12ರಂದು ಜಿ.ಹಂಪಣ್ಣ ಹೊಸಕೆರ ಲಯನ್ಸ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ….ಹಲವು ದಶಕಗಳ ಕನಸು ನನಸು…. ಎಂ ಜೆ ಎಫ್ ಲ. ಟಿ ರಾಮಕೃಷ್ಣ….

12ರಂದು ಜಿ ಹಂಪಣ್ಣ ಹೊಸಕೆರ ಲಯನ್ಸ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ….ಹಲವು ದಶಕಗಳ ಕನಸು ನನಸು…. ಎಂ ಜೆ ಎಫ್ ಲ. ಟಿ ರಾಮಕೃಷ್ಣ….


ಗಂಗಾವತಿ.. ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಗಂಗಾವತಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಹಲವು ದಶಕಗಳ ಕನಸು ದಿನಾಂಕ 12 ರಂದು ನೆರವೇರಿಯಲ್ಲಿದ್ದು ಜಿ ಹಂಪಣ್ಣ ಹೊಸಕೆರ ಲಯನ್ಸ್ ಕಣ್ಣಿನ ಆಸ್ಪತ್ರೆ ಕಂಪ್ಲಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ ಎಂದು ಲಯನ್ಸ್ ಕಣ್ಣಿನ ಆಸ್ಪತ್ರೆ ಸಮಿತಿಯ ಅಧ್ಯಕ್ಷ ಎಂ ಜಿ ಎಫ್ ಲ ಟಿ ರಾಮಕೃಷ್ಣ ಹೇಳಿದರು. ಅವರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಗಂಗಾವತಿ ಹಿರಿಯ ಸದಸ್ಯರಾದ ಡಾಕ್ಟರ್ ಜಿ ಚಂದ್ರಪ್ಪ ಡಾಕ್ಟರ ಸೋಮರಾಜ್ ಡಾಕ್ಟರ ಮಾಧವ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನೂತನ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಸಮಾಜದಲ್ಲಿನ ಬಡವರು ವಯಸ್ಸಾದವರು ಪಡೆದುಕೊಳ್ಳಬೇಕೆಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಮಾತನಾಡಿ ಕಳೆದ ಹಲ ವು ವರ್ಷಗಳಿಂದ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಪಿಯುಸಿ ಕಾಲೇಜು. ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಶಿಬಿರ. ಗಳನ್ನು ನಡೆಸುತ್ತಾ ಬರಲಾಗಿದ್ದು. ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಜಿ ಚಂದ್ರಪ್ಪ ಡಾಕ್ಟರ. ಸೋಮರಾಜ್ ಶಿವಪ್ಪ ಗಾಳಿ ಜಂಬಣ್ಣ ಐಲಿ. ಪ್ರಾಚಾರ್ಯ ಅಭಿಷೇಕ್. ಶೇಷ ಗಿರಿ ರಾವ್ ಇತರರು ಮಾತನಾಡಿದರು.

Leave a Reply

Your email address will not be published. Required fields are marked *