ಶ್ರೀ ಸತ್ಯದೇ ವೇಶ ಭಜನಾ ಮಂಡಳಿಯ 11ನೇ ವಾರ್ಷಿಕೋತ್ಸವ. ಪ್ರಯುಕ್ತ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ.

ಗಂಗಾವತಿ. ನಗರಸಭೆ ವ್ಯಾಪ್ತಿಯ ಶ್ರೀ ಸತ್ಯನಾರಾಯಣ ಪೇಟೆ ಯ ಲ್ಲಿರುವ ಶ್ರೀ ಸತ್ಯ ದೇವೇಶ ಭಜನಾ ಮಂಜಳಿಯ 11ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರದಂದು ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಪರಿವಾರ ದೇವರುಗಳಿಗೆ ಕಾರ್ತಿಕ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಹುಬ್ಬಳ್ಳಿಯಿಂದ ಆಗಮಿಸಿದ ಋ ತ್ತಿಜ್ಜ ರ ತಂಡದವರು ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಭಜನಾ ಮಂಡಳಿಯ ಮುಖ್ಯಸ್ಥ ಶ್ರೀಮತಿ ರಮ ರಂಗಣ್ಣ ದಂಪತಿಗಳು. ಹಾಗೂ ಲಕ್ಷ್ಮಿ ನಾಗೇಶ್ ದಂಪತಿಗಳು ಶ್ರೀನಿವಾಸ ದೇವರ ಹಾಗೂ ಪದ್ಮಾವತಿ ಪರವಾಗಿ ಎದುರು ಗೋ ಳ್ಳುವುದರ ಮೂಲಕ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ಭಜನಾ ಮಂಡಳಿಯ ಎಲ್ಲಾ ದಂಪತಿಗಳಿಗೆ ಮಹಾ ಸಂಕಲ್ಪವನ್ನು ನಡೆಸಲಾಯಿತು. ಇದಕ್ಕೂ ಪೂರ್ವದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಗೆ ಹಾಗೂ ಪರಿವಾರ ದೇವರುಗಳಿಗೆ ಕಾರ್ತಿಕ ದೀಪೋತ್ಸವ ನೆರವೇರಿಸಿ ಮಹಿಳೆಯರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆ ಭಕ್ತಾದಿಗಳು ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಹಾಡು ಕೋಲಾಟ. ನೃತ್ಯಗಳು ಆಕರ್ಷಣೀಯವಾಗಿ ಕಂಡು ಬಂದವು.


