ಲೋಕಕಲ್ಯಾಣಕ್ಕಾಗಿ ತುಳುಜಾ ಭವಾನಿ ದೇವಸ್ಥಾನದಲ್ಲಿ ಶ್ರದ್ಧೆಯಿಂದ ಹೋಮ ಹವನ..

ಲೋಕಕಲ್ಯಾಣಕ್ಕಾಗಿ ತುಳುಜಾ ಭವಾನಿ ದೇವಸ್ಥಾನದಲ್ಲಿ ಶ್ರದ್ಧೆಯಿಂದ ಹೋಮ ಹವನ..

ಬಳ್ಳಾರಿ / ಕಂಪ್ಲಿ : ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯಲ್ಲಿರುವ ಆರಾಧ್ಯ ದೇವತೆ ಶ್ರೀ ತುಳುಜಾ ಭವಾನಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಶಾಂತಿ ಹೋಮ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶುಕ್ರವಾರ ನೆರವೇರಿದವು. ಬೆಳಿಗ್ಗೆಯಿಂದ ಹೋಮ ಹವನ, ಮಹಾಮಂಗಳಾರತಿ, ಅಲಂಕಾರ ಸೇರಿದಂತೆ ಪೂಜೆ ಪುನಸ್ಕಾರಗಳು ಜರುಗಿದವು. ಇಲ್ಲಿನ ಜನರು ನೈವೇದ್ಯ, ಕಾಯಿ, ಕರ್ಪೂರ, ಹೂವು ಅರ್ಪಿಸಿ, ದೇವಿಯ ಆಶೀರ್ವಾದ ಪಡೆದರು. ಶಾಸಕ ಜೆ.ಎನ್.ಗಣೇಶ ಇವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇವಾನು ದೇವತೆಗಳನ್ನು ಆರಾಧಿಸಿದರೆ, ಇಷ್ಟಾರ್ಥಗಳು ನೆಲೆಸುವ ಜೊತೆಗೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಹೊಂದಲು ಸಾಧ್ಯ. ಉದಾಹರಣೆಗೆ ಇಲ್ಲಿನ ಕಾಲೋನಿಯಲ್ಲಿ ನೆಲೆಸಿರುವ ಜನರು ಸಾಕಷ್ಟು ಬದಲಾವಣೆಯೊಂದಿಗೆ ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಬೆಂಗಳೂರು ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಬಿ.ಎಸ್.ಸುಧಾಕರ ಮಾತನಾಡಿ, ಈ ಹಿಂದೆ ಇಲ್ಲಿನ ಶಿಕಾರಿ ಕಾಲೋನಿಯಲ್ಲಿ ನೆಲೆಸಿರುವ ಜನರು ಸಂಕಷ್ಟದೊಂದಿಗೆ ದುಶ್ಚಟಗಳಲ್ಲಿ ತೊಡಗಿಕೊಂಡಿದ್ದರು. ಆದ್ದರಿಂದ ಇಲ್ಲಿನ ಪರಿವರ್ತನೆಯೊಂದಿಗೆ ಬದಲಾವಣೆ ಮಾಡಬೇಕೆಂಬ ಹಿನ್ನಲೆ ತುಳುಜಾ ಭವಾನಿ ದೇವಸ್ಥಾನ ನಿರ್ಮಿಸಲಾಯಿತು. ಇದರಿಂದ ಈಗ ಇಲ್ಲಿನ ಜನರು ಸಾಕಷ್ಟು ಪರಿವರ್ತನೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದರ. ನಂತರ ಮುಖಂಡ ಹೆಚ್.ಪಿ.ಶಿಕಾರಿ ರಾಮು ಮಾತನಾಡಿ, ಬಿ.ಎಸ್.ಸುಧಾಕರ್ ಅವರು ಈ ಹಿಂದೆ ಕಂಪ್ಲಿಗೆ ಪಿಎಸ್‌ಐ ಆಗಿ ಬಂದಾಗ, ಇಲ್ಲಿನ ಜನರ ಅಸಹಾಯಕತೆ, ಕಾನೂನು ಬಾಹಿರ ಕೆಲಸಗಳನ್ನು ಗುರುತಿಸಿ, ಕಾಲೋನಿಯ ಪರಿವರ್ತನೆಯ ಉದ್ದೇಶದಿಂದ ದೇವಸ್ಥಾನ ನಿರ್ಮಿಸಿದರು. ನಂತರ ಇಡೀ ಕಾಲೋನಿಯನ್ನು ಪರಿವರ್ತಿಸಿದ್ದಾರೆ. ಇಂದಿನ ದಿನದಲ್ಲಿ ಪಿಎಚ್‌ಡಿ, ಎಲ್‌ಎಲ್‌ಬಿ ಮಾಡುತ್ತಿದ್ದಾರೆ. ಲೋಕಕಲ್ಯಾಣಕ್ಕಾಗಿ ಶಾಂತಿ ನೆಲೆಸಲೆಂದು ಇಲ್ಲಿನ ತುಳುಜಾ ಭವಾನಿ ದೇವಸ್ಥಾನದಲ್ಲಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ನಡೆಸಲಾಯಿತು ಎಂದರು. ನಂತರ ಬೆಂಗಳೂರು ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಬಿ.ಎಸ್.ಸುಧಾಕರ ಹಾಗೂ ದಂಪತಿಗಳಿಗೆ ಮತ್ತು ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಬಿ.ನಾರಾಯಣಪ್ಪ, ಎಂ.ಸುಧೀರ್, ಬಿ.ಸಿದ್ದಪ್ಪ, ಜಿ.ಜಿ.ಚಂದ್ರಣ್ಣ, ನಾಗೇಂದ್ರ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *