ನರೇಗಾದಲ್ಲಿ ಪುರುಷ-ಮಹಿಳೆಗೆ ಸಮಾನ ಕೂಲಿವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ…

ನರೇಗಾದಲ್ಲಿ ಪುರುಷ-ಮಹಿಳೆಗೆ ಸಮಾನ ಕೂಲಿವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ…

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ನರೇಗಾ ಕೂಲಿಕಾರರು ಕಲಿಕೇರಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾನುವಾರ ಆಚರಿಸಲಾಯಿತು.ಈ ವೇಳೆ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ನರೇಗಾ ಯೋಜನೆಯಲ್ಲಿ ಯಾವುದೇ ಲಿಂಗ ತಾರತಮ್ಯ ಇಲ್ಲದೇ ಪುರುಷ-ಮಹಿಳೆಗೆ ಸಮಾನ ಕೂಲಿ ನೀಡಲಾಗುತ್ತಿದೆ. ಬಾಣಂತಿ ಮತ್ತು ಗರ್ಬಿಣಿಯರಿಗೆ ಕೆಲಸದಲ್ಲೂ ರಿಯಾಯತಿ ಕೂಡ ಇರುತ್ತದೆ ಎಂದರು.ಮಹಿಳೆ ಇಂದು ಎಲ್ಲ ರಂಗಗಳಲ್ಲೂ ಛಾಪು ಮೂಡಿಸುತ್ತಿದ್ದು, ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯಬೇಕಿದೆ. ಮಹಿಳೆಯರು ಸರಕಾರದಿಂದ ದೊರೆಯುವ ಯೋಜನೆಗಳ ಉಪಯೋಗ ಪಡೆದುಕೊಳ್ಳಳಬೇಕು. ಮಹಿಳೆಯರಿಗೆ ಮನೆಯಲ್ಲಿಯೂ ಪಾಲಕರು ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದರು.ಕೂಲಿಕಾರರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ವೇಳೆ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಮಹ್ಮದ್, ಜಿಕೆಎಂ ಸುಜಾತ, ಕಾಯಕಬಂಧುಗಳು ಇದ್ದರು.

Leave a Reply

Your email address will not be published. Required fields are marked *