ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಮೀಸಲು ನೀಡುವಂತೆ ಆಗ್ರಹ…

ಗಂಗಾವತಿ. ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅಲೆಮಾರಿ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಪ್ರತ್ಯೇಕವಾಗಿ ಒಂದರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗಿ ಅಧ್ಯಕ್ಷ. ಹಂಪೇಶ್ ಹರಿಗೋಲ್ ಹೇಳಿದರು. ಅವರು ಗುರುವಾರದಂದು ಅವರು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇತ್ತೀಚಿಗಷ್ಟೇ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳಪಂಗಡದ ಮೀಸಲಾತಿಗೆ ಸಂಬಂಧಿಸಿದಂತೆ ಎಡ ಮತ್ತು ಬಲಪಂತ್ಯರಿಗೆ ತಳ ಆರಾದಂತೆ ಒಟ್ಟು 12ರಷ್ಟು ಒಳ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದು ಸ್ವಾಗತದಾಯಕ ಉಳಿದಂತೆ ಐದರಷ್ಟು ಇತರೆ ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಮೀಸಲಾತಿ ಸೌಲಭ್ಯ ಕಲ್ಪಿಸಿದ ಹಿನ್ನೆಲೆಯಲ್ಲಿ ಅಲೆಮಾರಿ ಜನಾಂಗಕ್ಕೆ ಹಾಗೂ ಒಳಪಂಗಡಕ್ಕೆ ಅನ್ಯಾಯವಾಗಿದ್ದು ಶಿಕ್ಷಣ. ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಸಂಕಷ್ಟದಲ್ಲಿರುವ ಈ ಜನಾಂಗಕ್ಕೆ ಮುಖ್ಯಮಂತ್ರಿಗಳು ಪ್ರತ್ಯೇಕವಾದ 1ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬುಡಗ ಜಂಗಮ ತಾಲೂಕ ಅಧ್ಯಕ್ಷ ಕಲ್ಯಾಣಂ ನಾಗರಾಜ್ ಮಾತನಾಡಿ. ಸದಾಶಿವ ಆಯೋಗ ವರದಿ ಹಾಗೂ ನಾಗಮೋಹನ್ ದಾಸ ಅವರ ವರದಿಯಲ್ಲಿ ಅಲೆಮಾರಿ ಜನಾಂಗಕ್ಕೆ ಒಂದಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ವರದಿ ನೀಡಿದರು ಸಹ ಇತರೆ ಪರಿಶಿಷ್ಟ ಜಾತಿಯ ವ್ಯಾಪ್ತಿಗೆ ಒಳಪಡಿಸಿರುವುದು ಖಂಡನಿಯವಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಮಾಜದ ನ್ಯಾಯ ಸಮಿತಿಯ ಅಧ್ಯಕ್ಷ ರಾಮಣ್ಣ ಅಧ್ಯಕ್ಷ . ಕೃಷ್ಣ ಆರ್. ಯಮನೂರಪ್ಪ. ವೆಂಕಣ್ಣ ಯಾದವ್ ಧರ್ಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

