ಶ್ರೀ ಜ್ಞಾನಸಿದ್ದಿ ವಿನಾಯಕನ ಕೃಪೆಯಿಂದ ಸ್ಥಳ ಸ್ವಚ್ಛತೆಯಿಂದ ಕೂಡಿದೆ: ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ….

ಗಂಗಾವತಿ: ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿರುವ ಶ್ರೀ ಜ್ಞಾನ ಸಿದ್ದಿ ವಿನಾಯಕನ ದೇವಸ್ಥಾನದ ಸುತ್ತಲೂ ಕಬ್ಬಿಣದ ಕಾಂಪೌಂಡ್ ನಿರ್ಮಾಣವನ್ನು ದೇವಸ್ಥಾನ ಬಳಗದ ಎಸ್ ಶರಣಬಸಪ್ಪ ನೇತೃತ್ವದಲ್ಲಿ ನಿರ್ಮಾಣಗೊಳಿಸಲಾಯಿತು. ಉದ್ಘಾಟನೆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ ನಗರಸಭೆಯ ಪೌರಾಯುಕ್ತರಾದ ಆರ್ ವಿರುಪಾಕ್ಷ ಮೂರ್ತಿಯವರು ಮಾತನಾಡಿ ಶ್ರೀ ಜ್ಞಾನ ಸಿದ್ದಿ ವಿನಾಯಕನ ಕೃಪಾ ಆಶೀರ್ವಾದದಿಂದ ಈ ಸ್ಥಳವು ಸ್ವಚ್ಛತೆಯಿಂದ ಕೂಡಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಬ್ಬಿಣದ ಕಾಂಪೌಂಡ್ ನಿರ್ಮಾಣ ಮಾಡಿ ಸರ್ವರಿಗೂ ಅನುಕೂಲ ಮಾಡಿಕೊಟ್ಟಿರುವಂತ ಜ್ಞಾನ ಸಿದ್ದಿ ವಿನಾಯಕನ ಬಳಗದವರಿಗೆ ಆ ದೇವರು ಆಶೀರ್ವದಿಸಲಿ. ಜೊತೆಗೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಆ ವಿನಾಯಕನ ಕೃಪೆ ದೊರೆಯಲಿ ಎಂದು ಹೇಳಿದರು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ದೇವಸ್ಥಾನ ಬಳಗದ ನೇತೃತ್ವವನ್ನು ವಹಿಸಿದ ಎಸ್ ಶರಣಬಸಪ್ಪ ರವರು ಮಾತನಾಡಿ ಈ ಜಾಗವು ಮೊದಲು ಸ್ವಚ್ಛತೆ ಇರಲಿಲ್ಲ. ಈ ದೇವಸ್ಥಾನ ನಿರ್ಮಾಣವಾದ ನಂತರ ಸರ್ವ ಭಕ್ತಾದಿಗಳು ಬಂದು ಕುಳಿತುಕೊಳ್ಳುವುದಕ್ಕೆ ಮತ್ತು ದಿನನಿತ್ಯವೂ ಸಹ ದರ್ಶನ ಪಡೆಯುವುದಕ್ಕೆ ಸಾರ್ವಜನಿಕರಿಗಾಗಿ ಅನುಕೂಲ ಮಾಡಲು ಶ್ರೀ ಜ್ಞಾನ ಸಿದ್ದಿ ವಿನಾಯಕನ ಬಳಗದ ಎಲ್ಲಾ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಆ ದೇವರು ಅನುಗ್ರಹ ಕರುಣಿಸಲಿ ಎಂದು ಹೇಳಿದರು. ನಂತರ ನಗರಸಭೆಯ ಪೌರಾಯುಕ್ತರಾದ ಆರ್.ವಿರುಪಾಕ್ಷ ಮೂರ್ತಿ ಅವರಿಗೆ ದೇವಸ್ಥಾನ ಬಳಗದಿಂದ ಸನ್ಮಾನಿಸಲಾಯಿತು. ನಂತರ ವಾಣಿಜ್ಯೋದ್ಯಮಿಗಳಾದ ಲಿಂಗಪ್ಪ ಬೆನಕನಾಳ. ಮತ್ತು ಬಸವರಾಜ ಬೋವಿ ಹಾಗೂ ಬಿ.ರಮೇಶ ರವರಿಗೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನ ಬಳಗದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಮಾಂತೇಶ. ಸಂತೋಷ.ಆಂಜನೇಯ ಪಂಪನಗೌಡ.ಅಶೋಕ. ರಮೇಶ. ವಿರೂಪಾಕ್ಷಿ ಹೂಗಾರ. ಬಸವರಾಜ. ಸೇರಿದಂತೆ ಬಳಗದ ಸರ್ವ ಸದಸ್ಯರು ಭಾಗವಹಿಸಿದ್ದರು.

