ಗಂಗಾವತಿ ಕಾ ಮಹರಾಜ್ ಗಣಪತಿಯ ಧ್ವಜಸ್ತಂಭ ಪ್ರತಿಷ್ಠಾಪನೆ…

ಗಂಗಾವತಿ ಕಾ ಮಹರಾಜ್ ಗಣಪತಿಯ ಧ್ವಜಸ್ತಂಭ ಪ್ರತಿಷ್ಠಾಪನೆ…

ಗಂಗಾವತಿ : ಗಂಗಾವತಿ ಕಾ ಮಹಾರಾಜ್ ಗಣಪತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಹಾಗೂ ಗಣಪತಿಯ ನಾಮಫಲಕ ಶನಿವಾರ ಜರುಗಿತು, ವಿಜಯ ವೃಂದ ಯುವಕರ ಸಂಘದಿಂದ ಬಾಬು ಜಗಜೀವನರಾಮ್‌ ವೃತ್ತದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಷ್ಠಾಪಿಸಿವಿಶೇಷ ಪೂಜೆ ಸಲ್ಲಿಸಿದರು, ಈ ವೇಳೆ ಶಾಂತಕುಮಾರ್ ಮಾತನಾಡಿಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಯುವಕ ಮಂಡಳಿ ಸಜ್ಜಾಗಿದೆ.ಹೈದರಾಬಾದ್ ನಿಂದ ಗಣೇಶ ಮೂರ್ತಿಯನ್ನು ತರಲಿದ್ದೇವೆ, ಒಟ್ಟಾರೆ ಈ ಬಾರಿಯೂ ಅತಿ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಸತೀಶ್, ರಾಮು ‌ಗಿಡ್ಡ ಶರಣ, ‌ಗುರುರಾಜ್ ಬಡಿಗೇರ, ವಿಜಯ ವೃಂದ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *