ಕಮ್ಮವಾರಿ ಶಿಕ್ಷಣ ಸಂಸ್ಥೆಯಲ್ಲಿ : ಸಂಭ್ರಮದಿಂದ ರಕ್ಷಾಬಂಧನ ಆಚರಣೆ…

ಕಾರಟಗಿ ನವನಗರ್ : ಸಹೋದರ ಸಹೋದರಿಯರ ಪ್ರತೀಕವಾದ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಆಚರಿಸಲಾಯಿತು. ಶಾಲೆ – ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಸಹೋದರರಿಗೆ ರಾಖಿ ಕಟ್ಟಿ ಸಿಹಿ ತಿನಿಸಿದರು. ಈ ವೇಳೆ ಕಾರ್ಯದರ್ಶಿ ಎಲ್ ವೀರಭದ್ರ ರಾವ್ಅವರು ಮಾತನಾಡಿ ಸೋದರತ್ವ ಸಾರುವ ರಕ್ಷಾ ಬಂಧನ ಶತಮಾನಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ರಕ್ಷಾ ಬಂಧನ ಎಂಬುದು ಸಂಸ್ಕೃತದ ಪದವಾಗಿದ್ದು, ಇದರ ಅರ್ಥ ರಕ್ಷಣೆಯ ಬಂಧ ಎಂದು. ರಕ್ಷಾ ಬಂಧನದಂದು ಸೋದರಿಯರು ತಮ್ಮ ಸೋದರನ ಏಳಿಗೆಗಾಗಿ, ದೀರ್ಘಾಯುಷ್ಯಕ್ಕಾಗಿ ವ್ರತ ಆಚರಿಸಿ ಸೋದರನ ಮಣಿಕಟ್ಟಿಗೆ ರಕ್ಷಾ ದಾರ ಅಥವಾ ರಾಖೀಯನ್ನು ಕಟ್ಟುತ್ತಾರೆ. ಈ ಮೂಲಕ ಸಹೋದರನಿಂದ ರಕ್ಷಣೆಯ ಭರವಸೆ ಯನ್ನು ಪಡೆಯುತ್ತಾರೆ. ಇದು ಸಹೋದರಿಯರನ್ನು ರಕ್ಷಿಸುವ ಜವಾಬ್ದಾರಿ ನೀಡುತ್ತದಲ್ಲದೇ ಸೋದರ ಸೋದರಿಯರ ನಡುವಿನ ಬಂಧವನ್ನು ಬಲ ಪಡಿಸುತ್ತದೆ ಎಂದರು.ನಂತರ ವಿದ್ಯಾರ್ಥಿಗಳು ಕಾರಟಗಿ ಸಿದ್ದಾಪುರ ಪೊಲೀಸ್ ಠಾಣೆ,ಸರ್ಕಾರಿ ಆಸ್ಪತ್ರೆ, ಗ್ರಾಮ ಪಂಚಾಯಿತಿ, ಅಂಚೆ ಕಚೇರಿ ಇನ್ನು ಅನೇಕ ಇಲಾಖೆಗಳಿಗೆ ತೆರಳಿ ಸಹೋದರರಿಗೆ ರಾಖಿ ಕಟ್ಟಿ ಸಿಹಿ ತಿನಿಸಿ ಅರ್ಥಪೂರ್ಣವಾಗಿ ರಕ್ಷಾಬಂಧನ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮೊಹಮ್ಮದ್ ರಫೀಕ್, ಶ್ರೀಮನ್ ನಾರಾಯಣ ಆಡಳಿತ ಅಧಿಕಾರಿ, ಶ್ರೀದೇವಿ ಕೊಲ್ಲಾ ಶಾಲೆ ಮುಖ್ಯಸ್ಥರು, ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಫೋಟೋ 1 : ಆರ್ ವಿ ಎಸ್ ಆರ್ ಶಾಲೆಯಲ್ಲಿ ರಕ್ಷಾಬಂಧನ ಆಚರಿಸಿದ ವಿದ್ಯಾರ್ಥಿಗಳು ಫೋಟೋ 2 : ಕಾರಟಗಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ರಕ್ಷಾಬಂಧನ ಕಟ್ಟಿದ ಆರ್‌ವಿಎಸ್ಆರ್ ಶಾಲಾ ವಿದ್ಯಾರ್ಥಿನಿಯರು.
