ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವಮಾನವ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ..

ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವಮಾನವ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ..

ಯುವಕರ ಕಣ್ಮಣಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆಯ 32 ನೇ ವಾಷಿ೯ಕೋತ್ಸವವನ್ನು ಆನಂದೋತ್ಸವ ಶಿಷಿ೯ಕೆ ಅಡಿಯಲ್ಲಿ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಕಾಯ೯ಕ್ರಮದಲ್ಲಿ ಶಾಲೆಯ ಕಾಯ೯ದಶಿ೯ಗಳು ಜಗನ್ನಾಥ್ ಆಲಂಪಲ್ಲಿ ಮಾತನಾಡಿ ಇಂದಿನ ಯುವಕರು ದೇಶದ ಸಂಪತ್ತು ಉತ್ತಮವಾದ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯವಶ್ಯಕವಾಗಿ ಬೇಕಾಗುತ್ತದೆ.. ಯುವಕರು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು ಎಂದು ಹೇಳಿದರು.. ವಿದ್ಯಾರ್ಥಿಗಳಿಂದ ಆಹಾರ ಮೇಳ ಆಯೋಜಿಸಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಸಹಕರಿಸಿದ್ದರು.ಆಹಾರ ಮೇಳದಲ್ಲಿ ವಿವಿಧ ರೀತಿಯ ಖಾದ್ಯಗಳು ಮಾಡಿ ವಿದ್ಯಾರ್ಥಿಗಳು ಮಾರಾಟ ಮಾಡಿ ಸಂತಸ ಪಟ್ಟರು.ಪಾಲಕರು ಆನಂದದಿಂದ ಉಲ್ಲಾಸ ಉತ್ಸಾಹದಿಂದ ಆಹಾರ ಮೇಳ ದಲ್ಲಿ ಮಕ್ಕಳ ಮಾಡಿದ ಆಹಾರ ನನ್ನು ಸೇವಿಸಿ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರು ಚೆನ್ನ ಪಾಟಿ ಪ್ರಭಾಕರ.ಉಪದ್ಯಾಕ್ಷರು.ಶ್ರೀಮತಿ ಪ್ರಿಯಾ ಕುಮಾರಿ . ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾಕ್ಟರ್ ಪವನ್ ಸಾಯಿ .ಡಾ .ಶಿವನಾರಾಯಣ. ಇಬ್ರಾಹಿಂ.ಶಾಲೆಯ ಸಂಸ್ಥಾಪಕರು ಪಾಥ೯ಸಾರಥಿ ಶ್ರೀಮತಿ ರಂಜನಿ ಆಲಂಪಲ್ಲಿ.ಕೃಷ್ಣಮೂತಿ೯ ಆಲಂಪಲ್ಲಿ . ವೆಂಕಟಕೃಷ್ಣ ಪೊಲಿನ . ಮತ್ತು ಶಾಲೆಯ ಶಿಸ್ತು ಸಂಯಮಕ್ಕೆ ಹೆಸರಾಗಿರುವ ಮುಖ್ಯೋಪಾಧ್ಯಾಯರು ಶ್ರೀಮತಿ ಶಾರೂನ್ ಕುಮಾರಿ.ಮತ್ತು ಶಾಲಾ ಶಿಕ್ಷಕಿ/ಶಿಕ್ಷಕರು ಪಾಲ್ಗೊಂಡು ಆನಂದೋತ್ಸವ ಕಾಯ೯ಕ್ರಮದಲ್ಲಿ ಆನಂದ ಪಟ್ಟರು.

Leave a Reply

Your email address will not be published. Required fields are marked *