ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ಸರಕಾರ ಮಧ್ಯೆ ಪ್ರವೇಶಕ್ಕೆ ಆಗ್ರಹ…

ಗಂಗಾವತಿ.10ಬೆಂಗಳೂರಿನ ಅಭಿಮಾನ್ ಸ್ಟುಡಿಯೋದ ಲ್ಲಿದ್ದ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಬಾಲ ಕೃಷ್ಣನವರ ಕುಟುಂಬ ದವರು ತೆರವು ಮಾಡಿದ್ದು ಕೂಡಲೇ ಸರಕಾರ ಸರಕಾರ ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಇತ್ಯಾರ್ಥ ಮಾಡುವಂತೆ ಗಂಗಾವತಿಯ ಡಾ.ವಿಷ್ಣು ವರ್ಧನ್ ಅಭಿಮಾನಿಗಳ ಬಳಗ ಮತ್ತು ಸಂಗೀತ ಸ್ವರಾಂಜಲಿ ಕಲಾ ತಂಡದ ಪದಾಧಿಕಾರಿಗಳು ಪ್ರಕಟಣೆ ಯಲ್ಲಿ ಒತ್ತಾಯಿಸಿದ್ದಾರೆ. ಡಾ.ವಿಷ್ಣುವರ್ಧನ್ ಕನ್ನಡಿ ಗರನ್ನು ಅಗಲಿ 16 ವರ್ಷಗಳು ಕಳೆದಿದ್ದು ಬೆಂಗಳೂರಿನಲ್ಲಿ 10ಗುಂಟೆ ಜಾಗ ನೀಡೋಕೆ ತಕರಾರು ಮಾಡುತ್ತಿರುವ ಬಾಲಣ್ಣನವರ ಕುಟುಂಬವನ್ನು ಸರಕಾರ ಮನವೊಲಿಸಿ ಸ್ಮಾರಕ ನಿರ್ಮಿಸಬೇಕೆಂದು ಅಭಿಮಾನಿ ಗಳ ಬಳಗದ ನಮ್ಮ ಡಾ.ವಿಷ್ಣು ಸೇನ ಸಮಿತಿ ಮಾರ್ಗದರ್ಶಕರು ಹಿರಿಯ ಪತ್ರಕರ್ತ ಕೆ.ನಿಂಗಜ್ಜ, ಮಹಾಬಲೇಶ್ .ನಾಗರಾಜ ಮೇದಾರ್ .ಪರಶುರಾಮ ದೇವರಮನೆ, ಮಾರುತಿ ಐಲಿ, ರಂಗಪ್ಪ ನಾಯಕ, ಎಸ್ ಎಸ್ ಪಾಷ, ಚಂದ್ರು ಕುಷ್ಕ ಬಂಡಿ,ರಮೇಶ್ ನೇತ್ರ ಮಹಬೂಬ್ ಬಸಾಪಟ್ಟಣ. ಮಂಜುನಾಥ್ ಬಸಾಪಟ್ಟಣ, ಶರೀಫ್ ಖಾನಾವಳಿ, ಚಿದಾನಂದ ಗಾಂಧಿನಗರ್, ಗುರುಶಾಂತಪ್ಪ, ಅಜೀರ್ ಮೆಡಿಕಲ್. ಅರ್ಜುನಗಣೇಶ್, ಹುಲಿಗೇಶ ಮೇದಾರ್, ಪವನ್ ಪೂಜಾರಿ, ನರಸಿಂಹಸ್ವಾಮಿ, ಗೌಸ್ ಪಾಷಾ, ಡಾ.ವಿ.ಎಸ್.ಎಸ್ ವಿಷ್ಣು ಸೇನಾ ಸಂಘಟನೆ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಶರಣಯ್ಯಸ್ವಾಮಿ ಒತ್ತಾಯಿಸಿದ್ದಾರೆ.
