ಎಸ್ಎಫ್ಐ ವಿದ್ಯಾರ್ಥಿನಿಯರಿಂದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ರವರ ಜನ್ಮದಿನ ಆಚರಣೆ…

ಎಸ್ಎಫ್ಐ ವಿದ್ಯಾರ್ಥಿನಿಯರಿಂದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ರವರ ಜನ್ಮದಿನ ಆಚರಣೆ…

ಗಂಗಾವತಿ ನಗರದ ಎಸ್ಎಫ್ಐ ಅಲ್ಪಸಂಖ್ಯಾತರ ಹಾಸ್ಟೆಲ್ ಘಟಕದ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಹಾಗೂ ಶ್ರೇಷ್ಠ ಕವಯತ್ರಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕಿ ಫಾತಿಮಾ ಶೇಖ್ ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಎಸ್ಎಫ್ಐ ಹಾಸ್ಟೆಲ್ ಘಟಕದ ಕಾರ್ಯದರ್ಶಿ ಯಾದ ಕಾಮ್ರೇಡ್ ಪಲ್ಲವಿಯವರು ಕಾರ್ಯಕ್ರಮಕ್ಕೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಗೌಸಿಯ ಮೇಡಂ ರವರು ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರರಿಗೆ, ಶಿಕ್ಷಣದ ಹಕ್ಕು ದೊರಕಬೇಕೆಂಬ ಉದ್ದೇಶದಿಂದ ಅತೀವ ವಿರೋಧಗಳ ನಡುವೆಯೂ ಶಾಲೆಗಳನ್ನು ಸ್ಥಾಪಿಸಿ, ಶಿಕ್ಷಣವೇ ಸಾಮಾಜಿಕ ಕ್ರಾಂತಿಯ ಮೂಲವೆಂದು ಸಾಬೀತುಪಡಿಸಿದ ಮಹಾನ್ ಶಿಕ್ಷಕಿ ಹಾಗೂ ಸಮಾಜ ಸುಧಾರಕಿ ಆಗಿದ್ದಾರೆ ಮತ್ತುಫಾತಿಮಾ ಶೇಖ್ ಅವರು ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಕೈಜೋಡಿಸಿ, ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ನೀಡಿದ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿಯಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಣವನ್ನು ಹೋರಾಟದ ಸಾಧನವಾಗಿ ಬಳಸಿದ ಕ್ರಾಂತಿಕಾರಿ ಸಮಾಜ ಸುಧಾರಕಿಯು ಆಗಿದ್ದಾರೆ ಎಂದು ತಿಳಿಸಿದರು.ನಂತರ ನಿಲಯದ ವಿದ್ಯಾರ್ಥಿನಿ ಚಂದ್ರಿಕಾ ಡಿ.ಎಡ್ ಮಾತನಾಡಿ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಹಿಳಾ ಶಕ್ತೀಕರಣಕ್ಕೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಬೇಕಿದೆ ಎಂದರು ಜಾತಿ–ಲಿಂಗ ಭೇದವಿಲ್ಲದೆ ಶಿಕ್ಷಣವನ್ನು ಜನಸಾಮಾನ್ಯರಿಗೆ ತಲುಪಿಸುವ ಹೋರಾಟದಲ್ಲಿ ಇವರ ಪಾತ್ರ ಐತಿಹಾಸಿಕವಾಗಿದ್ದು, ಇಂದಿನ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಇವರ ಜೀವನ, ಹೋರಾಟ ಮತ್ತು ಆದರ್ಶಗಳ ಕುರಿತು ಚರ್ಚೆ ನಡೆಸಲಾಗಿದ್ದು, ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಶಕ್ತಿಶಾಲಿ ಆಯುಧ ಎಂಬ ಸಂದೇಶವನ್ನು ವಿದ್ಯಾರ್ಥಿನಿಯರು ಎಸ್ಎಫ್ಐ ಸಂಘಟನೆಯ ಮೂಲಕ ಸಮಾಜಕ್ಕೆ ಪುನರುಚ್ಚರಿಸಿದರು.ಎಸ್ಎಫ್ಐ ಸಂಘಟನೆ ಇಂತಹ ಮಹಾನ್ ಸಮಾಜ ಸುಧಾರಕರ ಆದರ್ಶಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸಲಿದೆ ಎಂದು ತಿಳಿಸಲಾಯಿತು ಎಸ್ಎಫ್ಐ ವಿದ್ಯಾರ್ಥಿನಿಯರು ತಿಳಿಸಿದರು.

ಈ ಸಂದರ್ಭದಲ್ಲಿ ಘಟಕದ ವಿದ್ಯಾರ್ಥಿಗಳಾದ ಖಾಜಾ ಬಾನು, ಸೌಮ್ಯ, ನೀಲಮ್ಮ, ಸಾಬೀನಾ, ರೇಣುಕಾ, ಸಾನಿಯಾ, ಶಂಕ್ರಮ್ಮ ಮತ್ತು ವಿದ್ಯಾರ್ಥಿಗಳಾದ ಕಾವ್ಯ, ಜ್ಯೋತಿ, ಐಶ್ವರ್ಯ ಮತ್ತು ಹಾಸ್ಟಲ್ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *