ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿ: ನಾಗರಾಜ್ ಇಂಗಳಗಿ….

ಗುಂಡಮ್ಮ ಕ್ಯಾಂಪ್‌ನಲ್ಲಿ ಬುಡ್ಡೆಕಲ್ಲು ಪೂಜೆ, ದೇವಶಟ್ಟಿಗೆ ಸನ್ಮಾನನಿರಂತರ ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿ: ನಾಗರಾಜ್ ಇಂಗಳಗಿ….

ಗಂಗಾವತಿ: ಉಂಡುಟ್ಟು, ಪಾಲನೆ ಪೋಷಣೆಗೆ ಅಗತ್ಯ ಆರ್ಥಿಕ ಶಕ್ತಿ ಮಿಕ್ಕಿದ ಹಣ ಸಾರ್ವಜನಿಕ ಸೇವೆಗಾಗಿ ಮೀಡಲಿಟ್ಟು ತೊಡಗಿಸಿಕೊಳ್ಳುವುದರಿಂದ ಆತ್ಮತೃಪ್ತಿ ಲಭಿಸುತ್ತದೆ ಎಂದು ಚಲನಚಿತ್ರ ನಟ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.ಅವರು ನಗರದ ಗುಂಡಮ್ಮ ಕ್ಯಾಂಪಿನಲ್ಲಿ (ಮುರಹರಿನಗರ) ನಾಗರೀಕರು ನೆರವೇರಿಸಿದ ಬುಡ್ಡೆಕಲ್ಲು ಪ್ರತಿಷ್ಠಾಪನಾ ಪೂಜೆ ಹಾಗು ಸಮಾಜ ಸೇವಕ ಪ್ರದೀಪ್ ಗೌಡ ದೇವಶೆಟ್ಟಿ ಇವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸೇವೆ ಯಾವುದೇ ರೂಪದಲ್ಲಿ ಮಾಡಿದರು ಅದು ಮನುಷ್ಯನ ಗೌರವವನ್ನು ಹೆಚ್ಚಿಸುತ್ತದೆ. ನಗರಸಭೆ ಮಾಡಬೇಕಾದ ಕಾರ್ಯವನ್ನು ಪ್ರದೀಪ್‌ಗೌಡ ದೇವಶೆಟ್ಟಿ ಮಾಡಿದ್ದು, ನಗರದ ಕಸ ಹಾಕುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಾರ್ವಜನಿರು ಕುಡಿಯುವುದಕ್ಕಾಗಿ ನೀರಿನ ಅರವಟಿಗೆ ಇಡುವ ಮೂಲಕ ಜನ ಜಾಗೃತಿಯ ಜತೆಗೆ ಜನರ ದಾಹ ತಣಿಸುವ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಶ್ರೀ ಬೂದಿಬಸವೇಶ್ವರ ಡಯಗ್ನೋಸ್ಟಿಕ್ಸ್ ಸೆಂಟರ್‌ನ ಮಾಲಿಕರು ಹಾಗು ಸಮಾಜ ಸೇವಕರ ಪ್ರದೀಪ್‌ಗೌಡ ದೇವಶೆಟ್ಟಿ ಮಾತನಾಡಿ, ನಮ್ಮ ಪ್ರತಿಯೊಬ್ಬರು ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡರೆ, ಓಣಿ, ನಗರ, ತಾಲೂಕು, ಜಿಲ್ಲೆ, ರಾಜ್ಯ ಹಾಗು ದೇಶ ಸ್ವಚ್ಛವಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಪ್ರದಾನಿ ಮೋದಿಯವರ ಸ್ವಚ್ಛಭಾರತ ಮಿಷನ್ ಸಾಕಾರಗೊಳ್ಳಲಿದೆ. ಆರೋಗ್ಯ ಕಾಪಾಡಿಕೊಳ್ಳಲು, ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಗಳಿಕೆಯ ಕೆಲವಷ್ಟು ಭಾಗ ಸಮಾಜಕ್ಕಾಗಿ ವಿನಿಯೋಗಿಸಬೇಕಿದ್ದು, ಪರಸ್ಪರ ಸಹಕಾರದಿಂದ ಸದೃಢ ದೇಶ ಕಟ್ಟಲು ಮುಂದಾಗಬೇಕಿದೆ ಎಂದರು.ಹಿರಿಯ ಪತ್ರಕರ್ತ ಪಿ.ದಶರಥ ಮಾತನಾಡಿ, ಶ್ರೀ ಬೂದಿಬಸವೇಶ್ವರ ಡಯಗ್ನೋಷ್ಟಿಕ್ಸ್ ಸೆಂಟರ್ ಮೂಲಕ ವಾರಕ್ಕೆ ಒಂದು ದಿವಸ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನದಲ್ಲಿ ಉಚಿತ ರಕ್ತಪರೀಕ್ಷೆ ಮಾಡುತ್ತಿದ್ದು, ಬಡವರಿಗೆ ತಮ್ಮ ತಪಾಸಣಾ ಸೆಂಟರ್‌ನಲ್ಲಿ ಹಣ ಪಡೆಯದೆ ಸಹಕರಿಸುತ್ತಿದ್ದಾರೆ, ಹಲವಾರು ಸಮಾಜಮುಖಿ ಕಾರ್ಯಗಳ ಮುಖೇನ ಜನರೊಟ್ಟಿಗೆ ಬೆರೆತು ಬದುಕುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಗೌರವಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಹಿರಿಯರಾದ ಬುಕ್ಕಸಾಗರ ನಿಂಗಪ್ಪ, ಕೊಂಡಿ ಯಂಕೋಬಪ್ಪ, ನಳದ ಗೋವಿಂದಪ್ಪ, ಗೋಪಾಲ ಇಂಗಳಗಿ, ರಾಘವೇಂದ್ರ ಹುಲಿಗಿ, ನಾರಾಯಣಪ್ಪ ಎಮ್ಮಿ, ಕಟ್ಟಿಮನಿ ಸಣ್ಣ ಯಂಕಪ್ಪ, ಕೃಷ್ಣ ಬುಕ್ಕಸಾಗರ, ಇಂಗಳಗಿ ಹನುಮಂತಪ್ಪ, ಹನುಮಮ್ಮ ಭೀಮಪ್ಪ ಇತರರಿದ್ದರು.

Leave a Reply

Your email address will not be published. Required fields are marked *