ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ ಕಬ್ಬು ದೀಪುತ್ಸವದ ಸಂಭ್ರಮ….

ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ ಕಬ್ಬು ದೀಪುತ್ಸವದ ಸಂಭ್ರಮ….

ಗಂಗಾವತಿ… ಹಿರೇ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜ ಬಾಂಧವರ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರದಂದು ಧನುರ್ಮಾಸ ಆಚರಣೆ ಪ್ರಯುಕ್ತ ಶ್ರೀ ಕನ್ನಿ ಕಾ ಪರಮೇಶ್ವರಿ ದೇವಿಗೆ ಕಬ್ಬು ಮೂಲಕ ಡಿಪೋತ್ಸವವನ್ನು ನೆರವೇರಿಸಿ ಸಂಭ್ರಮಿಸಿದರು. ಬೆಳಿಗ್ಗೆ ಮಹಾ ಸಂಕಲ್ಪ ದೇವಿಗೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ಹಾಗೂ ಪುಷ್ಪಾರ್ಚನೆ ಸೇರಿದಂತೆ ವಾಸವಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಮಾಜ ಮಹಿಳೆಯರು ದೀಪ ಬೆಳಗಿಸಿ ಭಜನೆ ಹಾಡುಗಳು ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ದ ರೋಜಿ ನಾಗರಾಜ್ ಶೆಟ್ಟಿ ಮಾತನಾಡಿ. ಲೋಕಕಲ್ಯಾಣಾರ್ಥಕವಾಗಿ ಸರ್ವರು ಸುಖ ಶಾಂತಿ ಸಮೃದ್ಧಿ ಕರುಣಿಸುವಂತೆ ಹಾಗೂ ಪ್ರತಿಯೊಬ್ಬರು ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರಾರ್ಥಿಸಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದು ಹೆಸರು. ದೇವಸ್ಥಾನದ ಅರ್ಚಕರು ಸೇರಿದಂತೆ ಸಮಾಜದ ಪುರೋಹಿತರಾದ ಗುರು ಭೀಮ್ ಅವರು ಧಾರ್ಮಿಕ ಬುದ್ಧಿ ವಿಧಾನಗಳನ್ನು ಸಾಂಗತವಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗೋಪಾಲ ಶೆಟ್ಟಿ. ಡಿ ರಾಜಕುಮಾರ್ ಹನುವಾಳ ಚಂದ್ರಶೇಖರ್. ಸತ್ಯನಾರಾಯಣ ಶೆಟ್ಟಿ. ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ನರಸಿಂಹ ಶೆಟ್ಟಿ. ಜಿ ಆರ್ ಎಸ್ ರಾಘವೇಂದ್ರ. ವಾಣಿ. ರುಕ್ಮಿಣಿ ಬಾಯಿ. ಸೇರಿದಂತೆ ಅಪಾರ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಬಳಿಕ ತೀರ್ಥ ಪ್ರಸಾದ ಜರುಗಿತು.

Leave a Reply

Your email address will not be published. Required fields are marked *