ಪೋತಿ ಮುಕ್ತ ಗ್ರಾಮವನ್ನಾಗಿಸಲು ಕೈಜೋಡಿಸಿ : ಎಡಿಸಿ ಮಹಮ್ಮದ್ ಜುಬೇರ.

ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಗ್ರಾಪಂಯ ಕಛೇರಿ ಸಭಾಂಗಣದಲ್ಲಿ ಬುಧವಾರ ಪಿಂಚಣಿ ಮತ್ತು ಇ-ಪೋತಿ ಆಂದೋಲನ ಕಾರ್ಯಕ್ರಮ ನಡೆಯಿತು. ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಮಾತನಾಡಿ, ಪೌತಿ ಖಾತಾ ಆಂದೋಲನದ ಮೂಖೇನ ನಿಮ್ಮ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಿ. ಎಮ್ಮಿಗನೂರು ಗ್ರಾಮ ಹೋಬಳಿಗೆ ಅರ್ಹತೆ ಹೊಂದಿದೆ. 361 ರೈತರ ಪಹಣಿಗಳು ಪೋತಿಯಲ್ಲಿದೆ. ಇದರಿಂದ ವ್ಯವಹಾರ ಸೇರಿದಂತೆ ನಾನಾ ಸೌಲಭ್ಯಗಳಿಗೆ ಅಡೆತಡೆಯಾಗಲಿದೆ. ವಾರಸುದಾರರ ಹೆಸರಿನಲ್ಲಿದ್ದರೆ, ಸರ್ಕಾರಿ ಸೌಲಭ್ಯಗಳು ದೊರಕಲು ಸಾಧ್ಯ. ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ವಿಶೇಷ ಆಂದೋಲನಾ ಕೈಗೊಂಡಿದೆ. ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಇ-ಪೋತಿ ಮತ್ತು ಪಿಂಚಣಿಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಸರ್ಕಾರ ಮನೆ ಬಾಗಿಲಿಗೆ ಬಂದಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜೀವಂತ ಸದಸ್ಯರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ಬರಲಿವೆ. ವಂಶವೃಕ್ಷ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಪೋತಿ ಮುಕ್ತ ಗ್ರಾಮವನ್ನಾಗಿಸಬೇಕು ಎಂದರು. ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ಈಗಾಗಲೇ ಎಮ್ಮಿಗನೂರು ಗ್ರಾಮದಲ್ಲಿ 168 ಪೋತಿ ಅರ್ಜಿಗಳನ್ನು ಇತ್ಯಾರ್ಥ ಮಾಡಲಾಗಿದೆ. ಇಂದಿನ ಆಂದೋಲನದಲ್ಲಿ ಹೊಸದಾಗಿ 51 ಪೋತಿ ಅರ್ಜಿಗಳು ಬಂದಿದೆ. 4ಜನ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ನೀಡಿದೆ. ಈಗ 3 ಹೊಸ ಅರ್ಜಿಗಳು ಬಂದಿವೆ. ಪ್ರತಿಯೊಂದು ಅರ್ಜಿಗಳನ್ನು ಹಂತ ಹಂತದಲ್ಲಿ ಆದಷ್ಟು ಬೇಗ ಪರಿಹರಿಸಲಾಗುವುದು ಎಂದರು. ತದನಂತರ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಆರ್‌ಐ ಜಗದೀಶ, ಪಿಡಿಒ ಶೇಷಗಿರಿ, ಮುಖಂಡರಾದ ಬರ‍್ಗಿ ಮಹೇಶಗೌಡ, ವೆಂಕಟರಾಜು, ವಿಎಗಳಾದ ಮಂಜುನಾಥ, ಮಹ್ಮದ್ ಹಬ್, ಮಂಜುನಾಥ ಸೇರಿದಂತೆ ಗ್ರಾಮದ ರೈತರು ಮತ್ತು ಮಹಿಳೆಯರು ಇದ್ದರು. ವರದಿ : ಜಿಲಾನಸಾಬ್ ಬಡಿಗೇರ್
