ಕಾರ್ಮಿಕರಿಗೆ ಉದ್ಯೋಗ ಭದ್ರತೆ. ಸಾಮಾಜಿಕ ಭದ್ರತೆ.ವಿಮೆ ಸೌಲಭ್ಯ ಹೆಚ್ಚಳಕ್ಕೆ ಆಗ್ರಹ: ಜಿಲ್ಲಾಧ್ಯಕ್ಷ ಎ ಎಲ್ ತಿಮ್ಮಣ್ಣ …

ಕೊಪ್ಪಳ: ನಗರದ ಕಾಲೇಜ ಆವರಣದಿಂದ ಅಶೋಕ ವೃತ್ತದ ವರೆಗೆ ಮೆರವಣಿಗೆ ಮುಖಾಂತರ ಬಂದು ಮನವಿ ಸಲ್ಲಿಸಲಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಎ ಎಲ್ ತಿಮ್ಮಣ್ಣ ಕಾರ್ಮಿಕರ ಭತ್ತೆಯಲ್ಲಿ ಹೆಚ್ಚಳ. ಸಾಮಾಜಿಕ ಭದ್ರತೆ, ಮತ್ತು ಉದ್ಯೋಗ ಭದ್ರತೆ ಮುಂತಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಡೆಸಲಾಗುತ್ತದೆ.ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳಿಗಾಗಿ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೊಪ್ಪಳ ಜಿಲ್ಲಾ ಕಾರ್ಯಾಲಯದಿಂದ ಬೆಂಬಲ ಕೊಡಲಾಗಿದೆ ಕಾರ್ಮಿಕರು ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಮುಂತಾದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಿಕೊಡಬೇಕು. ಜೊತೆಗೆ ಹೊಸ ಕಾರ್ಮಿಕ ಕಾನೂನುಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ ಹುಲುಗಪ್ಪ . ಕೆ ಎಸ್ ಜನಾರ್ದನ. ಮುಂತಾಜ ಬೇಗಂ. ತಾಹಿರಬೇಗಂ. ಸುನಿತಾ. ಮಂಜುನಾಥ. ತುಕರಾಮ. ಪಾತ್ರೂಟಿ. ಆಡವೆಪ್ಪಚಲವಾದಿ. ಆಕ್ಕಮಹಾದೇವಿ.ಭಾರತಿ.ಬಸಿರಾಳು. ಸೇರಿದಂತೆ ಕಾರ್ಮಿಕ ಸಂಘಟನೆಯ ಸದಸ್ಯರು ಮತ್ತು ಎಐಸಿಟಿಯು ಸಂಘಟನೆ ಮುಖಂಡರು ಮತ್ತು ಸದಸ್ಯರು ಭಾಗವಹಿಸಿದ್ದರು.
