ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಹೋರಾಟ ಸಮಿತಿ ಹಾಗೂ ಮಾದಿಗ ಸಮಾಜದಿಂದ ಬೃಹತ್ ಪ್ರತಿಭಟನೆ…

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಹೋರಾಟ ಸಮಿತಿ ಹಾಗೂ ಮಾದಿಗ ಸಮಾಜದಿಂದ ಬೃಹತ್ ಪ್ರತಿಭಟನೆ…

‘ಮಾನ್ಯಳ ಹೆಸರಿನಲ್ಲಿ ಉಗ್ರ ಶಿಕ್ಷೆಯ ಕಾನೂನು ರೂಪಿಸಿ’

ಗಂಗಾವತಿ: ಹೆಸರಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆ, ಹಲ್ಲೆ, ದೌರ್ಜನ್ಯ, ತಾರತಮ್ಯದಂತಹ ಕೃತ್ಯಗಳ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ನಗರದ ಬಾಬು ಜಗಜೀವನರಾಮ್ ವೃತ್ತದ ಬಳಿ ಬುಧವಾರ ಹುಬ್ಬಳ್ಳಿ ಮರ್ಯಾದೆ ಹತ್ಯೆ ಹೋರಾಟ ಸಮಿತಿ ಸದಸ್ಯರು ಹಾಗೂ ಮಾದಿಗ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.

ಸಮಾಜದ ಮುಖಂಡ ಹುಸೇನಪ್ಪಸ್ವಾಮಿ ಮಾದಿಗ, ಮಾತನಾಡಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಲಿತರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇವುಗಳಿಗೆ ಕಡಿವಾಣವೇ ಇಲ್ಲದಂತಾಗಿವೆ. ಈಚೆಗೆ ಹುಬ್ಬಳ್ಳಿಯಲ್ಲಿ ಮಾನ್ಯ ಮರ್ಯಾದೆ ಹತ್ಯೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥಾಗಿದೆ.ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಮುಖಂಡ ಹುಲಿಗೇಶ ದೇವರಮನಿ, ‘ಜಾತಿ ತಾರತಮ್ಮ ತಡೆಗೆ ಬಸವಣ್ಣ, ಡಾ.ಅಂಬೇಡ್ಕರ್ ಅಂತರ್‌ಜಾತಿ
ವಿವಾಹಗಳಿಗೆ ಕಾನೂನಿನಲ್ಲಿ ಅವಕಾಶವಿದ್ದರೂ ಸಹ ಮರ್ಯಾದೆ ಹತ್ಯೆ ಎಂತಹ ಪ್ರಕರಣಗಳು ರಾಜ್ಯದ್ಯಂತ ಜ ರುಗುತ್ತಿದ್ದರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ಕಿಡಿ ಕಾರಿದರು. ದಲಿತ ಕುಟುಂಬದ ಯುವಕರ ಮನೆಗೆ ರಕ್ಷಣೆ ನೀಡಬೇಕು ಯಾವುದೇ ಅಹಿತಕರ ಘಟನೆ ಜರುಗಿದರೆ ಇದಕ್ಕೆ ಸರ್ಕಾರದ ನೆರ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿಯ ಬಾಬು ಜಗಜೀವನರಾಂ ವೃತ್ತದ ಬಳಿ ಬುಧವಾರ ಹುಬ್ಬಳ್ಳಿ ಮರ್ಯಾದೆ ಹತ್ಯೆ ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು

ಮುಖಂಡ ಗುಂಡೂರು, ಹನುಮೇಶ ಮಾತನಾಡಿ. ಜಾತಿ ವೈಷಮ್ಯದಿಂದ ಪ್ರೇಮಿಗಳ, ಅವರ ಕುಟುಂಬಸ್ಥರ ಮೇಲೆ ನಡೆಸುವ ಹಲ್ಲೆ, ಹತ್ಯೆಯಂತ ಅಪರಾಧಗಳು ಘೋರ ಅಪರವಾಗಿದ್ದು

ಮಾನ್ಯಳ ಮರ್ಯಾದೆಗೇಡು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಾನ್ಯಳ ಹತ್ಯೆ ಮಾಡಿದ ಆರೋಪಿತರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಹೇಳಿದರು ಅಪರಾಧಗಳಾಗಿವೆ.

ಇದಕ್ಕೂ ಮುನ್ನ ಜಗಜೀವನರಾಂ ಬಾಬು ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ನಡೆಸಿ, ಮಾನ್ಯಗಳಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥರನ್ನು ಗಲ್ಲಿಗೇರಿಸುವಂತೆ

ಒತ್ತಾಯಿಸಿ, ತಹಶೀಲ್ದಾರ್‌ಯು.ನಾಗರಾಜ ಅವರಿಗೆ ಮನವಿಪತ್ರ ಸಲ್ಲಿಸಿದರು.

ದಲಿತ ಸಮಾಜದ ಮುಖಂಡರಾದ ಶಿವಪ್ಪ ಮಾದಿಗ, ರುದ್ರೇಶ ಹೊಸಳ್ಳಿ, ವೆಂಕೊಬ ಎ. ಐಹೊಳೆ, ನಾಗರಾಜ ಸೋಮನಾಥ ಸಂಗಾಪುರ, ಬಂಡಾರಿ, ಹಂಪೇಶ ಹರಿಗೋಲು, ಶಂಕರ ಸಿದ್ದಾಪುರ, ವೆಂಕೂಬ ಕಂಪ್ಲಿ, ಕೆ.ರಾಮಣ್ಣ, ಉಮೇಶ ಜೇಕಿನ್, ವೆಂಕೋಬ ವಿಠಲಾಪುರ ಸೇರಿ ಸಮಾಜದ ಹಿರಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *