ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಅಭಿನಂದನೆ…

ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಅಭಿನಂದನೆ…

ಕೊಪ್ಪಳ ಜಿಲ್ಲೆಯ ಹೆಮ್ಮೆಯ ಮತ್ತು ಸುದೀರ್ಘ ನಾಲ್ಕು ದಶಕದ ದಿನಪತ್ರಿಕೆ “ಸುವರ್ಣಗಿರಿ ಕನ್ನಡ ದಿನಪತ್ರಿಕೆ ಗೆ ಆಂದೋಲನ ಪತ್ರಿಕೆಯ ದತ್ತಿ ಪ್ರಶಸ್ತಿ ಲಭಿಸಿದ್ದು ಅಭಿನಂದನೆಗಳು.ಅದೇ ರೀತಿ ಕೊಪ್ಪಳ ಟಿವಿ 5 ಕನ್ನಡ ವಾಹಿನಿಯ ಪತ್ರಕರ್ತ ನಾಗರಾಜ ಹೇಮಗುಡ್ಡ ಇವರಿಗೆ ಪ್ರಜಾ ಸಂದೇಶ ಪತ್ರಿಕೆಯ ದತ್ತಿ ಪ್ರಶಸ್ತಿ ಹಾಗೂ ಉದಯವಾಣಿ ಕುಷ್ಟಗಿ ಹಿರಿಯ ವರದಿಗಾರ ಮಂಜುನಾಥ ಮಹಾಲಿಂಗಪೂರ ಇವರಿಗೆ ಜೀವಮಾನದ ಸಾಧನೆಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಿಂಧನೂರಿನ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಚಂದ್ರಶೇಖರ ಬೆನ್ನೂರು ಇವರಿಗೆ ಅಭಿಮನ್ಯು ದತ್ತಿ ಪ್ರಶಸ್ತಿ ಹಾಗೂ ಹೊಸಪೇಟೆಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ ಇವರಿಗೆ ಪ್ರಶಸ್ತಿ ಜೀವಮಾನದ ಸಾಧನೆಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಸೇರಿದಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಲ್ಲಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು… ಆಯ್ಕೆಗೆ ಸಹಕರಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕಾರ್ಯದರ್ಶಿಗಳಿಗೆ ಧನ್ಯವಾದಗಳು..-ಕೆ.ನಿಂಗಜ್ಜ ಪತ್ರಕರ್ತರು ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ…

Leave a Reply

Your email address will not be published. Required fields are marked *