ಪೀಠೋಪಕರಣಕ್ಕೆ ಆರ್ಥಿಕ ಸಹಕಾರ ಭರವಸೆಪತ್ರಕರ್ತರ ಗ್ರಂಥಾಲಯಕ್ಕೆ ಗಂಗಾವತಿ ಲಯನ್ಸ್ ಕ್ಲಬ್‌ನಿಂದ ೧೦೧ ಪುಸ್ತಕ ದೇಣಿಗೆ..

ಪೀಠೋಪಕರಣಕ್ಕೆ ಆರ್ಥಿಕ ಸಹಕಾರ ಭರವಸೆಪತ್ರಕರ್ತರ ಗ್ರಂಥಾಲಯಕ್ಕೆ ಗಂಗಾವತಿ ಲಯನ್ಸ್ ಕ್ಲಬ್‌ನಿಂದ ೧೦೧ ಪುಸ್ತಕ ದೇಣಿಗೆ..

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಗಂಗಾವತಿ ತಾಲೂಕು ಘಟದಿಂದ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಂಡಿರುವ ಪತ್ರಕರ್ತರ ಗ್ರಂಥಾಲಯಕ್ಕೆ ಹಲವಾರು ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳು ನಿರಂತರ ಪುಸ್ತಕಗಳನ್ನು ದೇಣಿಗೆ ನೀಡುತ್ತಿದ್ದು, ಇಂದು ನಗರದ ಪತ್ರಿಕಾ ಭವನದಲ್ಲಿ ಗಂಗಾವತಿಯ ಲಯನ್ಸ್ ಕ್ಲಬ್‌ನಿಂದ ಪುಸ್ತಕ ಹಾಗು ಇತರೆ ಸಾಮಾಗ್ರಿ ಕೊಡುಗೆ ನೀಡಲಾಯಿತು.ನಂತರ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಶಿವುಕುಮಾರ್ ಮಾಲಿಪಾಟೀಲ್ ರವರು, ಓದುವ ಸಂಸ್ಕೃತಿ ಹೆಚ್ಚಿಸುವ ಅನಿವಾರ್ಯತೆ ಇದೆ, ವಿದ್ಯೆ ಮನುಷ್ಯತ್ವ ಗುಣ ವೃದ್ಧಿಸುತ್ತದೆ, ಮಾನಸಿಕ ನೆಮ್ಮದಿ, ಆತ್ಮಸ್ಥೆöÊರ್ಯ ದ್ವಿಗುಣಗೊಳಿಸುತ್ತದೆ. ಪತ್ರಕರ್ತರಿಗಾಗಿಯೇ ಗ್ರಂಥಾಲಯ ನಿರ್ಮಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ, ಸಮಾಜದ ಓರೆಕೋರೆ ತಿದ್ದುವಲ್ಲಿ ಪತ್ರಕರ್ತರ ಕಾರ್ಯ ಬಹುಮುಖ್ಯವಾದದು, ಮಾನವೀಯ ನೆಲೆಯ ವರದಿಗಳ ಮೂಲಕ ಸಾರ್ವಜನಿರಲ್ಲಿ ಜಾಗೃತಿ ಮೂಡಿಸಲಿ ಎಂದ ಅವರು ಪತ್ರಿಕಾ ಭವನದಕ್ಕೆ ಅಗತ್ಯ ಪೀಠೋಪಕರಣಕ್ಕೆ ತಮ್ಮ ಕಾಣಿಕೆಯು ಸೇರಿ ಸಮಾಜ ಗಣ್ಯರಿಂದ ಸಹಕಾರ ಕೊಡಿಸುವುದಾಗಿ ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಸೇವಾ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿರುವ ಡಾ.ಶಿವುಕುಮಾರ್ ಮಾಲಿಪಾಟೀಲರ ಕಾರ್ಯ ಅನನ್ಯ, ತುಂಬಾ ಕಾಳಜಿ ಪೂರ್ವಕವಾಗಿ ಪತ್ರಕರ್ತರ ಗ್ರಂಥಾಲಯಕ್ಕೆ ವಿವಿಧ ರೀತಿಯ ಸಹಕಾರ ನೀಡುತ್ತಿರುವುದು ಅಭಿನಂದನೀಯ, ವಕೀಲರಾದ ನಾಗರಾಜ್ ಗುತ್ತೇದಾರ್ ಅವರು ಒಂದು ರ‍್ಯಾಕ್ ಕೊಟ್ಟಿದ್ದು, ಗ್ರಂಥಾಲಯಕ್ಕೆ ಇದುವರೆಗು ಸುಮಾರು ೫೦೦ ಪುಸ್ತಕಗಳು ಸಂಗ್ರಹವಾಗಿದ್ದು, ಕೊತ್ತಲ ಬಸವೇಶ್ವರ ಸಂಸ್ಥೆಯ ಬಸವರಾಜ್ ಪಾಟೀಲ್ ಸೇಂಡA ಅವರು ಸೇರಿದಂತೆ ಸಾಹಿತಿ ಮಮ್ತಾಜ್ ಬೇಗಂ ಸಿದ್ದು ಬೀರಾದಾರ್, ಮೈಲಾರಪ್ಪ ಬೂದಿಹಾಳ್ ಇತರರು ಪುಸ್ತಕಗಳನ್ನು ನೀಡಿದ್ದಾರೆಂದು ವಿವರಿಸಿದರು. ಇದಕ್ಕು ಮುನ್ನಾ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶರಣಬಸವ .

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಡಾ. ಚೇತನ್ ಚಿನವಾಲರ್, ಲಯನ್ ಎನ್. ಸೂರ್ಯನಾರಾಯಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಕಾರ್ಯದರ್ಶಿ ಬಿ.ದೇವರಾಜ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್ ಮುಕ್ಕುಂದಿ, ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್, ಪಿ.ದಶರಥ, ಎನ್. ವಿಜಯಕುಮಾರ್ ಸಣಾಪುರ, ವೆಂಕಟೇಶ್ ಮಾಂತ, ದಿವಾಕರ ಇತರರಿದ್ದರು.

Leave a Reply

Your email address will not be published. Required fields are marked *