ಧಾರ್ಮಿಕ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮ ಜರುಗಿತು…

ಧಾರ್ಮಿಕ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮ ಜರುಗಿತು…

ಕಂಪ್ಲಿ : ತಾಲೂಕಿನ ಬೆಳಗೋಡು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಬಿಸಿ ಟ್ರಸ್ಟ್ ಅಡಿಯಲ್ಲಿ ಬೆಳಗೋಡು ಕಾರ್ಯಕ್ಷೇತ್ರದಲ್ಲಿ ಧಾರ್ಮಿಕ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಒಕ್ಕೂಟದ ಪದಾಧಿಕಾರಿಗಳು, ಊರಿನ ಗಣ್ಯರು, ಸಂಘದ ಸದಸ್ಯರು ಒಗ್ಗೂಡಿಸಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದ್ದು ಸ್ಥಳೀಯರಿಂದ ಉತ್ತಮವಾದಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ್ಯ ಎನ್ನುವುದು ಒಂದು ದಿನಕ್ಕೆ ಸೀಮಿತ ಆಗಬಾರದು ಅದು ನಮ್ಮ ಜೀವನದಲ್ಲಿ ಪ್ರತಿನಿತ್ಯ ಕಾರ್ಯ ಗತವಾಗಬೇಕು ಎಂದು ಊರಿನ ಗಣ್ಯರು ತಿಳಿಸಿದರು. ಸರ್ವಪಲ್ಲಿ ರಾಧಾಕೃಷ್ಣ ಸಂಘದ ಉಮೇಶ್ ಮತ್ತು ಅವರ ತಂಡದ ಸದಸ್ಯರು, ಸ್ನೇಹ ಸಂಘದ ಸದಸ್ಯರು ಸೇರಿ ಕಾರ್ಯಕ್ರಮದಲ್ಲಿ ಬಂದಿರುವ ಎಲ್ಲಾ ಸದಸ್ಯರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಅವರು ಊರಿನ ಪ್ರಮುಖರಾದ ಉಮೇಶ, ಬಸವರಾಜ್, ವಲಯದ ಮೇಲ್ವಿಚಾರಕರಾದ ಮಂಜಣ್ಣ ,ಜ್ಞಾನ ವಿಕಾಸ ಸಮಾನ್ಯಾಧಿಕಾರಿ ರೇಖಾ , ಆಡಳಿತ ಪ್ರಬಂಧಕರ ರಾಜೇಶ್, ಸೇವಾ ಪ್ರತಿನಿಧಿ ಗಂಗಮ್ಮ ಹಾಗೂ ಸಂಘದ ಸದಸ್ಯರು ಹಾಗೂ ಊರಿನ ಸ್ಥಳೀಯ ಜನರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *