ಅಯ್ಯಪ್ಪ ಸ್ವಾಮಿ ದೇವಸ್ಥಾನ ಬೃಹತ್ ಶಕ್ತಿ ಕೇಂದ್ರ ವಾಗಲಿದೆ… ನಾರಾಯಣಪ್ಪ ನಾಯಕ. ಗೋಪೂಜೆ ಹೋಮ ಹವನದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದ್ವಾದಶ ವಾರ್ಷಿಕೋತ್ಸವಕ್ಕೆ ಚಾಲನೆ.

ಗಂಗಾವತಿ. ನಗರದ ಆನೆಗುಂದಿ ರಸ್ತೆಯಲ್ಲಿರುವ ಅಯ್ಯಪ್ಪ ಗಿರಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬೃಹತ್ ಶಕ್ತಿ ಕೇಂದ್ರ ವಾಗಲಿದೆ ಎಂದು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ್ ಹೇಳಿದರು.

ಅವರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವದ ಪ್ರಯುಕ್ತ ಜರುಗಿದ ಗೋಪೂಜೆ. ಗಣಪತಿ ಹೋಮ ಹಾಗೂ ರುದ್ರ ಹೋಮ ಸೇರಿದಂತೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆಟ್ಟ ಕಲ್ಲು ಗುಡ್ಡಗಳ ನಡುವೆ ಸ್ಥಾಪನೆಗೊಂಡ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಸಂಕಷ್ಟಗಳನ್ನು ಅನುಗ್ರಹಿಸುವ ಹರಿಹರ ಪುತ್ರನಾಗಿದ್ದಾನೆ. ಎಂದು ತಿಳಿಸಿ ದರು. ಚಿಕ್ಕ ಬೊಮ್ಮನಾಳ ಹಿರೇಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ. ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಹಾಗೂ ಗುಣಮಟ್ಟದ ಸಂಸ್ಕಾರ ದೊರೆಯುತ್ತದೆ. ದುಷ್ಟರ ಸಂಹಾರಕ್ಕಾಗಿ ಜನಿಸಿದ ಅಯ್ಯಪ್ಪ ಸ್ವಾಮಿ ನೆನೆದವರ ಮನೆ ಹಾಗೂ ಮನದಲ್ಲಿ ನೆನೆಸಿದ್ದು ಸದರಿ ದೇವಸ್ಥಾನ ಎರಡನೆಯ ಶಬರಿಮಲೆ ಅಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಚಂದ್ರಮೌಳಿ ಗುರುಸ್ವಾಮಿ. ಭೀಮಸೇನ್ ಭಟ್ ಬಸಾಪಟ್ಟಣ. ಜಟ್ಟಿ ವೀರಪ್ರಸಾದ್. ದಂಪತಿಗಳಿಂದ ಮಹಾಸಂಕಲ್ಪ. ಪುಣ್ಯವಾಚನ ನಡೆಸುವುದರ ಮೂಲಕ ಹೋಮಗಳ ಪೂರ್ಣಾಹುತಿ ಜರುಗಿತು ರಾಮ ನಾಯಕ್ ರಾಮಕೃಷ್ಣ ಮಲ್ಲಿಕಾರ್ಜುನ ಶ್ರೀರಾಮನಗರ. ಬದರಿ ನಾರಾಯಣ ಸಿರಿಗೇರಿ ತಾಯಿ ಬಾವ ಚಿನ್ನು ಪಾಟಿ ಪ್ರಭಾಕರ್ ಸೇರಿದಂತೆ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು ಮಹಿಳೆಯರಿಂದ ಭಜನೆ ಜರುಗಿತು ನಗರ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ತಮ್ಮ ಭಕ್ತಿಪರ ಕಾಸ್ಟೆ ಮೇ ರೆದರು..

