ಗ್ರಾಮದಲ್ಲಿ ಮಧ್ಯಪಾನ ನಿಷೇಧಕ್ಕೆ ಸರ್ವಾನುಮತಮದ್ಯ ಮಾರಾಟ ಅಂಗಡಿಗಳಿಗೆ ಶನಿವಾರದವರೆಗೆ ಗಡುವು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಮಧ್ಯಪಾನ ನಿಷೇಧ ಕುರಿತು ಗ್ರಾಮಸ್ಥರು ಹಾಗೂ ಗ್ರಾಮ ಹಿರಿಯರನ್ನು ಒಳಗೊಂಡ ವಿಶೇಷ ಸಭೆ ಇಂದು ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಮಧ್ಯಪಾನದಿಂದ ಉಂಟಾಗುತ್ತಿರುವ ಕುಟುಂಬ ಕಲಹ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಸಂಕಷ್ಟ ಹಾಗೂ ಯುವಜನರ ಭವಿಷ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಸಲಾಯಿತು.ಸಭೆಯ ಸರ್ವಾನುಮತ ನಿರ್ಣಯದಂತೆ, ಗ್ರಾಮದಲ್ಲಿ ಇನ್ನು ಮುಂದೆ ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಲಾಗಿದ್ದು, ಗ್ರಾಮದಲ್ಲಿ ಮದ್ಯ ಮಾರಾಟ ನಡೆಸುತ್ತಿರುವ ಅಂಗಡಿಗಳಿಗೆ ಈ ಶನಿವಾರದವರೆಗೆ ಸ್ವಯಂಪ್ರೇರಿತವಾಗಿ ಮಾರಾಟ ನಿಲ್ಲಿಸುವಂತೆ ಗಡುವು ನೀಡಲಾಗಿದೆ.ಗ್ರಾಮದ ಶಾಂತಿ, ಸಾಮಾಜಿಕ ನೆಮ್ಮದಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿರ್ಣಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನಿರ್ಣಯವನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.ಈ ಸಂದರ್ಭದಲ್ಲಿ ಊರಿನ ಹಿರಿಯರು ಮಹಿಳೆಯರು ಮಕ್ಕಳು ಯುವಕರು ಪಾಲ್ಗೊಂಡಿದ್ದರು.

