ಅಗಡಿ ಸಂಗಣ್ಣ ಕ್ಯಾಂ ಪಿ ನ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ…. ಭಕ್ತ ಕುರುಗೋಡು ಮಂಜುನಾಥಗೆ ಆಶೀರ್ವಾದ …

ಗಂಗಾವತಿ… ಬಣದ ಹುಣ್ಣಿಮೆಯ ಪ್ರಯುಕ್ತ ಅಗಡಿ ಸಂಗಣ್ಣ ಕ್ಯಾಪಿನಲ್ಲಿರುವ. ಶ್ರೀ ರೇಣುಕಾ ದೇವಿ ಯಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ರೇಣುಕಾ ಹಾಗೂ ಎಲ್ಲಮ್ಮ ದೇವಿಯವರಿಗೆ ಅಭಿಷೇಕ. ಕುಂಕುಮಾರ್ಚನೆ.ಉಡಿ ತುಂಬುವಿಕೆ ಯರ್ರೀ ಸ್ವಾಮಿ ತಾತನವರಿಗೆ ತೊಟ್ಟಿಲು ಉತ್ಸವ ಸೇರಿದಂತೆ ಬರ್ತಿದ್ದಾರೆ ಪೂಜಾ ಕಾರ್ಯಕ್ರಮಗಳನ್ನು. ದೇವಸ್ಥಾನದ ಮಾತೆ ಗಂಗಮ್ಮ ತಾಯಿ ನೆರೆವೇರಿಸಿದರು. ಇದೇ ಸಂದರ್ಭದಲ್ಲಿ ಭಕ್ತಾದಿಗಳಿಗೆ ದಾಸೋಹ ಕಾರ್ಯಕ್ರಮ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿರುವ ಬಸವರಾಜ ರಾಮತ್ನಾಳ ಅವರ ನೇತೃತ್ವದಲ್ಲಿ ನಡೆಯಿತು,,,,,

ಮಾತೋಶ್ರೀ ಯವರಾದ ಗಂಗಮ್ಮ ತಾಯಿಯವರ ಸನ್ನಿಧಾನದಲ್ಲಿ ಕಾರ್ಯಕ್ರಮ ನಡೆದಿದ್ದು ಹುಣ್ಣಿಮೆಯ ಪ್ರಯುಕ್ತ ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದು ಬಂದಿತು,, ಇದೆ ವೇಳೆ ವಾಸ್ತು ಕ್ಷೇತ್ರದಲ್ಲಿ ಸಾಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದಿರುವ ಡಾಕ್ಟರ್ ಮಂಜುನಾಥ್ ಬಸಣ್ಣ ಕುರುಗೋಡು ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಆಶೀರ್ವದಿಸಿದರು ದೇವಸ್ಥಾನ ಸಮಿತಿಯ ಪ್ರಮುಖ ರಾಗಿರುವ ಸಿಬಿಎಸ್ ಅಶೋಕ್ ಗೌಡ ವಡೇರಹಟ್ಟಿ ವೀರೇಶ್,,,ಮಲ್ಲೇಶಪ್ಪ ಹಿರೇಗೌಡರ, ಚೆನ್ನಪ್ಪ ಕುರುಗೋಡು ಬಸವರಾಜ್ ಕುರುಗೋಡು ತಿಪ್ಪಣ್ಣ ಶಾವಿಯವರು ವಸಂತಕುಮಾರ ಅಮರೇಶಪ್ಪ ಇಂಗಳಗಿ ಹಾಗೂ ಹಿರಿಯ ನ್ಯಾಯವಾದಿಗಳಾಗಿರುವ ಸೋಮನಾಥ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಗಣ್ಯಮಾನ್ಯರು ಪಾಲ್ಗೊಂಡಿ ದ್ದರು.

