ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡರೆ, ಮುಂದಿನ ಪೀಳಿಗೆ ಮಕ್ಕಳಿಗೆ ಅನುಕೂಲ : ವಿರುಪಾಕ್ಷಿ.

ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡರೆ, ಮುಂದಿನ ಪೀಳಿಗೆ ಮಕ್ಕಳಿಗೆ ಅನುಕೂಲ : ವಿರುಪಾಕ್ಷಿ.

ಬಳ್ಳಾರಿ / ಕಂಪ್ಲಿ : ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡರೆ, ಮುಂದಿನ ಪೀಳಿಗೆಯ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಅವರ ಆಪ್ತ ಸಹಾಯಕ ವಿರುಪಾಕ್ಷಿ ಹೇಳಿದರು. ಕಾರ್ಮಿಕ ಇಲಾಖೆ ವತಿಯಿಂದ ಪಟ್ಟಣದ ಶಾಸಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಎಲ್ಲ ಕಾರ್ಮಿಕ ವರ್ಗಕ್ಕೂ ಸೌಲಭ್ಯ ನೀಡಲಾಗುತ್ತಿದೆ. ಬಡ ಕಾರ್ಮಿಕ ವರ್ಗದ ರಕ್ಷಣೆ ಸರಕಾರದ ಉದ್ದೇಶ. ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿರಲಿಲ್ಲ, ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಬಡವರ್ಗದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೆರವಾಗಲು ರಾಜ್ಯ ಸರ್ಕಾರ ಕಿಟ್ ನೀಡುತ್ತಿದೆ. ಸದುಪಯೋಗ ಪಡಿಸಿಕೊಳ್ಳಬೇಕು’. ಸರ್ಕಾರ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಕಿಟ್ ನೀಡುತ್ತಿದೆ. ಸರಕಾರ ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸರಕಾರದ ಪ್ರತಿಯೊಂದು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಸಂತಸದ ವಿಚಾರ’’ ಎಂದರು.ಕಾರ್ಮಿಕ ಇಲಾಖೆಯ ನಿರೀಕ್ಷಕ ಶಿವಶಂಕರ್ ತಳವಾರ್ ಮಾತನಾಡಿ, ಮಾನ್ಯ ಶಾಸಕರ ನಿರ್ದೇಶನದಂತೆ 150 ಮೇಸ್ತಿç, ಎಲೆಕ್ಟಿçಕಲ್ 40, ಸ್ಲಂಬರ್ 10, ಕಾರ್ಪೇಂಟರ್ 30, ವೆಲ್ಡರ್ 10 ಸೇರಿದಂತೆ ಒಟ್ಟು 270 ಸರುಕ್ಷತಾ ಕಿಟ್ ವಿತರಿಸಲಾಗಿದ್ದು, ಇದರ ಸದುಪಯೋಗದೊಂದಿಗೆ ಕಾರ್ಮಿಕರು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದರು. ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರಗೌಡ ಮಾತನಾಡಿ, ಕಂಪ್ಲಿ ತಾಲೂಕಿನಲ್ಲಿ 6300 ಜನ ಕಾರ್ಮಿಕರಿದ್ದು, ಅಲ್ಪಸ್ವಲ್ಪ ಕಿಟ್ ನೀಡಿದರೆ ಸಮಸ್ಯೆ ತಲೆದೋರುತ್ತದೆ. ಆದ್ದರಿಂದ ಕಿಟ್ ನೀಡಬೇಕಾದರೆ ತಾಲೂಕಿನಲ್ಲಿರುವ ಎಲ್ಲಾ ಕಾರ್ಮಿಕರಿಗೆ ಕಿಟ್ ನೀಡಬೇಕು ಎಂದರು. ತದನಂತರ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಂಪ್ಲಿ ಕಾರ್ಮಿಕರ ನಿರೀಕ್ಷಕರ ಕಛೇರಿ ಕಂಪ್ಯೂಟರ್ ಆಪರೇಟರ್ ವಿಘ್ನೇಶ್, ಸಿಐಟಿಯು ತಾಲೂಕು ಅಧ್ಯಕ್ಷ ಎ.ಹೊನ್ನೂರಸಾಬ್, ಕಾರ್ಯದರ್ಶಿ ನಾಗರಾಜ, ಕಾರ್ಯದರ್ಶಿ ಜಿ.ಸುರೇಶ ಸೇರಿದಂತೆ ಕಾರ್ಮಿಕರಿದ್ದರು. ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *