ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಿದೆ : ಡಿಂಡಿ ಮಹರ್ಷಿ…

ಬಳ್ಳಾರಿ / ಕಂಪ್ಲಿ : ಕನಕದಾಸರು ಸಮಾಜನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದು, ಅವರ ಜೀವನ ಸಾರವನ್ನು ನಾವೆಲ್ಲರೂ ಅನುಸರಿಸೋಣ ಎಂದು ಕಂಪ್ಲಿ ತಾಲೂಕು ಹಾಲುಮತ(ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ ಹೇಳಿದರು.ಪಟ್ಟಣದ ಬಳ್ಳಾರಿ ರಸ್ತೆಯ ಎಚ್‌ಪಿ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಕನಕದಾಸ ವೃತ್ತದಲ್ಲಿ ಭಾವಚಿತ್ರಕ್ಕೆ ಹಾಗೂ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶನಿವಾರ ಆಚರಿಸಿದ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ತತ್ವ, ಆದರ್ಶ ಮತ್ತು ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಿದೆ. ಸಮಾಜದ ಮೇಲು, ಕೀಳು ಹಾಗೂ ಮೂಢನಂಬಿಕೆ ಹೋಗಲಾಡಿಸಲು ಕನಕದಾಸರು ಶ್ರಮಿಸಿದರು. ಅವರ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಉಪನ್ಯಾಸಕ ರಾಜಕುಮಾರ ಕನಕದಾಸರ ಚರಿತ್ರೆಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಕನಕದಾಸರು ಬರೆದಂತಹ ರಾಮಧಾನ್ಯಚರಿತ, ಹರಿಭಕ್ತಸಾರ ಹಾಗೂ ಅವರ ಅನೇಕ ಕೃತಿಗಳು ಮನುಷ್ಯಪರವಾಗಿದೆ. ಅವರ ಕೃತಿಗಳನ್ನು ಓದುವ ಮೂಲಕ ಅವರ ಚಿಂತನೆಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಮಾಜದ ನಗರ ಘಟಕ ಅಧ್ಯಕ್ಷ ಕೆ.ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಬಿ.ಶೇಖರ, ಮುಖಂಡರಾದ ಕೆ.ಯಮ್ಮನೂರಪ್ಪ, ಕೆ.ಹರಿನಾಥ, ಕುರಿ ಹುಸೇನಪ್ಪ, ಬಿ.ಲಕ್ಷ್ಮಣ, ಕುರಿ ಮಂಜುನಾಥ, ಬಲಕುಂದಿ ರಾಜಶೇಖರ, ಮೈಲಾರಿ ಯಲ್ಲಪ್ಪ, ಬಿಂಗಿ ವಿರುಪಣ್ಣ, ಉಳ್ಳೂರು ಪಕ್ಕೀರಪ್ಪ, ದೇವಸಮುದ್ರ ಪಾಂಡುರಂಗಪ್ಪ, ಎಂ.ಆನಂದ ಸೇರಿದಂತೆ ಅನೇಕರಿದ್ದರು. ತಹಶೀಲ್ದಾರ್ ಕಛೇರಿ : ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕನಕದಾಸರ ಜಯಂತಿ ಅರ್ಥಪೂರ್ಣವಾಗಿ ಆಚರಿಸಿದರು. ತಹಶೀಲ್ದಾರ್ ಜೂಗಲ್ ಮಂಜುನಾಯಕ, ಕಂಪ್ಲಿ ತಾಲೂಕು ಹಾಲುಮತ(ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ, ಸಹಕಾರ ಸಂಘದ ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ ಸೇರಿದಂತೆ ಹಾಲುಮತ ಸಮಾಜದವದು ಹಾಗೂ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್
