ನಗರದಲ್ಲಿರುವ ಹಸುಗಳನ್ನು ಗೋಶಾಲೆಗೆ ಹಾಕುವ ಬಗ್ಗೆ. ..

ಗಂಗಾವತಿ ನಗರದಲ್ಲಿ ಹಸುಗಳು (ಗೋವುಗಳು )ಅಧಿಕ ಸಂಖ್ಯೆಯಲ್ಲಿ ಅನಾಥವಾಗಿದ್ದು, ಅವು ಹಗಲಿನ ಸಮಯದಲ್ಲಿ ನಗರದ ಬೀದಿ ಬೀದಿಗಳಲ್ಲಿ ತಿರುಗಾಡಿ ಯಾವ ಆಹಾರ ತಿನ್ನುತ್ತಾವೇಯೋ ಅಥವಾ ಪ್ಲಾಸ್ಟಿಕ್, ಮತ್ತು ಕಸ ಕಡ್ಡಿ ತಿನ್ನುತ್ತಾವೇಯೋ ತಿಳಿಯದು. ಉಪವಾಸ ದಿಂದಲೂ ಇರಬಹುದು.ರಾತ್ರಿ ಯಾಗುತ್ತಲೇ ಅವುಗಳಿಗೆ ರಸ್ತೆಗಳು ಹಾಗೂ ಸರಕಾರಿ ಪದವಿ ಪೂರ್ವಕಾಲೇಜು ಮೈದಾನ ಮತ್ತು ಇತರೇ ಸ್ಥಳಗಳು ತಂಗು ದಾಣ ಗಳಾಗಿವೆ. ಹಸುಗಳು ಮೈದಾನದಲ್ಲಿ ಸಗಣಿ ಹಾಕುವದರಿಂದ ಬೆಳಿಗ್ಗೆ ವಾಕಿಂಗ್ ಮಾಡುವವರಿಗೆ ಹಾಗೂ ಆಟ ಆಡುವವರಿಗೆ ತೊಂದರೆಯಾಗಿರುತ್ತದೆ.ಹಿಂದೂಗಳು ಗೋವುಗಳನ್ನ ದೇವತಾ ರೂಪದಲ್ಲಿ ಪೂಜೆ ಮಾಡುವ ಪದ್ಧತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳ ಜೀವನ ಬಹಳ ಕಷ್ಟಮಯದಿಂದ ಕೂಡಿದೆ.ಇವುಗಳ ಪಾಲನೆ ಪೋಷಣೆ ಎಲ್ಲರ ಜವಾಬ್ದಾರಿಯಾಗಿರುತ್ತದೆ. ಅದರಲ್ಲೂ ನಗರಸಭೆಯ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ನಗರಸಭೆ ತಮ್ಮ ಕಸದ ವಾಹನಗಳ ಮೂಲಕ ಹಸುಗಳ ಮಾಲಿಕರಿದ್ದಲ್ಲಿ ಅವುಗಳನ್ನು ತೆಗೆದುಕೊಂಡು ಹೋಗುವಂತೆ ಪ್ರಚಾರ ಮಾಡಬೇಕು. ಯಾರೂ ತೆಗೆದುಕೊಂಡು ಹೋಗದಿದ್ದರೆ ಅವುಗಳನ್ನು ಗೋಶಾಲೆಗೆ ಸೇರಿಸಬೇಕು. ಇದರಿಂದ ಅವುಗಳ ರಕ್ಷಣೆ ಮಾಡಿದಂತಾಗುತ್ತದೆ. ಎಂದು ಸರ್ವಾಂಗೀನ ಅಭಿವೃದ್ಧಿಯ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ್ ಮ್ಯಾಗಳ ಮನಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ ಇಂದಿನಿಂದ ಒಂದು ತಿಂಗಳ ಸಮಯದ ಗಡುವು ತಮಗೆ ನೀಡುತ್ತಿದ್ದೇವೆ.ಈ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡದೇ ನಿರ್ಲಕ್ಷ ಮಾಡಿದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಅಂದರೆ ದಿನಾಂಕ 14-8-2025 ರಂದು ರಾತ್ರಿ ಎಂಟು ಗಂಟೆಗೆ ಹಸುಗಳನ್ನು ನಮ್ಮ ಸಂಘದ ಪದಾಧಿಕಾರಿಗಳು ನಗರಸಭೆಯ ಆವರಣದಲ್ಲಿ ತಂದು ಬಿಡಲಾಗುವದು. ಎಂದು ಎಚ್ಚರಿಕೆ ನೀಡಿದ್ದಾರೆ.
