ಶರಣರ ವಚನಗಳು ವೈಜ್ಞಾನಿಕ, ವೈಚಾರಿಕವಾಗಿದ್ದು ಸಕಲರಿಗೆ ಲೇಸನ್ನು ಬಯಸುತ್ತವೆ:ವಿಜಯಲಕ್ಷ್ಮಿ ಗುರಿಕಾರ…

ಗಂಗಾವತಿ: ಶರಣರ ವಚನಗಳು ವೈಜ್ಞಾನಿಕ, ವೈಚಾರಿಕವಾಗಿದ್ದು ಸಕಲರಿಗೆ ಲೇಸನ್ನು ಬಯಸುತ್ತವೆ ಎಂದು ಪ್ರಾಧ್ಯಾಪಕಿ ಪ್ರೋ.ವಿಜಯಲಕ್ಷ್ಮಿ ಗುರಿಕಾರ ಹೇಳಿದರು.ಅವರು ನಗರದ ನೀಲಕಂಠೇಶ್ವರ ಕ್ಯಾಂಪ್ ಶ್ರೀ ಪಾಂಡುರಂಗ ದೇವಾಲಯದಲ್ಲಿ ಬಸವಪರ ಸಂಘಟನೆಯಗಳು ಆಯೋಜಿಸಿದ್ದ ಬಚನ ಶ್ರಾವಣ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.12 ಶತಮಾನದಲ್ಲಿ ಮಹಿಳೆಯರು ಸೇರಿ ಅಶಕ್ತರಿಗೆ ದಾರಿದೀಪವಾಗಿ ವಚನ ಸಾಹಿತ್ಯ ಕಾರ್ಯ ಮಾಡಿವೆ ಶೋಷಣೆ ಮಾಡುವುದನ್ನು ತಪ್ಪಿಸಿ ಬದಲಾವಣೆ ಮಾಡುವ ಮೂಲಕ ಶರಣರ ಮಾರ್ಗದಲ್ಲಿ ನಡೆಯಬೇಕು. ಕೌಟುಂಬಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಸಮಸಮಾಜದ ನಿಟ್ಟಿನಲ್ಲಿ ಕಾರ್ಯ ಮಾಡಿದ ಶರಣರ ವಚನಗಳೊಂದಿಗೆ ಆತ್ಮ ಸ್ಥೈರ್ಯದಿಂದ ಬದುಕಬೇಕು. ಸಂಕವ್ವನಂತಹ ವ್ಯಕ್ತಿಯನ್ನು ಸಹ ಗರತಿಯನ್ನಾಗಿ ಮಾಡಿದ್ದು ಶರಣರ ಕಾಲವಾಗಿದೆ. ಮಹಿಳೆಯರನ್ನು ದೇವರಿಗೆ, ದೇಶಕ್ಕೆ ಹೋಲಿಸುವುದಕ್ಕಿಂತ ಮಹಿಳೆಯರನ್ನು ಮನುಷ್ಯತ್ವದಿಂದ ಕಾಣುವುದು ಅವಶ್ಯ. ಹೆಣ್ಣನ್ನು ಕಾಮುಕ ದೃಷ್ಟಿಯಿಂದ ನೋಡದೇ ಮನುಷ್ಯತ್ವದ ಕಾಣಬೇಕು.ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ.ಮನುಷ್ಯನ ಪ್ರೀತಿಯನ್ನು ವಚನಗಳನ್ನು ಕಾಣಬಹುದಾಗಿದೆ. ನಿತ್ಯ ವಚನ ಸಾಹಿತ್ಯ ಓದಬೇಕು.ಜೀವನದಲ್ಲಿ ಅನುಷ್ಠಾನ ಮಾಡಬೇಕು. ಕಾರ್ಯಕ್ರಮದಲ್ಲಿ ಕೆ.ವರಲಕ್ಷ್ಮಿ, ಬಸವಪರ ಸಂಘಟನೆಯ ಕೆ.ಬಸವರಾಜ, ದಿಲೀಪ,ವಿರೇಶ ರೆಡ್ಡಿ, ಪ್ರಮುಖರಾದ ರಾಮಣ್ಣ ಕುರಿ,ಪ್ರೋ.ಕರಿಯಣ್ಣ,ತಿಪ್ಪೇಸ್ವಾಮಿ, ಹನುಮಂತಪ್ಪ ಹುಲಿಹೈದರ್, ಹಾಜಿ,ಕಾಜಹುಸೇನ ಮುಳ್ಳೂರು,ಮಲ್ಲಿಕಾರ್ಜುನ ಸಿದ್ದಾಪುರ, ರಮೇಶ ಐಲಿ,ವಿಜಯಲಕ್ಷ್ಮಿ, ಗೌಸಿಯಾ ಬೇಗಂ,ಶೋಭಾ ಕರಿಗೂಳಿ,ರಾಯಮ್ಮ,ದಶರಥ,ಛತ್ರಪ್ಪ ತಂಬೂರಿ,ಬಸವರಾಜ ಕಟ್ಟೆ,ಧೂಳ್ ವೆಂಕಟೇಶ, ಪರಶುರಾಮ ದೇವರಮನೆ,ಕನಕಪ್ಪ ಹೊಸಳ್ಳಿ, ತಿಮ್ಮಪ್ಪ ಸೇರಿದಂತೆ ಅನೇಕರಿದ್ದರು.

ಗಂಗಾವತಿ: ವಚನ ಶ್ರಾವಣ ಕಾರ್ಯಕ್ರಮ ಜರುಗಿತು.