ಶ್ರೀ ಯೋಗೀಶ್ವರ ಯಜ್ಞವಲ್ಕ್ಯ ಮಂದಿರದಲ್ಲಿ ಜನಿವಾರ ಧಾರಣೆ…. ಸನಾತನ ಸಂಸ್ಕೃತಿಯಲ್ಲಿ ಜನಿವಾರ ಧಾರಣೆ ಉತ್ತಮ ಸಂಸ್ಕಾರ… ಮುರಳಿದರ್ ಕುಲಕರ್ಣಿ …

ಗಂಗಾವತಿ… ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಜನಿವಾರ ಧಾರಣೆ ಉತ್ತಮ ಸಂಸ್ಕಾರವಾಗಿದೆ ಎಂದು ಶ್ರೀ ಯೋಗೇಶ್ವರ ಯಾಜ್ಞವಲ್ಕ ಸೇವಾ ಟ್ರಸ್ಟಿನ ಅಧ್ಯಕ್ಷ ಮುರಳಿದರ ಕುಲಕರ್ಣಿ ಹೇಳಿದರು. ಅವರು ಶನಿವಾರದಂದು ಯಾಜ್ಞವಲ್ಕ್ಯ ಮಂದಿರದಲ್ಲಿ ಮಂದಿರದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ ಶುಕ್ಲ ಯ ಜುರ್ವೇದಿಗಳಿಗೆ ಜನಿವಾರ ಧಾರಣೆ ಹಾಗೂ ಉಪಕರ್ಮ ಧಾರ್ಮಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಇಂದಿನ ಶಿಕ್ಷಣದ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ವಟುಗಳಿಗೆ ಉಪನಯದ ಸಂಸ್ಕಾರವನ್ನು ನೀಡುವುದರ ಮೂಲಕ ಗುರುಕುಲ ಶಿಕ್ಷಣಕ್ಕೆ ಕಳುಹಿಸಲಾಗುತ್ತಿತ್ತು. ಗುರುಗಳ ಸೇವೆಯ ಮೂಲಕ ವೇದ ಉಪನಿಷತ್ತು ಕಲಿತು ಧರ್ಮ ರಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಆಚರಣೆ ಕುರಿತು ಮಾತನಾಡಿದರು. ಶನಿವಾರ ಧಾರಣೆ ಹಾಗೂ ಉತ್ಸರ್ಜನ ಉಪಕರ್ಮ ಹೋಮ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವೇದಮೂರ್ತಿ ಪ್ರದೀಪ್ ಆಚಾರ್ ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗೋಪಿನಾಥ ದಿನ್ನಿ. ರಾಘವೇಂದ್ರ ಲೇ ಕ್ಕಿಹಾಳ. ಸತೀಶ್ ಕೋಮಲಾಪುರ. ಆನಂದ. ಶೇಷಗಿರಿ ಕುಲಕರ್ಣಿ. ಕೃಷ್ಣ ಪ್ರಸನ್ನ ಆಲಂಪಲ್ಲಿ. ಸೇರಿದಂತೆ ಅಪಾರ ಸಮಾಜ ಬಾಂಧವರು ಪಾಲ್ಗೊಂಡಿದ್ದು.

