ಕೂಡ್ಲಿಗಿ : ಹೆಂಗಳೆಯರ ನಾಡ ಹಬ್ಬ ಗೌರಿ ಹಬ್ಬ ಆಚರಣೆ-

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕನ್ನಡ ನಾಡಿನ ಹೆಂಗಳೆಯರ ಹಬ್ಬ , ದೊಡ್ಡ ಗೌರಿ ಹಬ್ಬವಾಗಿದೆ. ನವಂಬರ್ 7ರಂದು ದೊಡ್ಡಗೌರಿ ಹುಣ್ಣಿಮೆ ಹಬ್ಬವನ್ನು , ನಾಡಿನಾದ್ಯಂತ ಬಹು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೂಡ್ಲಿಗಿ ಪಟ್ಟಣ ಸೇರಿದಂತೆ , ತಾಲೂಕಿನೆಲ್ಲೆಡೆಗಳಲ್ಲಿ ಗೌರಿ ಹಬ್ಬ ಬಹು ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಶ್ರೀಬಸವಲಿಂಗೇಶ್ವರ ದೇವಸ್ಥಾನ , ಶ್ರೀಪೇಟೆಬಸವೇಶ್ವರ ದೇವಸ್ಥಾನದಲ್ಲಿ , ಹಾಗೂ 10ನೇ ವಾರ್ಡಿನ ಪೋಸ್ಟ್ ಸಿದ್ಲಿಂಗಪ್ಪಸ್ವಾಮಿಯರವರ ಮನೆಯಲ್ಲಿ. ತಲೆ ತಲಾಂತರಗಳಿಂದ ಗೌರಿ ಪ್ರತಿಷ್ಠಾನೆ , ಹಾಗೂ ಆರಾಧನೆ ಧಾರ್ಮಿಕ ನೆಲೆಗಟ್ಟಿನಲ್ಲಿ ಸಂಪ್ರದಾಯ ಬದ್ದವಾಗಿ ಜರುಗಿಸಲಾಗುತ್ತಿದೆ. ಗೌರಿ ಹುಣ್ಣಿಯಂದು ವಿಧಿವತ್ತಾಗಿ ಗೌರಿ ಮೂರ್ತಿಯನ್ನು , ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ಸಂಜೆ ಸಮಯದಲ್ಲಿ ವಿಶೇಷವಾಗಿ ಆರಾಧಿಸಲಾಗುತ್ತದೆ. ಭಾದ್ರಪದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ , ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ ಇದೆ. ಮಲೆನಾಡಿನ ಕೆಲವೆಡೆ ಗೌರಿಯನ್ನು ಗಂಗೆಗೆ ಕಾಣಿಸಿದ ನಂತರ , ಅದೇ ಜಲವನ್ನು (ಗಂಗೆಯನ್ನು) ತಂದು ಪೂಜಿಸುವ ಆಚರಣೆ ಇದೆ. *ಬಾಲೆ ಗೌರಿ ಮಕ್ಕಳು*- ಗೌರಿ ಹಬ್ಬ ಎಂದರೆ ಹೆಂಗಳೆಯರು , ವಿಶೇಷವಾಗಿ ಬಾಲೆಯರು ಬಹು ಸಂಭ್ರಮಿಸುವ ಹಬ್ಬವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಸಂಪ್ರದಾಯಿಕ ಉಡುಗೆಯಾದ , ಸೀರಿ ಕುಪ್ಪಸ ತೊಡಿಸಿ ತಮ್ಮ ಮಕ್ಕಳನ್ನು ಗೌರಿ ಮಕ್ಕಳನ್ನಾಗಿ ಕಣ್ತುಭಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳು ಸಾಕ್ಷತ್ ಗೌರಿಯರಾಗಿ , ಕಂಗೊಳಿಸುತ್ತಿರುತ್ತಾರೆ. ಮಕ್ಕಳು ತಮ್ಮ ಪೋಷಕರು ತೊಡಿಸಿದ ಸೀರೆಯನ್ನುಟ್ಟು , ಸಕ್ಕರಾರತಿ ದೀಪದೊಂದಿಗೆ ಗೌರಿಗೆ ಆರತಿ ಬೆಳಗಲು ಹಾತೊರೆಯುತ್ತಿರುತ್ತಾರೆ. ಹುಣ್ಣಿಮೆಯಂದು ಪ್ರಾರಂಭಗೊಂಡ ಈ ಸಂಭ್ರಮ , ಸತತ ಮೂರು ದಿನಗಳ ಕಾಲ ಜರುಗಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಪ್ರದಾಯಿಕ ಸೀರೆಯನ್ನುಟ್ಟ ಬಾಲೆಯರು , ಭವಿಷ್ಯದ ಸಂಪ್ರಧಾಯಿಕ ಧಾರ್ಮಿಕ ಜನಪದೀಯ ಪ್ರತಿನಿಧಿಗಳಂತೆ ಗೋಚರಿಸುತ್ತಿರುತ್ತಾರೆ. *ಸೌಹಾರ್ಧತೆಗೆ ಸಾಕ್ಷಿ*- *ಭಜನಾರಾಧನೆ*-ಗೌರಿ ಹಬ್ಬವು ಸರ್ವರೂ ಸರ್ವರೊಳಗಾಗಿ , ಸಮಾನ ಮನಸ್ಕರಾಗಿ ಸೌಹಾರ್ಧತೆಯಿಂದ ಆಚರಿಸುವ ವಿಶಿಷ್ಟ ಹಬ್ಬವಾಗಿದೆ. ಹಬ್ಬವನ್ನು ಹಿಂದೂ ಧಾರ್ಮಿಕ ನೆಲೆಗಟ್ಟಿನಲ್ಲಿ ವೈಯಕ್ತಿವಾಗಿ ಮನೆ ಮನೆಯಲ್ಲಿ , ವಿಧಿ ವಿಧಾನಗಳಂತೆ ಆಚರಿಸಲಾಗುತ್ತದೆ. ಅದರೆ ಆಚರಣೆಯಲ್ಲಿ ಸಾಮ್ಯತೆ ಸೌಹಾರ್ದತೆ , ಸಹಭಾಗಿತ್ವ ಪರಸ್ಪರ ಸಹಕಾರ ಮನೋಭಾವಗಳು ಹಿಮ್ಮಡಿಸಿ ಮೇಳೈಸುತ್ತವೆ. ಶ್ರೀಪೇಟೆಬಸವೇಶ್ವರ ದೇವಸ್ಥಾನದಲ್ಲಿ , ಗೌರಿಗೆ ಸಕ್ಕರೆಯಾರತಿ ಬೆಳಗಿ ಆರಾಧಿಸಿದ ನಂತರ. ಶ್ರೀಪೇಟೆ ಬಸವೇಶ್ವರ ಭಜನಾ ತಂಡದವರಿಂದ , ತಡ ರಾತ್ರಿಯವರೆಗೆ ಭಜನಾರಾಧನೆ ಜರುಗಿಸಲಾಯಿತು. ನಂತರ ವಿಧಿವತ್ತಾಗಿ ಗೌರಿಯನ್ನು , ಗಂಗೆಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಶ್ರೀಪೇಟೆಬಸವೇಶ್ವರ ದೇವಸ್ಥಾನದ ಸೇವಾ ಸಮಿತಿಯವರು , ಶ್ರೀಪೇಟೆಬಸವೇಶ್ವರ ನಗರದ ಸಮಸ್ತ ಭಕ್ತಾದಿಗಳು. ಮಹಿಳೆಯರು , ಯುವಕ ಯುವತಿಯರು. ಮಕ್ಕಳು ಗೌರಿಹಬ್ಬದ ಆಚರಣೆಯಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428 /8151937428*
