ಬಡತನದಲ್ಲಿಯೇ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿದ ವಿಜಯಲಕ್ಷ್ಮಿ ಹಿರೇಮಠ,,,, ಇದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಲೇಖನ,,,

ಬಾಲ್ಯದಲ್ಲಿ ಬಡತನ ಮತ್ತು ಕಷ್ಟ ಇವುಗಳಿಂದ ನೊಂದಿದ್ದ ಕೃಷಿ ಚಟುವಟಿಕೆ ಜೀವನ ಆಧಾರ ಎನ್ನುವಂತೆ ಹಳ್ಳಿ ಒಂದರಲ್ಲಿ ಜೀವನ ಸಾಧಿಸುತ್ತಿದ್ದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಅವರದು ಇಂದು ಗಾಯನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮತ್ತು ಹೆಸರು ಮಾಡಿದ್ದಾರೆ ಚಿಕ್ಕಂದಿನಿಂದಲೆ ಏನಾದರೂ ಸಾಧನೆ ಮಾಡಬೇಕು ಎನ್ನುವ ಸಂಕಲ್ಪದಿಂದ ಗಾಯನ ಕ್ಷೇತ್ರದಲ್ಲಿ ಕೊಪ್ಪಳ ಜಿಲ್ಲೆ ಮತ್ತು ಗಂಗಾವತಿ ತಾಲೂಕಿನಲ್ಲಿ ಹೆಸರು ಮಾಡಿರುವ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಪ್ರತಿಭಾವಂತ ಗಾಯಕರಾಗಿ ಹೊರ ಹೊಮ್ಮಿದ್ದಾರೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹಳ್ಳಿಯೊಂದರಲ್ಲಿ ಜನಿಸಿದ ವಿಜಯಲಕ್ಷ್ಮಿ ಹಿರೇಮಠ ಅವರಿಗೆಬಾಲ್ಯದಿಂದಲೇ ಗಾಯನ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು ಬಡತನದ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶ ದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಇವರಿಗೆ ಸರಿಯಾದ ಅವಕಾಶ ದೊರೆಯಲಿಲ್ಲ ನಂತರದ ದಿನಗಳಲ್ಲಿ ಗಂಗಾವತಿಗೆ ಬಂದಾಗ ಇವರ ಗಾಯನದ ಪ್ರತಿಭೆಯನ್ನು ಗುರುತಿಸಿ , ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾದ ಭಾರತಿ ಅಗಲೂರವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು ಗಾಯನ ಕ್ಷೇತ್ರಕ್ಕೆ ಪರಿಚಯ ಮಾಡಿದವರು ಶ್ರೀಮತಿ ಲಲಿತಾ ಭೀಮೇಶ್ ಚಲವಾದಿ ಇದಾದ ನಂತರದ ದಿನಗಳಲ್ಲಿ ಶ್ರೀಮತಿ ವಿಶಾಲಾಕ್ಷಿ ಹೊಸಪೇಟೆಯವರು ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಅವರನ್ನು ಕರ್ನಾಟಕ ರಾಜ್ಯಕ್ಕೆ ಪರಿಚಯಿಸಿದರು,, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯ ಸದಸ್ಯರು ಆಗಿರುವ ಕಿಸ್ಕಿಂದವಾಣಿಯ ಸಂಪಾದಕರಾದ ಕೆ ನಿಂಗಜ್ಜ ನಗರಸಭೆಯ ಮಾಜಿ ಸದಸ್ಯರಾದ ಸಂಗಮ ಆರ್ ಕಣ್ಣನ್ ಪತ್ರಕರ್ತ ಡಾಕ್ಟರ್ ಶರಣಯ್ಯ ಸ್ವಾಮಿ ಕರಡಿಮಠ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯ ನಾಯಕರಾದ ತಿಪ್ಪೇರುದ್ರಸ್ವಾಮಿ ವಕೀಲರು ಗಾಯನ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ ನಂತರ ಗಾಯನ ಕ್ಷೇತ್ರದಲ್ಲಿ ಹಿಂತಿರುಗಿ ನೋಡಿಯೇ ಇಲ್ಲ ಗಾಯನ ಕ್ಷೇತ್ರದಲ್ಲಿ ಇವರ ಸಾಧನೆ ಮುಂದುವರೆದಿದ್ದು ಶ್ರೀ ವಿಜಯ ಮೆಲೋಡಿಸ್ ಎಂಬ ಹೆಸರಿನ ಮೇಲೆ ಸ್ವಂತ ಆರ್ಕೆಸ್ಟ್ರವನ್ನು ಮಾಡಿಕೊಂಡಿದ್ದು ಸುಮಾರು ಏಳು ಎಂಟು ಜನರಿಗೆ ಮೆಲೋಡಿಸ್ ನಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿದ್ದಾರೆ,, ಗಂಗಾವತಿ ತಾಲೂಕಿನ ಕರೋಕೆ ಗಾಯಕ ರಲ್ಲಿ ಮುಂಚೂಣಿ ಗಾಯಕರಾಗಿದ್ದು ವಿಜಯಲಕ್ಷ್ಮಿ ಹಿರೇಮಠ ಅವರು ಗಾಯನ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದ್ದಾರೆ ಇವರ ಗಾಯನ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಕೊಪ್ಪಳದ ಹೈಬ್ರಿಡ್ ನ್ಯೂಸ್ ನವರು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಹಾಗೆಯೇ ರಾಜಧಾನಿ ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ,,,,,, ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವುದಕ್ಕೆ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಗಾಯನ ಕ್ಷೇತ್ರಕ್ಕೆ ಬಂದು ಒಂದು ವರ್ಷವಾಗಿದ್ದು ಈ ಸಮಯದಲ್ಲಿ ಬಹಳಷ್ಟು ಹಾಡುಗಳನ್ನು ಹಾಡಿದ್ದೇನೆ ಬಡ ರೈತ ಕುಟುಂಬದಿಂದ ಬಂದಿರುವ ಬಡತನವನ್ನೇ ಮೆಟ್ಟಿ ನಿಂತು ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಮತ್ತು ಅಭಿನಂದನೆಗೆ ಪಾತ್ರರಾಗುತ್ತಿರುವ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಅವರು ಮಾತನಾಡಿ ಕಠಿಣ ಪರಿಶ್ರಮ ಮತ್ತು ಉತ್ತಮ ಸಂಕಲ್ಪ ಒಂದಿದ್ದರೆ ಸಾಕು , ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುತ್ತಿದ್ದು ಸಾಧನೆ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳನ್ನು ತಿಳಿಸಿದರು ಮಹಿಳೆಯರು ಪ್ರಸ್ತುತ ದಿನಮಾನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸುವುದರ ಮೂಲಕ ತೊಟ್ಟಿಲು ತೂಗುವ ಕೈ ರಾಜ್ಯವನ್ನು ಆಳಬಲ್ಲದು ಎಂಬುದನ್ನು ಸಾಧನೆ ಮಾಡಿದ ನಮ್ಮ ಹಿರಿಯರು ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು ಶ್ರೀ ವಿಜಯ ಮೆಲೋಡಿಸ್ ಸ್ವಂತ ಆರ್ಕೆಸ್ಟ್ರವನ್ನು ಹೊಂದಿರುವ ಇವರು ಮದುವೆ ಸಭೆ ಸಮಾರಂಭಗಳಲ್ಲಿ ತಮ್ಮ ತಂಡದೊಂದಿಗೆ ಉತ್ತಮ ಗಾಯನವನ್ನು ಪ್ರಸ್ತುತಪಡಿಸಿ ದ್ದಾರೆ ಸಾರ್ವಜನಿಕರು ಮೆಲೋಡಿಸ್ ಕಾರ್ಯಕ್ರಮಗಳಿಗಾಗಿ ಈ ನಂಬರಿಗೆ 8123385022 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು
