ವಾಸ್ತು ತಜ್ಞ ಡಾ, ಮಂಜುನಾಥ ಕುರುಗೋಡು ಅವರಿಗೆ ಕುರುಹಿನ ಶೆಟ್ಟಿ ಸಮಾಜದ ಮಹಿಳಾ ಮಂಡಳದಿಂದ ಅದ್ದೂರಿ ಸನ್ಮಾನ,,,,,,,

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕುರುಹಿನ ಶೆಟ್ಟಿ ಸಮಾಜದ ಪ್ರತಿಷ್ಠಿತ ಕುರುಗೋಡು ಮನೆತನದ ವಾಸ್ತು ತಜ್ಞರಾಗಿದ್ದ ದಿವಂಗತ ಕುರುಗೋಡು ಸಣ್ಣ ಬಸಣ್ಣನವರ ಪುತ್ರರಾದ ವಾಸ್ತು ತಜ್ಞ ಮಂಜುನಾಥ್ ಕುರುಗೋಡು ಅವರಿಗೆ ವಾಸ್ತು ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆಯಲ್ಲಿ ಗಂಗಾವತಿಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕುರುಹಿನ ಶೆಟ್ಟಿ ಸಮಾಜದ ಮಹಿಳಾ ಮಂಡಳದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಲಾಯಿತು,,,,, ಅಮೆರಿಕದ ವಿಸ್ಡಮ್ ಎ ಎಸ್ ಐ ಎ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಅಕಾಡೆಮಿ ಅವರು ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ್ ಕುರುಗೋಡು ಅವರಿಗೆ ವಾಸ್ತು ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ , ತಮಿಳುನಾಡಿನ ಹೊಸೂರು ಪಟ್ಟಣದಲ್ಲಿ ಯುನಿವರ್ಸಿಟಿಯ ಸಭಾಂಗಣದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ,,,,,,,,,,,,,,,, ಕುರುಹೀನ ಶೆಟ್ಟಿ ಸಮಾಜದಲ್ಲಿ ವಾಸ್ತು ಕ್ಷೇತ್ರದ ಸಾಧನೆಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆಯುವ ಮೂಲಕ ವಾಸ್ತು ತಜ್ಞ ಡಾಕ್ಟರ್ ಮಂಜುನಾಥ ಕುರುಗೋಡು ಅವರು ನಮ್ಮ ಸಮಾಜಕ್ಕೆ ಗೌರವ ತಂದಿದ್ದಾರೆ ಎಂದು ಎಂದು ಕುರುಹಿನ ಶೆಟ್ಟಿ ಸಮಾಜದ ಮಹಿಳಾ ಮಂಡಳದ ಗೌರವಾಧ್ಯಕ್ಷರಾಗಿರುವ ಶ್ರೀಮತಿ ಸರೋಜಮ್ಮಮಲ್ಲಿಕಾರ್ಜುನ ನಾಗಪ್ಪ ಹಾಗೂ ಅಧ್ಯಕ್ಷರಾಗಿರುವ ಶ್ರೀಮತಿ ಸುನಿತಾ ತಿಪ್ಪಣ್ಣ ಶಾವಿ ಅವರುಗಳು ತಿಳಿಸಿದರು,,,,,, ಹಿರಿಯರಾಗಿರುವ ವಾಸ್ತುತಜ್ಞರಾಗಿದ್ದ ದಿವಂಗತ ಕುರುಗೋಡು ಸಣ್ಣ ಬಸವಣ್ಣನವರ ಜೀವನ ಚರಿತ್ರೆ ಮತ್ತು ಸರ್ವ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ಆಧರಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವುದು ತುಂಬಾ ಸಂತೋಷದಾಯಕ ಸಂಗತಿಯಾಗಿದ್ದು ಕರ್ನಾಟಕ ರಾಜ್ಯದ ಪ್ರಸಿದ್ಧ ಸಾಹಿತಿಗಳಾದ ಎಸ್‌ವಿ ಪಾಟೀಲ್ ಗುಂಡೂರ ಅವರು ಸ್ಮರಣ ಸಂಚಿಕೆಯನ್ನು ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀಮತಿ ಸರೋಜಮ್ಮ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಶ್ರೀಮತಿ ಸುನಿತ ತಿಪ್ಪಣ್ಣ ಶಾವಿಯವರು ತಿಳಿಸಿದರು,,,,,,, ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ ಡಾಕ್ಟರ್ ಮಂಜುನಾಥ ಕುರುಗೋಡ ಮತ್ತು ಶ್ರೀಮತಿ ನಾಗರತ್ನ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿ ಅಭಿನಂದಿಸಲಾಯಿತು,,,,,,,, ಸನ್ಮಾನ ಕಾರ್ಯಕ್ರಮದಲ್ಲಿ ಕುರುಹಿನ ಶೆಟ್ಟಿ ಸಮಾಜದ ಮಹಿಳಾ ಮಂಡಳದ ಪ್ರಮುಖ ಸದಸ್ಯರುಗಳಾಗಿರುವ ಶ್ರೀಮತಿ ಟಿ ಎನ್ ಆರ್ ಶಶಿಕಲಾ ಶ್ರೀಮತಿ ಕನಕದುರ್ಗ ಶ್ರೀಮತಿ ವಿದ್ಯಾ ಏಳು ಬಾವಿ ಶ್ರೀಮತಿ ತಟ್ಟಿ ವಾಣಿ ಶ್ರೀಮತಿ ಸರೋಜಾ,,,,,,,,,,ಕೆ ಶಾಂತ, ಶ್ಯಾಮಲಾ,,,,,,,,,,,,,,,,,,,,,,,ಬಿ ಸಿದ್ದಮ್ಮ ನೇತ್ರಾ,,,,,,,,,,,,,,,,,,,,,,,,,,,,,,ಬಿ ಲಕ್ಷ್ಮಿದೇವಿ ಶ್ರೀಮತಿ ಜ್ಯೋತಿ ಮಂಜುನಾಥ ಐಲಿ ಹಾಗೂ ಶ್ರೀಮತಿ ಸಿದ್ದಮ್ಮ ಮಲ್ಲಿಕಾರ್ಜುನ ಮಾಂತ ಗೊಂಡ ಹಾಗೂ ಮಹಿಳಾಮಂಡಳದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡು ಮಾತನಾಡಿದರು,,,,,,,,,,

