ಗುಡೇಕೋಟೆ : ಪ‍ಾರಂಪರಿಕ ವೈದ್ಯ ಪದ್ಧತಿ ಹೆಸರಲ್ಲಿ ಮದ್ದು ತೆಗೆಯೋ ನೆಪದಲ್ಲಿ ಬೇಕಾ ಬಿಟ್ಟಿ ಹಣ ವಸೂಲಿ ದಂಧೆ..

ಗುಡೇಕೋಟೆ : ಪ‍ಾರಂಪರಿಕ ವೈದ್ಯ ಪದ್ಧತಿ ಹೆಸರಲ್ಲಿ ಮದ್ದು ತೆಗೆಯೋ ನೆಪದಲ್ಲಿ ಬೇಕಾ ಬಿಟ್ಟಿ ಹಣ ವಸೂಲಿ ದಂಧೆ..

ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಕಳೆದ ಹತ್ತಾರು ವರ್ಷಗಳಿಂದ. ಪಾರಂಪರಿಕ ವೈದ್ಯಕೀಯ ಹೆಸರಲ್ಲಿ , ಹೊಟ್ಟೆಗಿನ ಮದ್ದು ತೆಗೆಯುವ ನೆಪದಲ್ಲಿ. ಚಿಕಿತ್ಸೆ ಅರಸಿ ಬಂದವರಿಂದ , ಬೇಕಾ ಬಿಟ್ಟಿಯಾಗಿ ಹಣಪೀಕಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಬೆರೆಳೆಣಿಕೆಯಷ್ಟು ಪಾರಂಪರಿಕ ವೈದ್ಯ ಚಿಕಿತ್ಸೆ ನೀಡೋರಿದ್ದರು , ಆದರೆ ಈಗ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ತಮ್ಮ ಕಸುಬನ್ನು ಮಾಡುತ್ತಿದ್ದಾರೆ. ಮತ್ತು ಚಿಕಿತ್ಸೆ ಅರಸಿ ಬಂದ ಜನರಿಗೆ ತಾವು ನೀಡೋ , ಅತ್ಯಲ್ಪ ಬೆಲೆಯ ಔಷದೋಪಚಾರಕ್ಕೆ 500ರೂ ರಿಂದ 1000ರೂ ವರೆಗೆ ಪೀಕಲಾಗುತ್ತಿದೆ ಎಂಬ ದೂರಿದೆ. ಗುಡೇಕೋಟೆ ಗ್ರಾಮ ವೀರ ಒನಿತೆ ಒನಕೆ ಓಬವ್ವಳ ತವರೂರಾಗಿದ್ದು , ಪಾಳೆಗಾರರ ಆಳ್ವಕೆಯ ಅಸಂಖ್ಯಾತ ಕುರಿಹುಗಳು ಕರಡಿದಾಮ ಸೇರಿದಂತೆ. ಅನೇಕ ವಿಶಿಷ್ಟ ಸಂಗತಿಗಳಿಂದಾಗಿ ಪ್ರಖ್ಯಾತಿ ಹೊಂದಿದ್ದು , ಆದರೆ ಈ ಮದ್ದು ನೀಡೋ ಮೂಲಕ. ಮದ್ದು ಚಿಕ್ಕಿತ್ಸೆ ಅರಸಿ ಬಂದ ಮುಗ್ದ ಅಮಾಯಕರಿಂದ , ಬೇಕಾ ಬಿಟ್ಟಿ ಹಣ ಪೀಕುವ ದಂಧೆಯಿಂದಾಗಿ ಕುಖ್ಯಾತಿ ಹೊಂದುವ ಆತಂಕವುಂಟಾಗಿದೆ ಎಂದು. ಗುಡೇಕೋಟೆ ಗ್ರಾಮದ ಕೆಲ ಸಂಘಟನೆಗಳ ಪದಾಧಿಕಾರಿಗಳು , ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಲೆ ತಲಾಂತರಗಳಿಂದ ತಮ್ಮ ಪೂರ್ವಜರು ನೀಡುತ್ತಿದ್ದ ನಾಟಿವೈದ್ಯ ಚಿಕಿತ್ಸೆ ಪದ್ದತಿಯನ್ನು , ತಾವು ಮುಂದುವರೆಸಿಕೊಂಡು ಬಂದಿರುವುದಾಗಿ ಕೆಲವರು ಹೇಳಿಕೊಳ್ಳುತ್ತಾರಾದರು. ಇನ್ನುಳಿದವರು ಯಾವುದೇ ಅನುಭವ ವಿಲ್ಲದವರು , ಯಾವುದೇ ತರಬೇತಿ ವೈದ್ಯಕೀಯ ಪದ್ಧತಿಯ ಕನಿಷ್ಠ ಪ್ರಜ್ಞೆ ಇಲ್ಲದವರು. ಸಾಮಾನ್ಯ ಜ್ಞಾನ ಇಲ್ಲದವರು ಅಸಂಬದ್ಧವಾಗಿ ಔಷಧಿ ನೀಡುತ್ತಿದ್ದು , ಅದಕ್ಕೆ ಪ್ರತಿಯಾಗಿ ಬೇಕಾ ಬಿಟ್ಟಿಯಾಗಿ ಹಣ ಪೀಕಲಾಗುತ್ತಿದೆ ಎಂಬ ದೂರು ಇದೆ. *ಸಂಬಂಧಿಸಿದ ಇಲಾಖೆಗಳ ಮೌನ.!?*- ಗುಡೇಕೋಟೆ ಗ್ರಾಮ ಮದ್ದು ತೆಗೆಯೋ ದಂಧೆಗೆ ಹೆಸರುವಾಸಿಗಿದೆ ಎಂದು , ಗ್ರಾಮದ ಮುಗ್ದರು ವೃದ್ಧರು ಹೇಳಿಕೊಳ್ಳುತ್ತಿದ್ದಾರಾದರು… ಪಾರಂಪರಿಕ ನಾಟಿ ವೈದ್ಯಕೀಯ ಮದ್ದು ತೆಗೆಯೋ ನಾಟಿ ವೆೈದ್ಯ ಚಿಕಿತ್ಸೆ ನೆಪದಲ್ಲಿ , ಭಾರೀ ಮೊತ್ತದ ಹಣ ಪೀಕುವ ಭಾರೀ ಹಾಗೂ ಬೃಹತ್ ದಂಧೆಯಾಗಿದೆ ಎಂದು ಹೇಳಲಾಗುತ್ತಿದೆ. ಅದು ಅನಧಿಕೃತವಾಗಿ ನಡೆಯುವ ದಂಧೆಯಾಗಿದ್ದು , ಸಂಬಂಧಿಸಿದ ಇಲಾಖೆಗಳು ಚಕಾರ ಎತ್ತುತ್ತಿಲ್ಲ ಏಕೆ.!?. ಗಾಂಧೀಜಿಯವರ ನೀತಿ ಸಾರುವ ಮೂರು ಕೋತಿಗಳ ತರ ತಟಸ್ಥ ನೀತಿ ತಾಳಿವೆಯೋ..ಏನೋ.., ಒಂದೂ ತಿಳಿಯದಾಗಿದೆ ಎಂಬುದು ಪ್ರಜ್ಞಾವಂತರ ಚಿಂತನೆಯಾಗಿದೆಯಂತೆ. ಪ್ರತಿವಾರದ ಗುರುವಾರ ಹಾಗೂ ಭಾನುವಾರ ಗಳಂದು , ಮದ್ದು ತೆಗೆಯುವ ನಾಟಿ ಚಿಕಿತ್ಸೆ ಹೆಸರಲ್ಲಿ. ಪೌಡರ್ ನ್ನು ಸೇವಿಸಲು ನೀಡಿ ನೆರವು ಅರಸಿ ಬಂದವರಿಂದ , ತಲಾ ಓರ್ವರಿಂದ 500ರೂ ರಿಂದ 1000ರೂಗಳಂತೆ ಪೀಕಲಾಗುತ್ತಿದೆಯಂತೆ. ಪ್ರತಿ ವಾರದ ಗುರುವಾರ ಹಾಗೂ ಭಾನುವಾರಗಳಲ್ಲಿ , ವಾರಕ್ಕೆರೆಡು ಬಾರಿ ಈ ನಾಟಿ ಔಷದೋಪಚಾರ ನಡೆಸಲಾಗುತ್ತಿದೆ. ತಲಾ ಒಬ್ಬರಿಗೆ ಕನಿಷ್ಠ 500ರೂ ಗಳಂತೆ ಔಷದೋಪಚಾರಕ್ಕೆ ಪಡೆಯಲಾಗುತ್ತದೆ. ಹದನೈದಕ್ಕೂ ಹೆಚ್ಚು ಔಷದೋಪಚಾರ ಮಾಡುವ ಅಡ್ಡೆಗಳಿದ್ದು , ಒಂದು ಅಡ್ಡೆಯಲ್ಲಿ ಪ್ರತಿ ಭಾರೀಯೂ ಕನಿಷ್ಠ ಹತ್ತರಿಂದ ಇಪ್ಪತ್ತೈದು ಜನರು ಔಷಧೋಪಚಾರ ಪಡೆಯಲು ಬಂದಿರುತ್ತಾರೆ. ಒಂದು ಅಡ್ಡೆಯಲ್ಲಿ ಒಂದು ದಿನದಲ್ಲಿ ಕನಿಷ್ಠ ಹತ್ತು ಹದಿನೈದು ಸಾವಿರ ರೂಗಳ , ವ್ಯಾಪಾರ ವಹಿವಾಟು ಜರುಗಲಿದೆ ಎಂಬ ಮಾಹಿತಿ ಇದೆ. ಅದರಂತೆ ಪ್ರತಿ ವಾರದ ಎರೆಡು ದಿನಗಳು ವಹಿವಾಟು ಜರುಗಲಿವೆ. ಪಾರಂಪಾರಿಕ ವೈದ್ಯ ವೃತ್ತಿಯ ಬಗ್ಗೆ ಮಾಹಿತಿಯನ್ನೇ ಅರಿಯದವರು , ಔಷಧ ಬಳಕೆ ಹಾಗೂ ಪರಿಣಾಮ ಚಿಕಿತ್ಸಾ ವಿಧಾನ ಅರಿಯದವರು. ಮದ್ದು ತೆಗೆಯುವ ಪಾರಂಪರಿಕ ಔಷಧ ನೀಡೋ ನೆಪದಲ್ಲಿ ಹಲವರು , ತಮ್ಮತ್ತ ನೆರವು ಬಯಸಿ ಬರುವವರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡೋ ಮೂಲಕ. ನೊಂದವರನ್ನು ಶೋಷಣೆಗೀಡು ಮಾಡುವ , ನಾಟಿ ವೈದ್ಯರ ಸೋಗಿನಲ್ಲಿರುವ ವಸೂಲಿಕೋರರ ಭಾರೀ ದಂಡು ಗುಡೇಕೋಟೆಯಲ್ಲಿರುವುದಾಗಿ ಹಲವು ಸ್ಥಳೀಯರು ಮಾಹಿತಿ ನೀಡಿದ್ದಾರೆ. *DC SP ರವರು ದಿಢೀರ್ ದಾಳಿ ನಡೆಸಿ , ಶಿಸ್ಥು ಕ್ರಮ ಜರುಗಿಸಬೇಕಿದೆ*-ಈ ಮಂಕುಭೂದಿ(ಪೌಡರ್) ನೀಡಿ ಹಣ ವಸೂಲಿ ಮಾಡುವ ದಂಧೆಯನ್ನು , ಗುಡೇಕೋಟೆಯಲ್ಲಿಯೇ ಹದಿನೈದು ಇಪ್ಪತ್ತು ಜನರು ಮಾಡುತ್ತಿದ್ದಾರೆಂದು ಗ್ರಾಮದ ಯುವ ಮುಖಂಡರು ದೂರಿದ್ದಾರೆ. ಸಂಬಂಧಿಸಿದಂತೆ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳ ಉನ್ನತಾಧಿಕಾರಿಗಳು , ಮಾಧ್ಯಮದವರು , ಖುದ್ದು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ. ಕ‍ಾನೂನು ರೀತ್ಯ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು , ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ. ಗುಡೇಕೋಟೆಯಲ್ಲಿ ಪ್ರತಿ ವಾರದ ಎರೆಡು ದಿನಗಳ ಕಾಲ ನಡೆಯುವ , ಮದ್ದು ತೆಗೆಯುವ ನಾಟಿ ವೈದ್ಯ ಚಿಕಿತ್ಸಾ ಅಡ್ಡೆಗಳ ಮೇಲೆ ,ಅಗತ್ಯ ಖಚಿತ ಮಾಹಿತಿ ಪಡೆದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಬೇಕಿದೆ. ಆರೋಗ್ಯ ಇಲಾಖೆ , ಪೊಲೀಸ್ ಇಲಾಖೆ , ಮಾಧ್ಯಮದವರು , ಜಿಲ್ಲಾಧಿಕಾರಿಗಳು , ಮತ್ತು ಆಯುಷ್ಯ ಇಲಾಖಾಧಿಕಾರಿಗಳು. ದ‍ಿಡೀರ್ ದಾಳಿ ನಡೆಸಬೇಕು ಎಂದು ಗುಡೇಕೋಟೆ ಗ್ರಾಮಸ್ಥರು , ಹಾಗೂ ವಿವಿದ ಗ್ರಾಮಗಳ ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Leave a Reply

Your email address will not be published. Required fields are marked *