ಕನ್ನಡ,ಕನ್ನಡಿಗ,ಕರ್ನಾಟಕದ ಉಳಿವಿಗಾಗಿ ಕೆ ಆರ್ ಎಸ್ ಪಕ್ಷಕ್ಕೆ ಬೆಂಬಲಿಸಿ…

ಕನ್ನಡ,ಕನ್ನಡಿಗ,ಕರ್ನಾಟಕದ ಉಳಿವಿಗಾಗಿ ಕೆ ಆರ್ ಎಸ್ ಪಕ್ಷಕ್ಕೆ ಬೆಂಬಲಿಸಿ…

ಹೊಸಪೇಟೆಯಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿ.ಕರುನಾಡಿನ ಆರೂವರೆ ಕೋಟೆ ಜನಗಳನ್ನು ಒಟ್ಟುಗೂಡಿಸಬೇಕು ಅವರೆಲ್ಲರನ್ನು ಜಾಗೃತಿ ಮಾಡಬೇಕು ಆ ಮೂಲಕ ಕರುನಾಡಿನ ಸಮಸ್ತರು ಈ ವರೆಗೆ ಅನುಭವಿಸಿದ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ,ಮೋಸ ವಂಚನೆಗಳಿಂದ ವಿಮೋಚನೆ ಹೊಂದಬೇಕೆಂದರೆ ಕೆ ಆರ್ ಎಸ್ ಪಕ್ಷಕ್ಕೆ ಸೇರಬೇಕು ಎಂಬ ಹಿನ್ನಲೆಯಲ್ಲಿ ಪಕ್ಷ ಆರಂಭಿಸಿರುವ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಎಂಬ ಅಭಿಯಾನ ಇದೇ ತಿಂಗಳ ಆರರಿಂದ ಪ್ರಾರಂಭಿಸಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸೋಮಸುಂದರ ಕೆ ಎಸ್ ಅವರು ತಿಳಿಸಿದರು.ಇಂದು ಹೊಸಪೇಟೆ ನಗರದ ಅಂಬೇಡ್ಕರ್ ಹಾಗೂ ವಾಲ್ಮೀಕಿ ಮೂರ್ತಿ ಗಳಿಗೆ ಮಾಲಾರ್ಪಣೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸೋಮಸುಂದರ್ ಅವರು ಇಲ್ಲಿವರೆಗೆ ನಮ್ಮನ್ನಾಳಿದ ಜೆ ಸಿ ಬಿ(ಜೆಡಿಎಸ್,ಕಾಂಗ್ರೆಸ್ ಬಿಜೆಪಿ) ಪಕ್ಷವಾಗಿ ಸೃಷ್ಟಿದ ಈ ನಾಟಕಗಳಿಗೆ ಮೋಕ್ಷ ನೀಡುವಂತ ಕಾಲ ಬಂದಿದೆ ಇಂತಹ ಸಂದರ್ಭವನ್ನು ಕೆ ಆರ್ ಎಸ್ ಪಕ್ಷವು ಸೃಷ್ಟಿದ್ದು ಸಮಸ್ತ ವಿಜಯನಗರ ಜಿಲ್ಲೆಯ ಬಂದವರು ದೇಣಿಗೆ ನೀಡಿ ಆ ಮೂಲಕ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಎಂದು ಆಹ್ವಾನ ನೀಡಿದರು.ನಂತರ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಜಿಲ್ಲೆಯಲ್ಲಿ ಜನ ಬದುಕಿನ ಸಮಸ್ಯೆಗಳು ನಿತ್ಯ ನಿರಂತರ ಎನ್ನುವಂತಾಗಿ ಸಾಮಾನ್ಯ ಜನರಿಗೆ ಉತ್ತಮ ಜನ ಜೀವನ ನಡೆಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರದ ಯಾವುದೇ ಯೋಜನೆಗಳು ಲಾಭಗಳು ಹಿಂದುಳಿದವರಿಗೆ,ಬಡವರಿಗೆ,ರೈತರಿಗೆ,ಮಹಿಳೆಯರಿಗೆ ತಲುಪದಂತಾಗಿದ್ದು ಎಲ್ಲಾ ಸೇವೆ ಸೌಲಭ್ಯಗಳು ಕೇವಲ ವಿವಿಧ ಪಕ್ಷಗಳ ಮುಖಂಡರ,ಹಿಂಬಾಲಕ ಪಾಲಾಗುತಿದ್ದು ಇದನ್ನು ಗಮನಿಸದೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆಡಳಿತ ನಿರ್ವಹಣೆ ಮಾಡುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕೆ ಆರ್ ಎಸ್ ಪಕ್ಷವು ಖಂಡಿತವಾಗಿಯೂ ಆಡಳಿತಕ್ಕೆ ಬರಲಿದ್ದು ಸರ್ವ ಜನಾಂಗದ ಅಭಿವೃದ್ಧಿಗಾಗಿ ಕರ್ನಾಟಕ ಏಳಿಗೆಗಾಗಿ ಸ್ರಮಿಸಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್, ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ, ಶಿವರಾಜ್ ಕಪಗಲ್ ಪ್ರಸನ್ನ ಕುಮಾರ್,ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವರುಣ್ ಕುಮಾರ್ ತೋರಣಗಟ್ಟೆ, ಉಪಾಧ್ಯಕ್ಷರಾದ ಚನ್ನವೀರ ಚಿತ್ತಾರ, ತಾಲೂಕ್ ಅಧ್ಯಕ್ಷರಾದ ನಜೀರ್ ಸಾಬ್,ಪ್ರಧಾನ ಕಾರ್ಯದರ್ಶಿ ಕೆ ಕೃಷ್ಣ, ನಾಗರಾಜ ಗೌಳಿ, ಶರಣಪ್ಪ,ಯಮನಪ್ಪ, ಮೌಲ ಹುಸೇನ್,ಅಂಜನಿ, ಕೋಟೇಶ,ಯಮನೂರಿ,ರಾಧಾ,ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *