ಮಕ್ಕಳ ಮನ ತಣಿಸಿದ ಗಂಗಾವತಿ ಟು ಗದಗ ರೈಲು ಪ್ರವಾಸ ಮಹಾನ್ ಕಿಡ್ಸ್ ಶಾಲೆಯ ವಿನೂತನ ಪ್ರವಾಸ ಕಾರ್ಯಕ್ರಮ …

ಗಂಗಾವತಿ.ಜ.08: ಮುಂಜಾವಿನ ಚುಮುಚುಮು ಚಳಿ, ಇಬ್ಬನಿಯ ಮಂಜು ಮುಸುಕಿದ ಬೆಟ್ಟಗಳ ಮಧ್ಯೆ ಆಗತಾನೆ ಉದಯಿಸುತ್ತಿರುವ ಸೂರ್ಯ. ಸೂರ್ಯನ ಹೊಂಗಿರಣದ ಜತೆ ಪಯಣಿಸುತ್ತಿರುವ ರೈಲು. ಹಳಿಗಳ ಪಕ್ಕದ ಹಸಿರು ಹೊಲ, ಗದ್ದೆಗಳಲ್ಲಿ ರೈಲಿನ ಸದ್ದಿಗೆ ಬೆಚ್ಚಿದಂತೆ ಛಂಗನೆ ಜಿಗಿದು ಓಡುತ್ತಿದ್ದ ಜಿಂಕೆಗಳ ಹಿಂಡು, ರೆಕ್ಕೆ ಅಗಲಿಸಿ ಬಾನಂಗಳಕ್ಕೆ ಹಾರುತ್ತಿದ್ದ ನವಿಲುಗಳು, ಕುಪ್ಪಳಿಸುತ್ತಾ ಓಡುತ್ತಿದ್ದ ಕಾಡು ಮೊಲಗಳು, ಇದ್ದಕ್ಕಿದ್ದಂತೆ ರೈಲಿನಲ್ಲಿ ನೂರಾರು ಮಕ್ಕಳ ಹರ್ಷೋದ್ಘಾರ. ಓ,,ನವಿಲು, ಅಲ್ಲಿ,,,ಅಲಿ ಜಿಂಕೆ, ಮೊಲ,ಮೊಲ,, ತಾರಕಕ್ಕೇರಿದ ಚಪ್ಪಾಳೆ, ಕೇಕೆ.ಇಂತಹ ಆಹ್ಲಾದಕರ ದೃಶ್ಯ ಕಂಡು ಬಂದಿದ್ದು ಗಂಗಾವತಿಯಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ರೈಲಿನಲ್ಲಿ. ಸದಾ ಮಕ್ಕಳಿಗೆ ಒಂದಿಲ್ಲೊಂದು ಹೊಸ ಅನುಭೂತಿ ಮೂಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಗಂಗಾವತಿ ನಗರದ ಮಹಾನ್ ಕಿಡ್ಸ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನೇತ್ರಾಜ್ ಅವರು ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಒಂದು ದಿನದ ಗದಗ ಪ್ರವಾಸದ ವೇಳೆ ಕಂಡು ಬಂದ ದೃಶ್ಯಗಳಿವು.ಮಹಾನ್ ಕಿಡ್ಸ್ ಶಾಲೆಯ 5ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗಾಗಿ ಒಂದು ದಿನದ ಗದಗ ಪ್ರವಾಸವನ್ನು ಬುಧವಾರದಂದು ಆಯೋಜಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಬಸ್ ಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆಯ್ಯುವುದು ಸಹಜ. ಆದರೆ ಮಹಾನ್ ಕಿಡ್ಸ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನೇತ್ರಾಜ್ ಅವರು ಸ್ವತಃ ರಿಸ್ಕ್ ತೆಗೆದುಕೊಂಡು ಮಕ್ಕಳಿಗೆ ಭೌತಿಕವಾಗಿ ಪ್ರವಾಸದ ಅನುಭವ ನೀಡಲು ಅಂದಾಜು 160 ಮಕ್ಕಳನ್ನು ರೈಲಿನಲ್ಲಿ ಪಯಣಕ್ಕೆ ಸಿದ್ದರಾಗುತ್ತಾರೆ. ಶಾಲಾ ಶಿಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆಯಾ ಶಿಕ್ಷಕರಿಗೆ ಮಕ್ಕಳ ಜವಾಬ್ದಾರಿ ವಹಿಸುತ್ತಾರೆ. ಶಾಲಾ ಶಿಕ್ಷಕ ವರ್ಗ, ಸಿಬ್ಬಂದಿಗಳ ಶಿಸ್ತುಬದ್ದ ಯೋಜನೆ, ತಾಳ್ಮೆ, ಅಪರಮಿತ ಉತ್ಸಾಹ ಮಕ್ಕಳ ರೈಲು ಪ್ರವಾಸವನ್ನು ಅವಿಸ್ಮರಣೀಯವಾಗಿಸಿತು. ಗದುಗಿನ ರೆಸಾರ್ಟ್ ಒಂದರಲ್ಲಿ ಮಕ್ಕಳಿಗೆ ಉಪಹಾರ, ಊಟ, ಮನೋರಂಜನೆಯ ವ್ಯವಸ್ಥೆ ಮಾಡಲಾಗಿತ್ತು. ಸ್ವಿಮಿಂಗ್ ಪೂಲ್, ವಾಲ್ ಕ್ಲೈಂಬ್, ಮಡ್ ರೇಸ್ ಇನ್ನಿತರ ಮನೋರಂಜಕ ಆಟಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ನಂತರ ಗದುಗಿನ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದ ಮಕ್ಕಳು ವನ್ಯಜೀವಿಗಳ ಗುಣ, ಸ್ವಭಾವ ಹಾಗೂ ಅವುಗಳ ರಕ್ಷಣೆ ಕುರಿತು ಮಾಹಿತಿ ಪಡೆದರು. ಸಂಜೆ ಸೂರ್ಯಾಸ್ತದ ಸಮಯಕ್ಕೆ ಗದುಗಿನಲ್ಲಿ ರೈಲು ಹತ್ತಿದ ಮಕ್ಕಳು ರಾತ್ರಿ ಒಂಬತ್ತಕ್ಕೆ ಗಂಗಾವತಿಗೆ ಬಂದಿಳಿದಾಗ ಆಯಾಸದ ಬದಲಾಗಿ ಕಣ್ಣ ತುಂಬಾ ಸಂತೋಷ ಬೆಳಕು ತುಳುಕುತ್ತಿತ್ತು.ಅಷ್ಟು ಮಕ್ಕಳನ್ನು ರೈಲಿನಲ್ಲಿ ಪ್ರವಾಸಕ್ಕೆ ಕರೆದುಕೊಂಡುಹೋಗಿ ಮಕ್ಕಳಿಗೆ ಹಲವು ರೀತಿಯ ವಿಶೇಷ ಭೌತಿಕ ಅನುಭವ ನೀಡಿ ಸುರಕ್ಷಿತವಾಗಿ ಮರಳಿ ಕರೆ ತಂದ ಮಹಾನ್ ಕಿಡ್ಸ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನೇತ್ರಾಜ್ ಹಾಗೂ ಅವರ ತಂಡದ ಬಗ್ಗೆ ಮಕ್ಕಳ ಪಾಲಕರ ಮುಖದಲ್ಲಿ ಮೆಚ್ಚುಗೆಯ ಮುಗುಳ್ನಗೆ ಕಾಣುತ್ತಿತ್ತು.ಕೋಟ್ಮ ಕ್ಕಳನ್ನು ನಾವು ಬದುಕುವ ಪರಿಸರದಲ್ಲಿ ಸ್ವಚ್ಛಂದವಾಗಿ ಬಿಡಬೇಕು. ಅವರು ಸ್ವ ಅನುಭವದಿಂದ ಕಲಿಯುವಂತಾಗಬೇಕು. ಇವತ್ತಿನ ರೈಲು ಪ್ರವಾಸ ಮಕ್ಕಳಿಗೆ ವಿಶೇಷ ಅನುಭವ ನೀಡಿದೆ. ಪರಿಸರ ಜ್ಞಾನದ ಜತೆಗೆ ಸಂಘಟನೆ, ಸಹಕಾರ, ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದೆ. ನೇತ್ರಾಜ್ ಗುರುವಿನ ಮಠಸಂಸ್ಥಾಪಕ ಅಧ್ಯಕ್ಷರುಮಹಾನ್ ಕಿಡ್ಸ್ ಶಾಲೆ..

