ಭರತ್‌ರೆಡ್ಡಿ ಬಂಧನಕ್ಕೆ ಬಿಜೆಪಿ ಪಕ್ಷದ ಯುವ ಮುಖಂಡ ದುರಗೇಶ ಅಕ್ಕಿರೊಟ್ಟಿ ಒತ್ತಾಯ..

ಗಂಗಾವತಿ : 07 ನಾರ ನಂತಹ ಕ್ರಿಮಿನಲ್‌ಗಳು ನೂರುಜನ ಸೇರಿ ಷಡ್ಯಂತ್ರ ರೂಪಿಸಿದರೂ ಗಾಲಿ ಜನಾರ್ದನರೆಡ್ಡಿಗೆ ಯಾವುದೇ ತೊಂದರೆಯಾಗದು ಗಂಗಾವತಿ ಮತಕ್ಷೇತ್ರದ ಜನ ಆಶೀರ್ವಾದ ಇರುವವರೆಗೂ ರೆಡ್ಡಿ ಅವರನ್ನು ಯಾರೊ ಏನು ಮಾಡಿಕೊಳ್ಳಲಾಗದು ಎಂದು ಮಾಜಿ ನಗರ ಯೋಜನ ಪ್ರಾಧಿಕಾರ ಸದಸ್ಯ ದುರಗೇಶ ಅಕ್ಕಿರೊಟ್ಟಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾರಾ ಭರತ್ ರೆಡ್ಡಿಯ ಅಹಂಕಾರ ಹೆಚ್ಚಾಗಿದೆ. ಅಧಿಕಾರದ ಮದ ಹಣದ ದರ್ಪ ತಲೆಗೆ ಏರಿದೆ. ಇದಕ್ಕೆ ಸ್ವತಃ ಬಳ್ಳಾರಿ ಜನರೇ ಸೂಕ್ತ ಕಾಲದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಭರತ್ ರೆಡ್ಡಿ ತೆಲೆಗೆ ಏರಿರುವ ಆಹಂಕಾರ ಮುರಿಯಲು ಬಳ್ಳಾರಿಯ ಸಮಸ್ತ ಜನ ಮುಂದಾಗಬೇಕು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಭರತ್ ರೆಡ್ಡಿಗೆ ತಕ್ಕ ಪಾಠ ಕಲಿಸುತ್ತೇವೆ. ಆಡಳಿತ ರೂಢ ಸರ್ಕಾರದ ಶಾಸಕನಾಗಿ ಅಧಿಕಾರದ ಮದದಿಂದ ವರ್ತಿಸಿದ ರೀತಿ ಇಡೀ ರಾಜ್ಯದ ಜನತೆ ನೋಡಿದ್ದಾರೆ.
ಶಾಸಕ ಗಾಲಿ ಜನಾರ್ದನ್ ರೆಡ್ಡಿ ಮನೆಯ ಮುಂದೆ ಗಲಭೆ ಎಬ್ಬಿಸುವ ಮೂಲಕ ಅದನ್ನು ರಾಜಕೀಯ ದಾಳವಾಗಿ ಮಾಡಿಕೊಂಡು ಬಿಜೆಪಿ ನಾಯಕರನ್ನು ಹತ್ತಿಕ್ಕುವ ಕುತಂತ್ರ ಭರತ್ ರೆಡ್ಡಿ ಮಾಡಿದ್ದ. ಈ ಘಟನೆಯಲ್ಲಿ ಅಮಾಯಕನಾಗಿದ್ದ ಸ್ವತಃ ತನ್ನದೇ ಪಕ್ಷದ ಕಾರ್ಯಕರ್ತನನ್ನು ಭರತ್‌ರೆಡ್ಡಿ ಕಳಿಸಿದ್ದಾನೆ.
ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಶೂಟೌಟ್‌ನಂತ ಸಂಸ್ಕೃತಿಗೆ ನಾಂದಿ ಹಾಡಿರುವ ಶಾಸಕನ ರೂಪದಲ್ಲಿರುವ ಭಯೋತ್ಪಾದಕ ಭರತ್ ರೆಡ್ಡಿ ಯನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ಪಕ್ಷದ ಯುವ ಮುಖಂಡ ನಗರ ಯೋಜನೆ ಪ್ರಾಧಿಕಾರ ಮಾಜಿ ಸದಸ್ಯ ದುರಗೇಶ ಅಕ್ಕಿರೊಟ್ಟಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
