ಅಪಾರ ಭಕ್ತಾದಿಗಳ ಮಧ್ಯೆ ಶರದ್ಯ ಭಕ್ತಿ ಸಂಭ್ರಮದಿಂದ ಜರುಗಿದ ಶ್ರೀ ಹಾಲಸಿದ್ದೇಶ್ವರ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ…

ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಶ್ರೀ ಹಾಲಸಿದ್ದೇಶ್ವರ ಮಠ ಹಾಗೂ ಶನೇಶ್ವರ ದೇವಸ್ಥಾನಲ್ಲಿ ಬುಧವಾರ ದಿನದಂದು.. ಸದ್ಗುರು ಶಿವಯೋಗಿ ಶ್ರೀ ಹಾಲ ಸಿದ್ದೇಶ್ವರ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ವೆಂಕಟಗಿರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳ ಮಧ್ಯೆ ಅತ್ಯಂತ ಸಕಲ ವಾದ್ಯ ವೈಭವ ಹಾಗೂ ಜಾನಪದ ಕಲಾವಿದರಿಂದ ಆಸ್ತಿಕ ಬಂಧುಗಳಲ್ಲಿ ಭಕ್ತಿ ಭಾವನೆ ಮೂಡಿಸುವಲ್ಲಿ ಸಾರ್ಥಕತೆ ಮೂಡಿಸಿತು ಇದಕ್ಕೂ ಪೂರ್ವದಲ್ಲಿ ಬೆಳಗಿನ ಜಾವ ಶ್ರೀ ಫಕೀರೇಶ್ವರ ಅಜ್ಜನವರ ಕರ್ತೃಗದ್ದೆಗೆ ಅಭಿಷೇಕ ಹಾಗೂ ಶ್ರೀ ಶನೇಶ್ವರಸ್ವಾಮಿ ದೇವರಿಗೆ ಅಭಿಷೇಕ ಹಾಗೂ ಈಶ್ವರ ಮೂರ್ತಿ ಗೆ ಪಂಚಾಮೃತ ಅಭಿಷೇಕ ಕಾರ್ಯಕ್ರಮಗಳು ಜರುಗಿದವು ಬೆಳಿಗ್ಗೆ 9:00 ಮುಳ್ಳಗದ್ದಿಗೆ ಉತ್ಸವ ಅದ್ದೂರಿಯಾಗಿ ಜರುಗಿತು. ನಾಡಿನ ಹರ ಗುರು ಮೂರ್ತಿ ಸ್ವಾಮೀಜಿಗಳು ಹಾಗೂ ಶರಣರು ಭಾಗವಹಿಸಿದ್ದರು. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರಿಂದ ವ ಟುಗಳಿಗೆ ದೀಕ್ಷೆ ಅನ್ನದಾಸೋಹ ಸಾಂಗತವಾಗಿ ಜರುಗಿದವು.

