ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ 14 ನೇ ವರ್ಷದ ಶಾಲಾ ವಾರ್ಷಿಕೋತ್ಸವ,ಹಾಗೂ ಗ್ರ್ಯಾಜುವೆಷನ್ ಡೇ ಕಾರ್ಯಕ್ರಮ…

ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ 14 ನೇ ವರ್ಷದ ಶಾಲಾ ವಾರ್ಷಿಕೋತ್ಸವ,ಹಾಗೂ ಗ್ರ್ಯಾಜುವೆಷನ್ ಡೇ ಕಾರ್ಯಕ್ರಮ…

ಗಂಗಾವತಿ : 06 ನಗರದ ಭತ್ತದ ಕಣಜದಲ್ಲೊಂದು ವಿದ್ಯಾಕಣಜ ರಾಘವೇಂದ್ರ ಎಜುಕೇಶನ್ ಟ್ರಸ್ಟ್ ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ 14ನೇ ವರ್ಷದ ಶಾಲಾ ವಾರ್ಷಿಕೋತ್ಸವ ಮತ್ತು ಮಾತೃ ವಂದನಾ ಕಾರ್ಯಕ್ರಮ ಜರುಗಿತು, ಮೊದಲಿಗೆ ವಿದ್ಯಾ ದೇವತೆ ಸರಸ್ವತಿ ದೇವಿ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ಶ್ರೀ ರಾಘವೇಂದ್ರಸ್ವಾಮಿಜ್ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.ನಂತರ ಮಕ್ಕಳಿಂದ ತಂದೆ ತಾಯಿಗೆ ಪಾದ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇತಿಹಾಸ ಸಂಶೋಧಕರಾದ ಡಾ.ಶರಬಸಪ್ಪ ಕೊಲ್ಕರ್ ಅವರು ಎಲ್ಲಾ ಮಕ್ಕಳು ಗುರುಗಳಿಗೆ ಮತ್ತು ತಂದೆ ತಾಯಿ ಹತ್ತಿರ ಗೌರವದಿಂದ ಕಾಣುವುದರ ಜೊತೆಗೆ ಅವರ ಮಾತುಗಳು ಚಾಚು ತಪದೇ ಪಾಲಿಸಬೇಕು ಅದರ ಜೊತೆಗೆ ಈ ಸಂಸ್ಥೆಯ ಗುರುಗಳೆ ಗೌರವಕೊಡುವ ಮೂಲಕ ಮುಂದಿನ ದಿನಗಳಲ್ಲಿ ಒಳ್ಳೆಯ ವೃತಿಯನ್ನು ಪಡೆದು ನಿಮ್ಮ ತಂದೆ ತಾಯಿ ಮತ್ತು ನಿಮಗೆ ವಿದ್ಯಾ ಕಲಿಸಿದ ಗುರುಗಳಿಗೆ ಒಳ್ಳೆಯ ಗೌರವ ತರಬೇಕೆಂದು ಮಕ್ಕಳಿಗೆ ತಿಳಿಸಿದರು, ಸಾಯಂಕಾಲ 5:40 ಕ್ಕೆ ಮಕ್ಕಳಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು, ಮಕ್ಕಳು ವಿವಿಧ ಪಾತ್ರದಲ್ಲಿ ಕಿರು ನಾಟಕ ಮತ್ತು ನೃತ್ಯ, ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿದರು,

ಈ ಸಂಧರ್ಭದಲ್ಲಿ : ಶಾಲೆಯ ಸಂಸ್ಥಾಪಕರಾದ ಎಸ್.ಪವನಕುಮಾರ,ಕಾರ್ಯದರ್ಶಿ ಅಲ್ಲಮ ಪ್ರಭು ವಸ್ತ್ರದ,ಸಂಸ್ಥೆಯ ಖಜಾಂಚಿ ಗಾಯಿತ್ರಿ ಕುಲಕರ್ಣಿ, ವಿಶೇಷ ಉಪನ್ಯಾಸಕಿ ಅರ್ಚನ ಹಿರೇಮಠ, ಪ್ರಾಚಾರ್ಯರಾದ ಜಯಾ ವೈದ್ಯ, ವಿದ್ಯಾರ್ಥಿ ಪಾಲಕರಾದ ದುರಗೇಶ ಅಕ್ಲಿರೊಟ್ಡಿ,ಡ್ಯಾನ್ಸ್ ಮಾಸ್ಟರ್ ನಾಗರಾಜ ಡಿ.ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಮಕ್ಕಳು, ಪೋಷಕರು, ಸರ್ವ ಸೇವಾ ಬಳಗದವರು ಇದ್ದರು.

Leave a Reply

Your email address will not be published. Required fields are marked *