ದಿನಾಂಕ 10 ರಂದು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ…

ಗಂಗಾವತಿ.. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹುಬ್ಬಳ್ಳಿ ಅಂಗ ಸಂಸ್ಥೆಯಾಗಿ ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ ದಿನಾಂಕ 10 ರಂದು ಗಂಗಾವತಿಯ ಭಾರತೀಯ ವೈದ್ಯಕೀಯ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ ಎಂದು ಘೋರ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ವೆಂಕಟೇಶ್ ಜಾದವ್ ದೀಪಾ ರಾಥೋಡ್ ಕಾರಟಗಿ ಪಿ ಲಕ್ಷ್ಮಣ ನಾಯಕ್ ಶಿವಪ್ಪ ಹನುಮಂತಪ್ಪ ಮೇಸ್ತ್ರಿ ಪರಶುರಾಮ್ ಜಾದವ್ ಮಂಜುನಾಥ ಲೋಕೇಶ್ ಹೇಳಿದರು. ಅವರು ಗುರುವಾರದಂದು ಪತ್ರಿಕಾಭಾವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಂಜಾರ ಸಮಾಜಕ್ಕೆ ತನ್ನದೇ ಆದಂತಹ ವೈಶಿಷ್ಟತೆಯನ್ನು ಒಳಗೊಂಡಿದೆ ಕ್ರಿಸ್ತಶಕ ಮೂರನೆಯ ಶತಮಾನದಲ್ಲಿ ಹರಪ್ಪ ಮೊಹೊನ್ ಜೋದಾರರ ನಾಗರಿಕತೆಯಿಂದ ಆರಂಭಗೊಂಡ ಬಂಜಾರ ಸಮಾಜವು ಕ ಲೆ ಸಾಹಿತ್ಯ ಸಂಸ್ಕೃತಿ ಜಾನಪದ ಸೊಗಡಿನ ಭಾಷೆಯನ್ನು ಸಮೃದ್ಧವಾಗಿ ಹೊಂದಿದೆ. ಆದರೆ ಇದಕ್ಕೆ ಇದುವರೆಗೂ ಲಿಪಿ ಇಲ್ಲದೆ ಇರುವುದು ಅತ್ಯಂತ ಖೇದನಿಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ರಾಜ್ಯ ಘಟಕ ಹುಬ್ಬಳ್ಳಿಯ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಂಜಾರ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ಪದಾಧಿಕಾರಿಗಳನ್ನು ನೇಮಕ ಮಾಡಿ ಸಮಾಜದ ಸಂಸ್ಕೃತಿ ಗತವೈಭವವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಲಿಪಿಗಾಗಿ ಮುಂಬರುವ ದಿನಗಳಲ್ಲಿ ನುರಿತ ತಜ್ಞರನ್ನು ಆಹ್ವಾನಿಸಿ ಚಿಂತನ ಮಂಥನ ನಡೆಸಲಾಗುತ್ತದೆ. ಆಧುನಿಕ ಭರಾಟೆಯಲ್ಲಿ ಬಂಜಾರ ಸಮಾಜದ ಜನಪದ ಸೊಗಡು ಕಣ್ಮರೆ ಆಗುತ್ತಿರುವುದು ದೊಡ್ಡ ದುರಂತವಾಗಿದೆ. ಎಂದು ತಿಳಿಸಿದ ಗಂಗಾವತಿ ಗೋರ ಸೇನಾ ಸಮಿತಿಯ ಮುಖ್ಯಸ್ಥರು ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ತಿಪ್ಪೇಸ್ವಾಮಿ ಶ್ರೀ ಗುರು ಗೋಸಾಯಿ ಭಾವ ಕೊಪ್ಪಳ ವಯಸ್ಸಲ್ಲಿದ್ದು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅಧ್ಯಕ್ಷತೆ ವಹಿಸುವುದು ಉದ್ಘಾಟನೆಯನ್ನು ಸಚಿವ ಶಿವರಾಜ್ ಎಸ್ ತಂಗಡಗಿ ನೆರವೇರಿಸಲಿದ್ದು ಶಿಕ್ಷಕ ಕವಿ ಚಿಂತಕ ಚತ್ರಪ್ಪ ತಂಬೂರಿ ಅವರ ನೂತನ ಕವನ ಸಂಕಲನವನ್ನು ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯಕ್ ಬಿಡುಗಡೆ ಗೊಳಿಸುವರು. ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವಾಧ್ಯಕ್ಷ ಪಿಕೆ ಖಂಡೋಬಾ ಸೇರಿದಂತೆ ಮಾಜಿ ಶಾಸಕರು ಮಾಜಿ ವಿಧಾನ ಪರಿಷತ್ ಸದಸ್ಯರು ರಾಜ್ಯದ ನಾನಾ ಭಾಗಗಳಿಂದ ಬಂಜಾರ ಸಮಾಜದ ಮುಖಂಡರುಗಳು ಭಾಗವಹಿಸುವವರು ಎಂದು ಹೇಳಿದರು…
