ಕೊಲೆ ಪ್ರಕರಣ ಮಾಸುವ ಮುನ್ನವೇ ಕತ್ತು ಕೊಯ್ದು ಮತ್ತೊಬ್ಬ ಮಹಿಳೆಯ ಕೊಲೆವಿ…

ಕೊಲೆ ಪ್ರಕರಣ ಮಾಸುವ ಮುನ್ನವೇ ಕತ್ತು ಕೊಯ್ದು ಮತ್ತೊಬ್ಬ ಮಹಿಳೆಯ ಕೊಲೆವಿ…

ಜಯನಗರ / ಹೊಸಪೇಟೆ : ಹೊಸಪೇಟೆ: ತಾಲೂಕಿನ ಕಮಲಾಪುರ ಸಮೀಪದವೆಂಕಟಾಪುರ ಕ್ಯಾಂಪಿನಲ್ಲಿ ನಡೆದ ವಿವಾಹಿತೆ ಮಹಿಳೆಯ ಕೊಲೆ ಪ್ರಕರಣ ಮಾಸುವ ಮುನ್ನವೇ ನಗರದ ಚಾಪಲಗಡ್ಡ ಪ್ರದೇಶದಲ್ಲಿ ಮತ್ತೊಬ್ಬ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.ನಗರದ ರೈಲ್ವೆ ಸ್ಟೇಶನ್ ರಸ್ತೆಯಲ್ಲಿರುವ ಚಾಲಗಡ್ಡೆ ಪ್ರದೇಶದ ನಿವಾಸಿ ಉಮಾ (35) ಕೊಲೆಯಾದ ಮಹಿಳೆ.ಆಂಧ್ರ ಪ್ರದೇಶದ ಮೂಲದ ರಘು ಅಲಿಯಾಸ್ ರಾಮಾಂಜನಿ ಎಂಬ ವ್ಯಕ್ತಿಯೊಂದಿಗೆ ಕಳೆದ 13 ವರ್ಷಗಳ ಹಿಂದೆ ಉಮಾಳ ವಿವಾಹವಾಗಿ, ದಂಪತಿಗೆ ಮೂರು ಮಕ್ಕಳು ಇದ್ದರು. ಕಳೆದ 6 ವರ್ಷಗಳಿಂದ ಪತಿಯಿಂದ ಉಮಾ ದೂರವಾಗಿ ಚಾಪಲಗಡ್ಡೆಯಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ಖಾಜಾ ಹುಸೇನ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು ಎನ್ನಲಾಗಿದೆ. ಈ ಪ್ರಕರಣ ಕುರಿತಂತೆ ಖಾಜಾ ಹುಸೇನ್ ಎಂಬ ವ್ಯಕ್ತಿಯನ್ನು ಚಿತ್ತವಾಡ್ಲಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಎಸ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಂಜುನಾಥ್ ಹಾಗೂ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *