ಗಂಗಾವತಿ-ದರೋಜಿ ರೈಲ್ವೆ ಸಂಪರ್ಕಕ್ಕೆ ಅನುದಾನ ಬಿಡುಗಡೆಗೊಳಿಸಲು ಮನವಿ.

ಗಂಗಾವತಿ-ದರೋಜಿ ರೈಲ್ವೆ ಸಂಪರ್ಕಕ್ಕೆ ಅನುದಾನ ಬಿಡುಗಡೆಗೊಳಿಸಲು ಮನವಿ.

ಕಂಪ್ಲಿ : ಗಂಗಾವತಿ-ದರೋಜಿ ವಯಾ ಕಂಪ್ಲಿ ಮಾರ್ಗವಾಗಿ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಸಂಪರ್ಕ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ, ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸೋಮವಾರ ತೋರಣಗಲ್ಲಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೈಲ್ವೆ ನಿಲ್ದಾಣದಿಂದ ಗಂಗಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ನೂತನ ಬ್ರಾಡ್‌ಗೇಜ್ ರೈಲ್ವೆ ಲೈನ್ ನಿರ್ಮಾಣಕ್ಕೆ ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಈ ನೂತನ ಬ್ರಾಡ್‌ಗೇಜ್ ರೈಲ್ವೆ ಲೈನ್ 31.30 ಕಿ.ಮಿ ಕಾಮಗಾರಿಯ ಅಂದಾಜು ವೆಚ್ಚ ರೂ.919.49 ಕೋಟಿ ಹಣ ಎಂದು ನಿಗದಿ ಪಡಿಸಲಾಗಿದೆ. ನಿಗದಿಗೊಳಿಸಿ ವರ್ಷದ ಮೇಲಾಗುತ್ತ ಬಂದಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೊಳ್ಳದೆ ಸಮೀಕ್ಷೆ ನಂತರದ ಪ್ರಕ್ರಿಯೆ ಸ್ತಬ್ಧವಾಗಿದೆ. ಈ ಭಾಗದ ರೈತರು, ವರ್ತಕರು, ಪ್ರಯಾಣಿಕರಿಗೆ ರೈಲ್ವೆ ಸಂಪರ್ಕ ಅಗತ್ಯವಿದೆ. ದಯಮಾಡಿ ಕೂಡಲೇ ಅನುದಾನ ಬಿಡುಗಡೆಗೊಳಿಸಿ ರೈಲ್ವೆ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಸಮಿತಿಯ ಕಾರ್ಯದರ್ಶಿ ಹಾದಿಮನಿ ಕಾಳಿಂಗವರ್ಧನ, ನಿರ್ದೇಶಕ ಅಯ್ಯೋದಿ ವೆಂಕಟೇಶ, ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ ಸೇರಿ ಇತರರಿದ್ದರು.ಪೋಟೋ:ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತೋರಣಗಲ್ಲಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪದಾಧಿಕಾರಿಗಳಾದ ಹಾದಿಮನಿ ಕಾಳಿಂಗವರ್ಧನ, ಅಯ್ಯೋದಿ ವೆಂಕಟೇಶ, ಪ್ರಮುಖರಾದ ಜಿ.ಸೋಮಶೇಖರರೆಡ್ಡಿ, ಅನಿಲ್‌ಕುಮಾರ್ ಮೋಕ ಇತರರಿದ್ದರು.ಪೋಟೋ:ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತೋರಣಗಲ್ಲಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರೊಂದಿಗೆ ಚರ್ಚಿಸಿದರು. ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪದಾಧಿಕಾರಿಗಳಾದ ಹಾದಿಮನಿ ಕಾಳಿಂಗವರ್ಧನ, ಅಯ್ಯೋದಿ ವೆಂಕಟೇಶ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *