಚು ಪೈಪೋಟಿ ಇದ್ದು, ಈ ಬಾರಿ ಬಿಜೆಪಿಯಿಂದ ನಿಕಟ ಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ ವಕೀಲರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹೆಚ್ಚು ಹರಿದಾಡುತ್ತಿದೆ. ಈಗಾಗಲೆ ಗಂಗಾವತಿ ತಾಲ್ಲೂಕು ವಕೀಲರ ಸಂಘದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸಾಲಿ, ಬಹುತೇಕ ವಕೀಲರ ವಿಶ್ವಾಸಗಳಿಸಿದ್ದಾರೆ. ಸ್ನೇಹಜೀವಿಯಾಗಿ ಗುರುತಿಸಿ ಕೊಂಡಿರುವ ಮುಸಾಲಿ, ಮರಳಿಯಿಂದ ಸ್ಪರ್ಧಿ ಸುವುದಾ ದರೆ ಸ್ವಾಗತಿಸುತ್ತೇವೆ ಎಂದು ಸ್ಥಳೀಯ ಬಿಜೆಪಿ ಕಾರ್ಯ ಕರ್ತರು ಹೇಳಿದ್ದಾರೆ.

Leave a Reply

Your email address will not be published. Required fields are marked *