ಭೂ ನ್ಯಾಯ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ.

ಬಳ್ಳಾರಿ / ಕಂಪ್ಲಿ: ಭೂ ನ್ಯಾಯ ಮಂಡಳಿಯ ಅಧಿಕೇತರ ಸದಸ್ಯರನ್ನು ಕಂಪ್ಲಿ ತಾಲೂಕಿನ ನಾಲ್ಕು ಜನರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಬಳ್ಳಾಪುರ ವಿ.ಶೇಕ್ಷಾವಲಿ(ಮೌನೇಶ), ಕಂಪ್ಲಿ ಪಟ್ಟಣದ ಎನ್.ಮೋಹನ್, ಎಂ. ನವೀನ್ ಗೌಡ, ಹಂಪದೇವನಹಳ್ಳಿಯ ಯು. ಗುರುಮೂರ್ತಿ ಇವರನ್ನು ರಾಜ್ಯಪಾಲರ ಆದೇಶದ ಮೇರೆಗೆ ಕಂದಾಯ ಇಲಾಖೆ(ಭೂ ಸುಧಾರಣೆ)ಯ ಸರ್ಕಾರದ ಆಧೀನ ಕಾರ್ಯದರ್ಶಿ ಗೌರಮ್ಮ ಇವರು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದ್ದಾರೆ. ನಂತರ ನಾಮ ನಿರ್ದೇಶಿತ ಸದಸ್ಯ ವಿ.ಶೇಕ್ಷಾವಲಿ(ಮೌನೇಶ) ಮಾತನಾಡಿ, ಸ್ಥಳೀಯ ಶಾಸಕರಾದ ಜೆ.ಎನ್.ಗಣೇಶ ಅವರ ನಿರ್ದೇಶನದಂತೆ ಭೂನ್ಯಾಯ ಮಂಡಳಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಈ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.ವರದಿ : ಜಿಲಾನಸಾಬ್ ಬಡಿಗೇರ್
